ಯಲಹಂಕದ ಕೋಗಿಲು ರಸ್ತೆಯಲ್ಲಿರುವ
ಆಕ್ಸ್ಫರ್ಡ್ ಆಂಗ್ಲ ಶಾಲೆ ಹಾಗೂ ಸಂಯುಕ್ತ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶನಿವಾರ 6/7/24 ರಂದು
ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗಾಗಿ ಫೇಶ್ರಸ್ ಡೇ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಪ್ರಥಮ ಪಿಯುಸಿಗೆ ಆಗಮಿಸಿದ ಹೊಸ ವಿದ್ಯಾರ್ಥಿಗಳನ್ನು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಆಕ್ಸ್ಫರ್ಡ್ ಕಾಲೇಜಿನ ಆವರಣದೊಳಗೆ ವಿಶೇಷ ಆದರ ಸತ್ಕಾರ ಗಳಿಂದ ಬರಮಾಡಿಕೊಳ್ಳುವುದರ ಮೂಲಕ ಕಾರ್ಯಕ್ರಮ ಆರಂಭವಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಪ್ರಮೀಳ ರಾಜೇಶ್ ಅವರು ಮಾತನಾಡಿ ಪಿ ಯು ಸಿಯು ವಿದ್ಯಾರ್ಥಿಗಳ ಕಲಿಕೆಯ ಮುಖ್ಯಘಟ್ಟವಾಗಿದ್ದು ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ. ಇದರೊಂದಿಗೆ ಶಿಸ್ತು ಹಾಗೂ ಸಮಯ ಪಾಲನೆಯನ್ನು ಕಾಯ್ದುಕೊಂಡರೆ ಉತ್ತಮ ಫಲಿತಾಂಶ ಪಡೆದುಕೊಳ್ಳಬಹುದು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.

ಈ ಕಾರ್ಯಕ್ರಮವನ್ನು ದ್ವಿತೀಯ ಪಿಯುಸಿ
ವಿದ್ಯಾರ್ಥಿ ಗಳಾದ ಕೀರ್ತನ ಹಾಗೂ ಹರ್ಷಿತ ನಡೆಸಿಕೊಟ್ಟರು. ರಮ್ಯಾ ಸ್ವಾಗತವನ್ನು ಕೋರಿದರೆ , ಏಂಜಲ್ ಮೇರಿ ಬೈಬಲ್ ನ ಸುವಾರ್ತೆ ಹಾಗೂ ಮಮತಾ ಶಾಲೆಯ ಕಾಲೇಜಿನ ರೀತಿ ರಿವಾಜುಗಳನ್ನು ಓದಿದರು.
10ನೇ ತರಗತಿ ವಿದ್ಯಾರ್ಥಿ ಗಳು ಪ್ರಾರ್ಥನಾ ಗೀತೆಯನ್ನು ಹಾಡಿದರೆ, ವಂದನಾರ್ಪಣೆಯನ್ನು ಹೇಮಾ ಮಾಡಿದರು.

ಈ ಸಂದರ್ಭದಲ್ಲಿ ಶ್ರೀಮತಿ ಶೋಭಾ
ಶ್ರೀ ಶಶಿಧರ್ ಶ್ರೀಮತಿ ಆಯಿಷಾ ಸುಲ್ತಾನ ಹಾಗೂ ಶ್ರೀಮತಿ ಎ.ವಿ ಚಂದ್ರಕಲಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ವಿವಿಧ ಹಾಡು ನೃತ್ಯ ಗಳಿಂದ ಮನರಂಜಿಸಿದರು .ಅಲ್ಲದೆ ಹೊಸ ವಿದ್ಯಾರ್ಥಿಗಳಿಗೆ ವಿವಿಧ ಆಟಗಳನ್ನು ಸಹ ಏರ್ಪಡಿಸಲಾಗಿತ್ತು.

Leave a Reply

Your email address will not be published. Required fields are marked *