
ಬೀದರ: ರಾಷ್ಟ್ರೀಯ ಅಂಚೆ ಸಪ್ತಾಹದ ಅಂಗವಾಗಿ ಜನಸಂಪರ್ಕ ಸಭೆಯನ್ನು ಬೀದರ್ ಪ್ರಧಾನ ಅಂಚೆ ಕಚೇರಿಯಲ್ಲಿ ಆಯೋಜಿಸಲಾಗಿತ್ತು. ಸಭೆಯನ್ನು ಉದ್ಘಾಟಿಸಿ ಮಾತನಾಡಿದ ವಿ ಎಲ್ ಚಿತಕೋಟೆ ಅಂಚೆ ಅಧೀಕ್ಷಕರು , ಇಲಾಖೆಯ ವಿವಿಧ ಸೇವೆಗಳ ಬಗ್ಗೆ ಸವಿಸ್ತಾರವಾಗಿ ಅರಿವು ಮೂಡಿಸಿದರು
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಶ್ರೀ ದಿಲಶದ್ ಮಹತ್ ತಹಶೀಲ್ದಾರ್ ಬೀದರ್ ಅವರು ಮಾತನಾಡುತ್ತಾ, ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ , ಅಂಚೆ ಇಲಾಖೆಯು ಮತದಾರರ ಗುರುತಿನ ಚೀಟಿಗಳನ್ನು ತುಂಬಾ ಶೀಘ್ರವಾಗಿ ಮತ್ತು ಸರಿಯಾಗಿ ವಿಲೇವಾರಿ ಮಾಡಿದ್ದನ್ನು ಸ್ಮರಿಸಿದರು. ಮತ್ತು ಕಳೆದ ವಾರವೇ ಸುಮಾರು 15000 ಕ್ಕೂ ಹೆಚ್ಚು ನೋಟಿಸ್ ಗಳನ್ನ ಕಂದಾಯ ಇಲಾಖೆ , ಬೀದರ್ ಪ್ರಧಾನ ಅಂಚೆ ಕಚೇರಿಗೆ ಕಳುಹಿಸಿದ್ದು , ಇಲಾಖೆಯವರು ಅದನ್ನು ಒಂದೇ ದಿನದಲ್ಲಿ ಬುಕ್ ಮಾಡಿ ದಾಖಲೆ ಸಾಧಿಸಿದ್ದಾರೆ ಎಂದು ಶ್ಲಾಘಿಸಿದರು. ಈ ಇಲಾಖೆಯು, ಪ್ರತಿಯೊಬ್ಬರ ಜೀವನದಲ್ಲಿಯೂ ಹಾಸುಹೊಕ್ಕಾಗಿ , ಸಾಮಾನ್ಯ ಜನರೊಂದಿಗೆ ಆತ್ಮೀಯವಾದ ಸಂಬoಧವನ್ನು ಹೊಂದಿದೆ ಎಂದು ನುಡಿದರು
ಇನ್ನೋರ್ವ ಅತಿಥಿಗಳಾದ ಶ್ರೀ ಬಿ ಜಿ ಶೆಟ್ಕರ್ ಮಾತನಾಡಿ, ಸಾರ್ವಜನಿಕರು ಇಲಾಖೆಯ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು
: ಜಿಲ್ಲೆಯ ಅಂಗವಿಕಲರ ಕ್ಷೇಮಾಭಿವೃದ್ಧಿ ಅಧಿಕಾರಿಗಳು , ಶ್ರೀ ಸುಭಾಷ್ ರತ್ನ ಅವರು ಇಲಾಖೆಯು ಕೇಂದ್ರ ಹಾಗು ರಾಜ್ಯ ಸರಕಾರದ ಯೋಜನೆಗಳ ಅನುಷ್ಠಾನವನ್ನು ಬಹಳ ಮುತುವರ್ಜಿಯಿಂದ ಮಾಡುತ್ತಲಿದೆ ಎಂದರು.
ಚಿದಾನoದ ಕಟ್ಟಿ ಸ್ವಾಗತಿಸಿದರು , ಕಲ್ಲಪ್ಪ ಕೋಣಿ ಪ್ರಾಸ್ತಾವಿಕವಾಗಿ ಮಾತನಾಡಿದರು , ದತ್ತಾತ್ರಿ ಅವರು ವಂದಿಸಿದರು. ಮಂಗಳ ಭಾಗವತ್ ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರು
