Category: Blog

Your blog category

ಜನ್ಮಾಷ್ಟಮಿಯ ಶುಭ ಸಂದರ್ಭದಲ್ಲಿ,ದೆಹಲಿಯ ಇಸ್ಕಾನ್ ದೇವಾಲಯಕ್ಕೆ ಭೇಟಿ ನೀಡಿದ ಅಮಿತ್ ಶಾ ದೆಹಲಿ : ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಕೃಷ್ಣ ಜನ್ಮಾಷ್ಟಮಿಯ ಪವಿತ್ರ ಆಚರಣೆಯ ಸಂದರ್ಭದಲ್ಲಿ ದಕ್ಷಿಣ ದೆಹಲಿಯ ಕೈಲಾಶ್ ಜಿಲ್ಲೆಯ ಪೂರ್ವದಲ್ಲಿರುವ ಇಸ್ಕಾನ್ ದೇವಾಲಯಕ್ಕೆ ಭೇಟಿ ನೀಡಿದರು. ರಾಷ್ಟ್ರದ ಪ್ರಗತಿ ಮತ್ತು ಸಮೃದ್ಧಿಗಾಗಿ ಶ್ರೀಕೃಷ್ಣನ ಕೃಪಾಶೀರ್ವಾದವನ್ನು ಕೋರಿದರು. ಈ ಶುಭ ಸಂದರ್ಭದಲ್ಲಿ, ದೇಶದ ಎಲ್ಲಾ ನಾಗರಿಕರಿಗೆ ತಮ್ಮ ಆತ್ಮೀಯ ಶುಭಾಶಯಗಳನ್ನು ತಿಳಿಸಿದರು. ಕಾರ್ಯಕ್ರಮದ ಉದ್ದಕ್ಕೂ ಸಾಮರಸ್ಯದ ಪಠಣವಾದ "ಹಾಥಿ ಘೋಡಾ ಪಾಲ್ಕಿ, ಜೈ ಕನ್ಹಯ್ಯಾ ಲಾಲ್ ಕಿ" ಘೋಷಣೆ ಪ್ರತಿಧ್ವನಿಸಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾ, ಭಕ್ತಿ ಮತ್ತು ಉತ್ಸಾಹದಿಂದ ತುಂಬಿದ ಈ ಜನ್ಮಾಷ್ಟಮಿ ಹಬ್ಬವು ಒಬ್ಬರ ಹೃದಯವನ್ನು ಉತ್ಸಾಹ ಮತ್ತು ಧಾರ್ಮಿಕತೆಯಿಂದ ತುಂಬುತ್ತದೆ ಎಂದು ಹೇಳಿದರು. ದಯಾಮಯನಾದ ಶ್ರೀ ಕೃಷ್ಣನು ಎಲ್ಲರಿಗೂ ತನ್ನ ದಿವ್ಯ ಅನುಗ್ರಹವನ್ನು ನೀಡಲಿ ಎಂದು ಪ್ರಾರ್ಥಿಸಿದರು. ಶ್ರೀಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ರಾಷ್ಟ್ರದ ಉದ್ದಗಲಕ್ಕೂ, ಭಕ್ತಸಮೂಹ ಶ್ರೀಕೃಷ್ಣನನ್ನು ವೈಭವ ಮತ್ತು ಸಂಭ್ರಮದಿಂದ ಅಲಂಕರಿಸಿ ಹರ್ಶಿಸಿದರು. ಭಕ್ತಿಯಲ್ಲಿ ಆಳವಾಗಿ ಮಗ್ನವಾಗಿದ್ದ ಶಾ ಅವರ ಚಿತ್ರವೊಂದು ಶ್ರೀಕೃಷ್ಣ ಮತ್ತು ಅವನ ಪ್ರಾಣಪ್ರಿಯೆ ರಾಧೆಯ ದೈವಿಕ ಸಾಮೀಪ್ಯದಲ್ಲಿರುವ ಸಂತರ ಚಿತ್ರಗಳ ಸಾಲಿನಲ್ಲಿ ಅನಾವರಣಗೊಂಡಿತು. ಶ್ರೀ ಕೃಷ್ಣನು ಶ್ರೀ ಹರಿಯ ಅನಂತ ಅವತಾರಗಳ ಸರ್ವೋತ್ಕೃಷ್ಟ ಸ್ವರೂಪ. ಪರಮಾತ್ಮನ ಅಸಂಖ್ಯಾತ ರೂಪಗಳಲ್ಲಿ, ಕೃಷ್ಣನು ಸರ್ವೋತ್ಕೃಷ್ಟ ಸಾಕಾರ ಮೂರ್ತಿಯಾಗಿ ಪೂಜಿಸಲ್ಪಡುತ್ತಾನೆ. ಅವನ ಅಸಂಖ್ಯಾತ ಮನಮೋಹಕ ಲೇಲೆಗಳಿಂದ ಸರ್ವರ ಮನ ಸೆಳೆಯುತ್ತಾನೆ. ಅವನು ಆಟವಾಡುತ್ತ ಬೆಣ್ಣೆ ಕದಿಯುವದರಿಂದ ಹಿಡಿದು ಗೋಪಿಯರೊಂದಿಗಿನ ನೃತ್ಯದವರೆಗೆ ದೈವಿಕ ಲೀಲೆಗಳಿಂದ ಎಲ್ಲರ ಮನ ಸೆಳೆಯುತ್ತಾನೆ. ಬಿಜೆಪಿಯ ಹಿರಿಯ ನಾಯಕರಾಗಿರುವ ಅಮಿತ್ ಶಾ ಕೇವಲ ಚಾಣಕ್ಯ ರಾಜಕಾರಣಿಯಾಗಿರದೆ, ಧಾರ್ಮಿಕ ವ್ಯಕ್ತಿಯೂ ಹೌದು. ರಾಷ್ಟ್ರ ಮತ್ತು ಅದರ ನಾಗರಿಕರ ಪ್ರಗತಿ ಮತ್ತು ಯೋಗಕ್ಷೇಮದ ಕಡೆಗಿನ ಅವರ ಸಮರ್ಪಣೆಗೆ ಯಾವುದೇ ಮಿತಿಯಿಲ್ಲ. ಪ್ರತಿ ಧಾರ್ಮಿಕ ಸಂಭ್ರಮಾಚರಣೆಯ ಸಂದರ್ಭಗಳಲ್ಲಿ ಭಾಗವಹಿಸುವ ಅಮಿತ್ ಶಾ, ರಾಷ್ಟ್ರದ ಏಳಿಗೆಗಾಗಿ ದೇವರನ್ನು ಪ್ರಾರ್ಥಿಸುತ್ತಾರೆ. "ಜೈ ಶ್ರೀ ಕೃಷ್ಣ" ಎಂಬ ಉತ್ಸಾಹ ಭಾವದಲ್ಲಿ ಮಾತನಾಡಿದ ಅಮಿತ್ ಶಾ ಅವರು, ಆರಾಧನೆ ಮತ್ತು ಭಕ್ತಿಯ ಈ ಪವಿತ್ರ ಸಂದರ್ಭವು ಎಲ್ಲಾ ದೇಶಬಾಂಧವರ ಜೀವನದಲ್ಲಿ ತಾಜಾ ಚೈತನ್ಯ ಮತ್ತು ಉತ್ಸಾಹವನ್ನು ತುಂಬಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಬಳ್ಳಾರಿ ಸೆ,10
ಜನರ ತೆರಿಗೆಯಿಂದ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳನ್ನು ನಡೆಸಿ- ಎಐಡಿಎಸ್ಓ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್
ಕಟ್ಟಡ, ಶೌಚಾಲಯ, ಶಿಕ್ಷಕರು ಸೇರಿದಂತೆ ಕರ್ನಾಟಕದ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳು ಎದುರಿಸುತ್ತಿರುವ ಕುಂದು ಕೊರತೆಗಳನ್ನು ನಿವಾರಿಸಲು ಕರ್ನಾಟಕ ರಾಜ್ಯ ಸರ್ಕಾರವು ಕಾರ್ಪೊರೇಟ್ ಕಂಪನಿಗಳಿಗೆ ಮನವಿ ಮಾಡಿರುವುದು ಮತ್ತು ಕೆಲವರು ಇದಕ್ಕೆ ಪ್ರತಿಕ್ರಿಯಿಸಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆ. ಈ ಬೆಳವಣಿಗೆಯನ್ನು ರಾಜ್ಯದ ಶಿಕ್ಷಣ ಪ್ರೇಮಿ ಜನತೆಯು ಕಳವಳದಿಂದ ಗಮನಿಸುತ್ತಿದ್ದಾರೆ.
ಖ್ಯಾತ ಉದ್ಯಮಪತಿಯೊಬ್ಬರ ಮುಂದೆ ಸರ್ಕಾರದ ಉನ್ನತ ಶಿಕ್ಷಣ ಸಚಿವರು ಮಂಡಿಸಿರುವಂತೆ, ಉನ್ನತ ಶಿಕ್ಷಣ ಕ್ಷೇತ್ರಕ್ಕೆ 3,256 ಕೋಟಿ, ಸರ್ಕಾರಿ ಪದವಿ ಕಾಲೇಜುಗಳಿಗೆ 1,997 ಕೋಟಿ, ಸರ್ಕಾರಿ ಪಾಲಿಟೆಕ್ನಿಕ್‌ ಮತ್ತು ಎಂಜಿನಿಯರಿಂಗ್‌ ಕಾಲೇಜುಗಳಿಗೆ 852 ಕೋಟಿ, ಕೌಶಲಾಭಿವೃದ್ಧಿ ಪ್ರಯೋಗಾಲಯಗಳಿಗೆ 386 ಕೋಟಿ, ಯೂನಿವರ್ಸಿಟಿ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿಗೆ 14 ಕೋಟಿ ಮತ್ತು ಡಾ.ಬಿ. ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್‌ಗೆ 6 ಕೋಟಿ ನೆರವಿನ ಬೇಡಿಕೆಯನ್ನು ಇಟ್ಟಿದ್ದಾರೆ.
ಒಂದು ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಶಿಕ್ಷಣವನ್ನು ನೀಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಜನರಿಂದ ಹೇರಳವಾಗಿ ಸಂಗ್ರಹಿಸಲ್ಪಡುವ ತೆರಿಗೆ ದುಡ್ಡನ್ನು ಆದ್ಯತೆಯ ಮೇರೆಗೆ ಶಿಕ್ಷಣಕ್ಕೆ ವಿನಿಯೋಗಿಸಬೇಕು. ಶಾಲಾ ಕಟ್ಟಡ, ಶಿಕ್ಷಕರು ಸೇರಿದಂತೆ ಇತ್ಯಾದಿ ಮೂಲಸೌಕರ್ಯಗಳ ಪೂರೈಕೆ ಸಂಪೂರ್ಣವಾಗಿ ಸರ್ಕಾರದ ಜವಾಬ್ದಾರಿಯೇ ಆಗಿರಬೇಕು. ಕಾರ್ಪೊರೇಟ್ ಕಂಪನಿಗಳು ಸಹಾಯ ಒದಗಿಸುವರು ಎಂಬ ಪರದೆಯ ಹಿಂದೆ ಸರ್ಕಾರವು ಚಾಕಚಕ್ಯತೆಯಿಂದ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಇರಾದೆ ಇರಬಹುದೇ ಎಂಬುದು ವಿದ್ಯಾರ್ಥಿ ಸಮುದಾಯವನ್ನು ಕಾಡುತ್ತಿರುವ ಪ್ರಶ್ನೆ. ಇಂದು ಖಾಸಗಿ ಕಂಪನಿಗಳು ಹೇರಳವಾಗಿ ಆರ್ಥಿಕ ನೆರವು ನೀಡಬಹುದು. ಆದರೆ ಕ್ರಮೇಣ ಈ ನೆರವಿನ ಹೆಸರಲ್ಲಿ ಅವರ ಹಕ್ಕು ಸ್ಥಾಪನೆಯಾಗಿ, ಸರ್ಕಾರಿ ಶಾಲಾ ಕಾಲೇಜುಗಳು ಖಾಸಗಿಯವರ ಪಾಲಾಗಬಹುದು ಎಂಬುದು ಶಿಕ್ಷಣಪ್ರೇಮಿ ಜನರ ಆತಂಕವಾಗಿದೆ.

ಈ ಹಿನ್ನೆಲೆಯಲ್ಲಿ, ರಾಜ್ಯದ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳು ಎದುರಿಸುತ್ತಿರುವ ಕೊರತೆಗಳನ್ನು ನಿವಾರಿಸಲು ಸರ್ಕಾರವು ಜನರ ತೆರಿಗೆಯ ದುಡ್ಡನ್ನು ಸದ್ವಿನಿಯೋಗಗೊಳಿಸಬೇಕು. ಮತ್ತು ಶಿಕ್ಷಣದ ಕುರಿತಾದ ಯಾವುದೇ ನಿರ್ಧಾರಕ್ಕೂ ಮುನ್ನ ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು ಮತ್ತು ಶಿಕ್ಷಣತಜ್ಞರು ಸೇರಿದಂತೆ ಜನಾಭಿಪ್ರಾಯ ಪಡೆಯುವ ಪ್ರಜಾತಾಂತ್ರಿಕ ಪ್ರಕ್ರಿಯೆಯನ್ನು…

ರೈತರ ಹಿತ ಕಾಪಾಡುವಲ್ಲಿ ಸಹಕಾರ ಸಂಘಗಳು ಮಹತ್ವದ ಪಾತ್ರ ವಹಿಸುತ್ತವೆ : ಕೃಷ್ಣಬೈರೇಗೌಡ

ಬ್ಯಾಟರಾಯನಪುರ : ರಾಜ್ಯದ ರೈತರ ಹಿತ ಕಾಪಾಡುವಲ್ಲಿ ಸಹಕಾರ ಸಂಘಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅಭಿಪ್ರಾಯ ಪಟ್ಟರು. ವ್ಯವಸಾಯ ಸೇವಾ ಸಹಕಾರ ಸಂಘ ನಿಯಮಿತ ಬ್ಯಾಟರಾಯನಪುರದ 2022-23ನೇ ಸಾಲಿನ ವಾರ್ಷಿಕ ಮಹಾಸಭೆ ಪ್ರಯುಕ್ತ ಜಕ್ಕೂರಿನ ಕೆಂಪೇಗೌಡ…

ವಾಹನ ಚಾಲಕರು ಬೇಕಾಗಿದ್ದಾರೆ.

ಮಾತೃ ಅಂದರ ಮತ್ತು ಇತರೆ ಅಂಗವಿಕಲರ ಶಿಕ್ಷಣ ಸಂಸ್ಥೆ ಯಲಹಂಕ. ಈ ಸಂಸ್ಥೆಗೆ ಅನುಭವವುಳ್ಳ ಅಥವಾ ನಿವೃತ್ತಿ ಹೊಂದಿರುವ ವಾಹನ ಚಾಲಕರು ಬೇಕಾಗಿದ್ದಾರೆ ಸಂಪರ್ಕಿಸಬೇಕಾದ ಸಂಖ್ಯೆ. 9886032632/ 9448593780

ಕಡೆ ಶ್ರಾವಣ ಶನಿವಾರ ಪ್ರಯುಕ್ತ

ಯಲಹಂಕ ಕೋಗಿಲು ಬಡಾವಣೆ, ಶ್ರಾವಣ ಮಾಸ ಪ್ರಯುಕ್ತ ಶ್ರೀ ಹನುಮಾನ್ ದೇವರಿಗೆ ಶ್ರೀ ವೆಂಕಟರಮಣ ದೇವರ ಅಲಂಕಾರ ದೇವಸ್ಥಾನದ ಮುಖ್ಯಸ್ಥರಿಂದ ಪ್ರಸಾದ ವಿನಯೋಗ. ಹಾಗೂ ಪೂಜೆ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನಡೆಯಿತು ಈ ಸಂದರ್ಭದಲ್ಲಿ ಅನೇಕ ಭಕ್ತಾದಿಗಳು ಬಂದು ದೇವರ ಕೃಪೆಗೆ…

ಶ್ರೀ ಕೃಷ್ಣ ಜನ್ಮಾಷ್ಟಮಿ.

ಯಲಹಂಕ ಮಾರುತಿ ನಗರ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಜಾಲಿ ಕಿಡ್ಸ್ ಮೊಂಟೆಸೆರಿ ಯಲ್ಲಿಸತತವಾಗಿ ಮೂರು ದಿನಗಳ ಕಾಲ (06-09-23 ರಿಂದ 08-09-23) ಬಹಳ ವಿಜೃಂಭಣೆಯಿಂದ ನಡೆಸಲಾಗಿತ್ತು. ಈ ಸಂದರ್ಭದಲ್ಲಿಪೋಷಕರು ಯಶೋಧೆಯಾಗಿ, ಮಕ್ಕಳು ರಾಧೆ, ಕೃಷ್ಣ ವೇಶ ಭೂಷಣ ಧರಿಸಿದ್ದರು. ಪೋಷಕರು…

ಕಡೆ ಶ್ರಾವಣ ಶನಿವಾರ ಪ್ರಯುಕ್ತ

ಯಲಹಂಕ ಕೋಗಿಲು ಬಡಾವಣೆ, ಶ್ರಾವಣ ಮಾಸ ಪ್ರಯುಕ್ತ ಶ್ರೀ ಹನುಮಾನ್ ದೇವರಿಗೆ ಶ್ರೀ ವೆಂಕಟರಮಣ ದೇವರ ಅಲಂಕಾರ ದೇವಸ್ಥಾನದ ಮುಖ್ಯಸ್ಥರಿಂದ ಪ್ರಸಾದ ವಿನಯೋಗ. ಹಾಗೂ ಪೂಜೆ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನಡೆಯಿತು ಈ ಸಂದರ್ಭದಲ್ಲಿ ಅನೇಕ ಭಕ್ತಾದಿಗಳು ಬಂದು ದೇವರ ಕೃಪೆಗೆ…

ಚಿಕ್ಕಬಳ್ಳಾಪುರ: ಸೆಪ್ಟೆಂಬರ್​ 9: ಆತನಿಗೆ 60 ವರ್ಷ ವಯಸ್ಸು, ಆಕೆಗೆ 30 ವರ್ಷ ವಯಸ್ಸು. ಇಬ್ಬರಿಗೂ ಪರಸ್ಪರ ಆಶ್ರಯ, ಆಸರೆ, ಲಾಲನೆ, ಪಾಲನೆ, ಪೋಷಣೆ ಅಗತ್ಯವಾಗಿದ್ದು, ಇಬ್ಬರು ದೇವಸ್ಥಾನವೊಂದರಲ್ಲಿ ಅದ್ದೂರಿ ಮದುವೆ ಮಾಡಿಕೊಂಡು ಯುವಕ-ಯುವತಿಯರೇ ನಾಚುವಂತೆ ಮಾಡಿರುವ ಪ್ರಸಂಗ ನಡೆದಿದೆ.ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕು ಮೇಲೂರು ಗ್ರಾಮದ ನಿವಾಸಿ 60 ವರ್ಷದ ಈರಣ್ಣ ಹಾಗೂ ಮಹಾರಾಷ್ಟ್ರದ ಸೊಲ್ಲಾಪುರ ಮೂಲದ ಹಾಗೂ ಚಿಕ್ಕಬಳ್ಳಾಪುರದಲ್ಲಿ ವಾಸವಾಗಿದ್ದ 30 ವರ್ಷದ ಅನುಶ್ರೀ ಮದುವೆಯಾದ ಜೋಡಿ.
ಇಬ್ಬರಿಗೂ ಪ್ರತ್ಯೇಕ ವಿವಾಹವಾಗಿ ಮಕ್ಕಳಿದ್ದಾರೆ.

ಈರಣ್ಣನಿಗೆ ಮದುವೆಯಾಗಿ ಪತ್ನಿ ಮೃತಪಟ್ಟಿದ್ದಾಳೆ. ಆದರೆ ಒಂದು ಹೆಣ್ಣು ಮತ್ತು ಒಂದು ಗಂಡು ಮಕ್ಕಳಿದ್ದಾರೆ. ಹೆಣ್ಣು ಮಗಳನ್ನು ಸ್ಥಿತಿವಂತ ಕುಟುಂಬಕ್ಕೆ ಕೊಟ್ಟು ಮದುವೆ ಮಾಡಿದ್ದಾರೆ. ಮಗನೂ ಸಹಾ ಆರ್ಥಿಕವಾಗಿ, ಸಾಮಾಜಿಕವಾಗಿ ಚನ್ನಾಗಿದ್ದಾನೆ. ಕಳೆದ 5-6 ವರ್ಷಗಳಿಂದ ಈರಣ್ಣ ಒಬ್ಬೊಂಟಿಯಾಗಿ ಜೀವನ ಸಾಗಿಸುತ್ತಿದ್ದಾನೆ.…

ಕಡೆ ಶ್ರಾವಣ ಶನಿವಾರ ಮಾಸ

ಯಲಹಂಕ ಕೋಗಿಲು ಬಡಾವಣೆ, ಶ್ರಾವಣ ಮಾಸ ಪ್ರಯುಕ್ತ ಶ್ರೀ ವೆಂಕಟೇಶ್ವರ ದೇವರ ಅಲಂಕಾರ ದೇವಸ್ಥಾನದ ಭಕ್ತಾದಿಗಳಿಂದ ಪ್ರಸಾದ ವಿನಯೋಗ. ಹಾಗೂ ಪೂಜೆ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನಡೆಯಿತು ಈ ಸಂದರ್ಭದಲ್ಲಿ ದೇವರ ಮೆರವಣಿಗೆ ನಡೆಯಿತು ಈ ಸಂದರ್ಭದಲ್ಲಿ ಭಕ್ತರು ಭಜನೆ ಮಾಡುವ…

ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ. ಯಲಹಂಕ ಕಟ್ಟಿಗೆನಹಳ್ಳಿ. ರೇವ ವಿಶ್ವವಿದ್ಯಾಲಯ ದಿನಾಂಕ 07-09-2023 ರಂದು ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆಯನ್ನು ಖಾಸಗಿ ಶಾಲಾ ಕಾಲೇಜುಗಳ ಒಕ್ಕೂಟವು ರೇವಾ ವಿಶ್ವ ವಿದ್ಯಾಲಯದಲ್ಲಿ ಏರ್ಪಡಿಸಲಾಗಿತ್ತು. ಇದೇ ವೇಳೆ ತಾಲ್ಲೂಕು ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಗಿತ್ತು ಈ ಸಮಾರಂಭದಲ್ಲಿ. . ಶ್ರೀ ಶಂಕರ್ ಎಂ, ಶ್ರೀ ಜ್ಞಾನಜ್ಯೋತಿ ಅಗ್ರಹಾರ ಬಡಾವಣೆ ಶಾಲೆಯ ಮುಖ್ಯೋಪಾಧ್ಯಾಯರು, ಮತ್ತು ಆಕ್ಸ್ಫರ್ಡ್. ಪ್ರೌಢ ಶಾಲೆ. ಪಿಯು ಕಾಲೇಜ್. ಶಶಿಧರ್. ಮತ್ತು ಆಶಾ ಸುಲ್ತಾನ ಹಾಗೂ ಗಣಿತ ಹಾಗೂ ವಿಜ್ಞಾನ ಶಿಕ್ಷಕರಿಗೆ. ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರು ಉಪಾಧ್ಯಕ್ಷರು ಇನ್ನೂ ಅನೇಕ ಮುಖ್ಯ ಅತಿಥಿಗಳು ಭಾಗವಹಿಸಿ ಕಾರ್ಯಕ್ರಮ ಬಹಳ ಯಶಸ್ವಿಗೊಳಿಸಿದರು