ಯಲಹಂಕ. ಶ್ರೀ ಕಲ್ಯಾಣ ಕಾಮಾಕ್ಷಿ ಅಮನ್ ದೇವಾಲಯ, ಹೊಸೂರು-27ನೇ ವಾರ್ಷಿಕೋತ್ಸವ ನವರಾತ್ರಿ ಉತ್ಸವದ ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ಕಲಾಲಯ ತಂಡವು ಯಶಸ್ವಿಯಾಗಿ ನೃತ್ಯ ಪ್ರದರ್ಶಿಸಿದರು. ಗುರುಗಳಾದ ವಿದೂಷಿ ಶ್ರೀಮತಿ ಸುನಿತಾ ಸುಕುಮಾರನ್ ರವರ ನೃತ್ಯ ಸಂಯೋಜನೆಯಲ್ಲಿ ಮೂಡಿಬಂದ ಈ ಕಾರ್ಯಕ್ರಮವು ಎಲ್ಲಾ ಕಲಾರಸಿಕರ ಮನ ಸೆಳೆದಿತು. ನೃತ್ಯ ಪ್ರದರ್ಶನವನ್ನು ಶ್ರೀ ಕೃಷ್ಣ ಕಲಾಲಯದ ಹಿರಿಯ ವಿದ್ಯಾರ್ಥಿಗಳಾದ ಚೈತ್ರ, ಲೇಖನ, ಕೀರ್ತನ ಪ್ರಭಾಕರ್, ಕೀರ್ತನ ರವಿಶಂಕರ್, ಲಿಖಿತ. ಕೆ. ಜೆ, ಮಾನ್ಯ ಹಾಗೂ ಪಂಚಮಿ ನೀಡಿದರು.
ನವರಾತ್ರಿಯ ಪ್ರಯುಕ್ತ ತ್ರಿಶಕ್ತಿಯನ್ನು ಸ್ಮರಿಸುತ್ತಾ ತ್ರಿಮಾತಾ ಕವಿತುವಂ, ಪರಶಿವನನ್ನು ಸ್ಮರಿಸುತ್ತಾ ಆನಂದ ನಟನವಾಡಿದ, ತಾಯಿ ಚಾಮುಂಡೇಶ್ವರಿಯ ಲೀಲೆಯನ್ನು ವರ್ಣಿಸುತ್ತಾ ಮಣ್ಣಿನ ಮೇಲೆ ಓಂ ಕಾರ ಬಿಂದು ಹಾಗೂ ಜಾನಪದ ನೃತ್ಯಗಳಲ್ಲಿ ಒಂದಾದ ಪೂಜಾ ಕುಣಿತವನ್ನು ದುರ್ಗೆ ತಿಲ್ಲಾನ ಎಂಬ ಹಾಡಿನಲ್ಲಿ ಭರತನಾಟ್ಯದೊಂದಿಗೆ ಒಂದು ತುಣುಕಾಗಿ ಪ್ರದರ್ಶಿಸಿದರು.

Leave a Reply

Your email address will not be published. Required fields are marked *