Tag: chik balpuar

ಚಿಕ್ಕಬಳ್ಳಾಪುರ: ನಗರದ ವಿವಿಧ ಕಡೆಗಳಲ್ಲಿನ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟ

ಚಿಕ್ಕಬಳ್ಳಾಪುರ: ನಗರದ ವಿವಿಧ ಕಡೆಗಳಲ್ಲಿನ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟ ಮಾಡುತ್ತಿದ್ದವರ ಅಂಗಡಿಗಳ ಮೇಲೆ ನಗರಸಭೆ ಅಧಿಕಾರಿಗಳು ದಾಳಿ ನಡೆಸಿ ಪ್ಲಾಸ್ಟಿಕ್ ವಶಪಡಿಸಿಕೊಂಡರು.ನಗರದ ವಿವಿಧ ಕಡೆಗಳಲ್ಲಿನ ಅಂಗಡಿ ಮುಂಗಟ್ಟುಗಳಲ್ಲಿ ಯಥೇಚ್ಛವಾಗಿ ಪ್ಲಾಸ್ಟಿಕ್ ಮಾರಾಟ ಹಾಗೂ ಬಳಕೆ ಮಾಡುತ್ತಿದ್ದರ ಬಗ್ಗೆ ಖಚಿತ…

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಪಂ ಸಭಾಂಗಣದಲ್ಲಿ ನಡೆದ ಡಿ ಎಲ್ ಆರ್ ಸಿ ಸಭೆ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಪಂ ಸಭಾಂಗಣದಲ್ಲಿ ನಡೆದ ಡಿ ಎಲ್ ಆರ್ ಸಿ ಸಭೆಯಲ್ಲಿ ಪಾಲ್ಗೊಂಡ ಸಂಸದ ಬಚ್ಚೇಗೌಡರು ಮಾದ್ಯಮಗಳೊಂದಿಗೆ ಮಾತನಾಡಿ ಪರೋಕ್ಷವಾಗಿ ಬಿಜೆಪಿ ವಿರುದ್ದವೆ ವಾಗ್ದಾಳಿ ಮಾಡಿದರು.ನನಗೆ ವಯಸ್ಸಾಯಿತು ಸಾಕಾಯ್ತು ರಾಜಕೀಯದಲ್ಲಿ ಬಹಳ ಶ್ರಮ ಪಟ್ಟಿದ್ದೇನೆ ಎಂದು ಚಿಕ್ಕಬಳ್ಳಾಪುರದಲ್ಲಿ ಸಂಸದ ಬಿ.ಎನ್.ಬಚ್ಚೇಗೌಡ ಹೇಳಿದರು.50…

ಚಿಕ್ಕಬಳ್ಳಾಪುರ: ಜಿಲ್ಲೆಯ ವಿಶ್ವ ವಿಖ್ಯಾತ ನಂದಿಗಿರಿಧಾಮದಲ್ಲಿ ಈಗಾಗಲೇ ಪ್ಲಾಸ್ಟಿಕ್‌ನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು ಪಾರ್ಕಿಂಗ್ ಸ್ಥಳದಲ್ಲಿ ಪ್ರವಾಸಿಗರು ಬಳಸಿ ಬಿಸಾಡುವ ಪ್ಲಾಸ್ಟಿಕ್ ಬಾಟಲುಗಳನ್ನು ಕೂಡ ಪುಡಿ ಮಾಡುವ ಅತ್ಯಾಧುನಿಕ ಯಂತ್ರವನ್ನು ಅಳವಡಿಸಲಾಗಿದೆ.
ಹೌದು, ಇತ್ತೀಚಿನ ದಿನಗಳಲ್ಲಿ ನಂದಿಗಿರಿಧಾಮ ಆಧುನೀಕರಣಗೊಂಡು ಹೊಸ ರೂಪ ಪಡೆಯುತ್ತಿದ್ದು ಈಗಾಗಲೇ ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮ ಕೋಟ್ಯಾಂತರ ರು, ವೆಚ್ಚದಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಹಲವಾರು ಮೂಲ ಸೌಕರ್ಯಗಳನ್ನು ಗಿರಿಧಾಮಕ್ಕೆ ಒದಗಿಸುತ್ತಿದೆ.
ಇತ್ತೀಚೆಗೆ ಅಷ್ಟೇ 95 ಲಕ್ಷ ರು, ವೆಚ್ಚದಲ್ಲಿ ಗಿರಿಧಾಮದ ಪ್ರಾಕೃತಿಕ ಸೌಂದರ್ಯದ ಮಧ್ಯೆ ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮ ಅತ್ಯಾಧುನಿಕವಾಗಿ ಮೂಲ ಸೌಕರ್ಯಗಳನ್ನು ಒಳಗೊಂಡು ನಿರ್ಮಿಸಿರುವ ಕಾನ್ಪರೆನ್‌ಸ್ ಹಾಲ್ ಉದ್ಘಾಟನೆಗೊಂಡಿತ್ತು. . ಇದೀಗ ಬೆಟ್ಟದಲ್ಲಿ ಕೆಳಗೆ ಅಂದರೆ ಪ್ರವೇಶ ದ್ವಾರದ ಆವರಣದಲ್ಲಿ ಪ್ರವಾಸಿಗರು ಬಳಸುವ ಪ್ಲಾಸ್ಟಿಕ್ ಪರಿಸರದೊಳಗೆ ಸೇರಿ ಮಾಲಿನ್ಯ ಆಗಬಾರದೆಂಬ ಕಾರಣಕ್ಕೆ ಇದೀಗ ಹ್ಯಾಬಿಟ್ಯಾಟ್ ಫಾರ್ ಹ್ಯೂಮಾನಿಟಿ ಸಂಸ್ಥೆಯು ಸಾಮಾಜಿಕ ಹೊಣೆಗಾರಿಕೆಯಡಿ ಲಕ್ಷಾಂತರ ರು, ವೆಚ್ಚ ಮಾಡಿ ನಂದಿಬೆಟ್ಟದಲ್ಲಿ ಪ್ರವಾಸಿಗರು ಬಳಸುವ ಪ್ಲಾಸ್ಟಿಕ್ ಬಾಟಲುಗಳನ್ನು ಸಂಪೂರ್ಣವಾಗಿ ಪುಡಿ ಮಾಡಲು ಯಂತ್ರಗಳನ್ನು ಅಳವಡಿಸಿದ್ದು ಪ್ರವಾಸಿಗರ ಗಮನ ಸೆಳೆಯುತ್ತಿದೆ.
5 ಯಂತ್ರಗಳ ಬಳಕೆ:
ಸುಮಾರು 5 ಯಂತ್ರಗಳನ್ನು ನಂದಿಬೆಟ್ಟದ ಪಾರ್ಕಿಂಗ್ ಸ್ಥಳದಲ್ಲಿ ಅಳವಡಿಸಲಾಗಿದ್ದು ಒಮ್ಮೆ 20 ಬಾಟಲುಗಳನ್ನು ಯಂತ್ರದೊಳಗೆ ಹಾಕಿ ಪುಡಿ ಪುಡಿ ಮಾಡಬಹುದಾಗಿದೆ. ಇದರಿಂದ ಅನವಶ್ಯಕವಾಗಿ ಪ್ರವಾಸಿಗರು ಬಳಸಿ ಬಿಸಾಡಿದ ಪ್ಲಾಸ್ಟಿಕ್ ಬಾಟಲುಗಳು ಬೆಟ್ಟದ ಸ್ವಚ್ಛ ಪರಿಸರಕ್ಕೆ ಸೇರಿ ಅನೈರ್ಮಲ್ಯ ಉಂಟಾಗುವುದರ ಬದಲು ಇನ್ಮೇಲೆ ಪ್ಲಾಸ್ಟಿಕ್ ಬಾಟಲುಗಳನ್ನು ಯಂತ್ರಕ್ಕೆ ಹಾಕಿ ಪುಡಿ ಮಾಡಬಹುದಾಗಿದೆ.
ಈಗಾಗಲೇ ನಂದಿಗಿರಿಧಾಮದ ಮೇಲೆ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಪ್ಪಿತಪ್ಪಿ ಯಾರಾದರೂ ಪ್ಲಾಸ್ಟಿಕ್ ಬಾಟಲುಗಳನ್ನು ಕೈಯಲ್ಲಿ ಹಿಡಿದು ತಂದರೆ ಬೆಟ್ಟದ ಪ್ರವೇಶ ದ್ವಾರದಲ್ಲಿಯೆ ಕೆಎಸ್‌ಟಿಡಿಸಿ ಸಿಬ್ಬಂದಿ ದಂಡ ಹಾಕಲಿದ್ದಾರೆ.

ಸರ್ ಎಂ ವಿ ಇಂಟರ್ ನ್ಯಾಷನಲ್ ಸೂಪರ್ ಟ್ರೈನಿಂಗ್ ಇನ್ಟಿಟ್ಯೂಟ್ ಗೆ ವೀರಪ್ಪಮೊಯಿಲಿ ಬೇಟಿ

ಕಟ್ಟಡ ಕಾಮಗಾರಿ ವೀಕ್ಷಿಸಿದ ಮಾಜಿ ಸಿಎಂ ಚಿಕ್ಕಬಳ್ಳಾಪುರ: ನಗರದ ಹೊರವಲಯ ನಂದಿ ಬೆಟ್ಟದ ತಪ್ಪಲಿನಲ್ಲಿ ನಿರ್ಮಾಣವಾಗುತ್ತಿರುವ ಸರ್ ಎಂ ವಿಶ್ವೇಶ್ವರಯ್ಯ ಇಂಟರ್ ನ್ಯಾಷನಲ್ ಇನ್ಟಿಟ್ಯೂಟ್ ಫಾರ್ ಸೂಪರ್ ಟ್ರೈನರ್ಸ್ ಸಂಸ್ಥೆಯ ಕಟ್ಟಡ ವೀಕ್ಷಣೆಗೆ ಮಾಜಿ ಸಿಎಂ ವೀರಪ್ಪಮೊಯಿಲಿ ಬೇಟಿ ನೀಡಿ ವೀಕ್ಷಣೆ…

ಚಿಕ್ಕಬಳ್ಳಾಪುರ: ವಿಧ್ಯಾರ್ಥಿಗಳೆ ನೀವು ಯಶಸ್ಸು ಕಾಣಬೇಕಾ,ತಂದೆ ತಾಯಿಗೆ ಚನ್ನಾಗಿ ನೋಡ್ಕೂ ಬೇಕಾ ದುಡ್ಡು

ಚಿಕ್ಕಬಳ್ಳಾಪುರ: ವಿಧ್ಯಾರ್ಥಿಗಳೆ ನೀವು ಯಶಸ್ಸು ಕಾಣಬೇಕಾ,ತಂದೆ ತಾಯಿಗೆ ಚನ್ನಾಗಿ ನೋಡ್ಕೂ ಬೇಕಾ ದುಡ್ಡು ಸಂಪಾದನೆ ಮಾಡಬೇಕಾ ಒಂದು ಗೋಲ್ಡನ್ ಸೀಕ್ರೇಟ್ ಹೇಳುತ್ತೇನೆ ಕೇಳಿ ನಿಮ್ಮ ಮನಸ್ಸಿಗೆ ಯಾವುದು ಸರಿ ಅನ್ನಿಸುತ್ತೆ ಅದನ್ನು ಮಾಡಿ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.ನಗರದ ಅಂಬೇಡ್ಕರ್…