ಯಲಹಂಕ : ದೊಡ್ಡಬ್ಯಾಲಕೆರೆ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಆರ್‌.ವಿಜಯಕುಮಾರ್‌ ಮತ್ತು ಉಪಾಧ್ಯಕ್ಷರಾಗಿ ಎಂ.ಕೆ.ಮಹೇಶ್‌ ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ.

ನೂತನ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕಾಗಿ ಗುರುವಾರ ಚುನಾವಣಾ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕಾಗಿ ವಿಜಯಕುಮಾರ್‌ ಹಾಗೂ ಉಪಾಧ್ಯಕ್ಷ ಸ್ಥಾನಕ್ಕಾಗಿ ಮಹೇಶ್‌ ನಾಮಪತ್ರ ಸಲ್ಲಿಸಿದ್ದರು. ಈ ಹಿಂದೆ ಎರಡು ಭಾರಿ ದೊಡ್ಡಬ್ಯಾಲಕೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ವಿಜಯಕುಮಾರ್‌ ಅವರು, ಈಗ ಮೂರನೇ ಭಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಲ್ಲದೆ ಎರಡು ಭಾರಿ ಕಸಘಟ್ಟಪುರ ಗ್ರಾಮಪಂಚಾಯಿತಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಶಾಸಕ ಎಸ್‌.ಆರ್‌.ವಿಶ್ವನಾಥ್‌, ಸಿಂಗನಾಯಕನಹಳ್ಳಿ ರೈತರಸೇವಾ ಸಹಕಾರ ಬ್ಯಾಂಕಿನ ಅಧ್ಯಕ್ಷೆ ವಾಣಿಶ್ರೀ ವಿಶ್ವನಾಥ್‌, ಬಿಜೆಪಿ ಮುಖಂಡರಾದ ದಿಬ್ಬೂರು ಜಯಣ್ಣ, ಬ್ಯಾಲಕೆರೆ ವೆಂಕಟೇಶ್‌, ಕೆ.ಸಿ.ಬಾಬು, ಬಿ.ಆರ್‌.ಲೋಕೇಶ್‌, ಸಂಘದ ನಿರ್ದೇಶಕರಾದ ಮಂಜಣ್ಣ, ಬಿ.ಕೆ.ಶಿವರಾಜ್‌, ಎ.ರಾಜಣ್ಣ, ಲಕ್ಷ್ಮಣ, ಪಾರಿಜಾತ ಚಂದ್ರಪ್ಪ, ಶಾಂತಾ, ರತ್ನಮ್ಮ, ಆಂಜಿನಮ್ಮ,  ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅಭಿನಂದಿಸಿದರು.

Leave a Reply

Your email address will not be published. Required fields are marked *