Dr : ನಾಗರಾಜ್.
ಮಾರುತಿ ನಗರ ಯಲಹಂಕ

ಯಲಹಂಕ
ನೇಯ್ಗೆಯವರ ಬೀದಿ ಎಂದು ಖ್ಯಾತಿ ಪಡೆದು ನೇಕಾರರಿಗೆ ಉದ್ಯೋಗ ಕೊಡುವ ಕೇಂದ್ರವಾಗತ್ತು.
ಮೊಟ್ಟ ಮೊದಲಿಗೆ ಈ ಕೈಮಗ್ಗದ ಕಲೆ ಹಾಗೂ ಉದ್ಯಮ ಯಲಹಂಕದ ಜನತೆಗೆ ಪರಿಚಯಿಸಿದ ಹೆಗ್ಗಳಿಕೆಗೆ ಶ್ರೀಯುತ ಬಿ. ರಾಮಯ್ಯನವರು ಪಾತ್ರರಾಗುತ್ತಾರೆ ಎಂದು ನಮ್ಮ ಹಿರಿಯರ ಮಾತುಗಳಿಂದ ತಿಳಿದುಬಂದಿದೆ, ನಾವು ಹುಟ್ಟುವ ಬಹಳ ಹಿಂದೆಯೇ ಸುಮಾರು 1950 ರ ಸ್ವಲ್ಪ ಮುನ್ನ ಅಥವಾ ಪ್ರಾರಂಭದಲ್ಲಿ ಆಂಧ್ರದ
ಮದನಪಲ್ಲಿ ಯಿಂದ ವಲಸೆ ಬಂದು ಯಲಹಂಕದಲ್ಲಿ ನೆಲೆಸಿ ಈ ಉದ್ಯಮವನ್ನು ಬೆಳೆಸಿ ಅವರ ಸಮುದಾಯದ ಉನ್ನತಿಗೆ ಕಾರಣರಾಗಿದ್ದಾರೆ ಎಂದು ಹೇಳಿದರೆ ಆಶ್ಚರ್ಯವಲ್ಲದ ತೀರಾ ವಾಸ್ತವದ ಮಾತು.
ನಂತರದ ದಿನಗಳಲ್ಲಿ ಶ್ರೀಯುತರಾದ ವೆಂಕಟರಾಮಯ್ಯ, ದೇಶದ ಪೇಟೆಯ ವೆಂಕಟಸುಬ್ಬಯ್ಯ, ವೆಂಕಟಸಿದ್ದಯ್ಯ,
ಮಾರ್ಕಂಡೇಯ, ಶ್ರೀನಿವಾಸುಲು, ಹೀಗೆ ಈ ಉದ್ಯಮದಲ್ಲಿ ತಾವೂ ತೊಡಗಿ ಇತರರನ್ನು ತೊಡಗಿಕೊಂಡು ವಾಣಿಜ್ಯ ಕ್ಷೇತ್ರದಲ್ಲಿ ಏಳಿಗೆಯಾದವರ ಹತ್ತು ಹಲವು ವ್ಯಕ್ತಿಗಳು ಕಣ್ಣು ಮುಂದೆ ಬರುತ್ತಾರೆ.
ಕ್ರಮೇಣ 1978 ಆಸುಪಾಸಿನ ದಿನಗಳ ನೆನಪು ಪವರ್ ಲೂಮ್ ಗಳು ( ವಿದ್ಯುತ್ ಚಾಲಿತ ಮಗ್ಗಗಳು ) ಕಾಣಲು ಶುರುವಾಗಿ ಮುಂದೆ ಕ್ರಾಂತಿ ಯಾಗುತ್ತಾ ಕೈಮಗ್ಗಗಳು ಕಡಿಮೆಯಾಗುತ್ತಾ ಈಗ ಬಹಳ ವಿರಳವಾಗಿದೆ.
ಕೈಮಗ್ಗದ ಕಲೆ , ಕಲೆಗಾರರು, ಇಂದು ಯಲಹಂಕದಲ್ಲಿ ಬೆರಳೆಣಿಕೆಯಷ್ಟು ಲಭ್ಯವೇನೊ !!?.
ಕಾಲಾಯ ತಸ್ಯೈ ನಮಃ, ಬದಲಾವಣೆ ಪ್ರಕೃತಿಯ ನಿಯಮಕ್ಕೆ ನಾವೆಲ್ಲರೂ ತಲೆ ಬಾಗಲೇಬೇಕಲ್ಲವೆ ?.
ಈ ಲೇಖನದ ಉದ್ದೇಶ ಇತಿಹಾಸದಲ್ಲಾದ ಸ್ವದೇಶಿ ಆಂದೋಲನ ವನ್ನು ಮೆಲುಕು ಹಾಕಲು, ನಮ್ಮ ಸಂಸ್ಕೃತಿಯಲ್ಲಿನ ಕೈಮಗ್ಗದ ಕಲಾಸಿರಿ, ಕಲೆಗಾರರಿಗೆ ಗೌರವ ಸೂಚಿಸುವ ಸಲುವಾಗಿ ಮತ್ತು ಯಲಹಂಕದ ಗತಕಾಲದ ಕೈಮಗ್ಗದ ವೈಭವವನ್ನೂ ವ್ಯಕ್ತಿ ಗಳನ್ನೂ , ಪರಿಚಯವಾದ ವರಿಗೆ ನೆನಪಿಸುತ್ತಾ , ಹೊಸಬರಿಗೆ ಮಾಹಿತಿಯನ್ನು ನೀಡುವ ಸಲುವಾಗಿ ಈ ಪ್ರಯತ್ನ. 🤝
