ಬೀದರ.. ನಗರದ ಶಿವಾಜಿ ನಗರದಲ್ಲಿ ಶಿವಾಜಿ ನಗರ ಗೇಳೆಯರ ಬಳಗ ಹಾಗೂ ಜೈ ಭವಾನಿ ರಂಗಭೂಮಿ ಕಲಾವಿದರ ಸಂಘ ಚಿಟ್ಟಾ ಬೀದರ ಇವರ ಸಂಯುಕ್ತಾಶ್ರಯದಲ್ಲಿ ದಸರಾ ಮಹೋತ್ಸವ ನಿಮಿತ್ಯ, ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಕಾರ್ಯಕ್ರಮಗಳು ಅಕ್ಟೋಬರ 10 ರಂದು ರಾತ್ರಿ 7 ಗಂಟೆಯಿoದ 10-30 ಗಂಟೆ ವರೆಗೆ ಜರುಗಿತು. ಕಾರ್ಯಕ್ರಮವನ್ನು ಬೀದರ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಉದ್ಘಾಟಿಸಿ, ನಮ್ಮ ದೇಶ ವಿವಿಧತೆಯಲ್ಲಿ ಏಕತೆ, ಹಬ್ಬ ಹರಿದಿನಗಳಲ್ಲಿ ಮಹಿಳಾ ಸಮುದಾಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಿಕೊಡುವುದುರ ಮೂಲಕ ನಮ್ಮ ನೆಲದ ಸಂಸ್ಕೃತಿಯನ್ನು ಶ್ರೀಮಂತವಾಗಿಸಿದೆ. ನಾರಿಶಕ್ತಿ ದೇಶದ ಶಕ್ತಿಯಾಗಿದೆ ಭೂಮಿ ತಾಯಿ, ಭಾರತಾಂಬೆ, ಕನ್ನಡಾಂಬೆ, ಗಂಗಾಮಾತೆ ಕಾವೇರಿ ಮಾತೆ, ಗೋದಾರವರಿ ಮಾತೆ ಅನ್ನದಾತೆ ಗೌರವದ ಪರಂಪರೆ ನಮ್ಮ ನೆಲದ ಪರಂಪರೆಯಾಗಿದೆ. ದಸರಾ ಒಂದು ಸಾಂಸ್ಕೃತಿಕ ಸಂಗೀತ ವೈಭವಾಗಿದೆ. ಎಲ್ಲರನ್ನು ಕರೆದು ಕಲಿಸುವ ಪಾಠವಾಗಿದೆ. ಮಹಿಳಾ ತಂಡದಿoದ ಕೋಲಾಟ ನೃತ್ಯ ಪ್ರದರ್ಶನ ಮಾಡಿದರು. ಅಧ್ಯಕ್ಷತೆ ಶ್ರೀ ಸಂಜುಕುಮಾರ ಪಾಟೀಲ್ ವಹಿಸಿದರು. ನಗರ ಸಭೆ ಸದಸ್ಯರಾದ ರಾಜಾರಾಮ ಚಿಟ್ಟಾ, ಯುವ ಮುಖಂಡ ಪೀರಪ್ಪ ಯರನಳ್ಳಿ, ಸಂತೋಸ ಜೋಳದಪ್ಪಗೆ, ಪಾಡುರಂಗ ಸಾಧು ಘಾಟ್ ಬಕ್ಕಗೊಂಡ, ವಿದ್ಯಾವೀರ ನಿರ್ಣಕರ, ಅಶೋಕ ದೂಮಲ್ ,ಬಾಜೀರಾವ ಪಾಟೀಲ್ ವೀಜಯಕುಮಾರ ಪಾಟೀಲ್ ಲೋಕಶೇಟ್ಟಿ ವಿಜಯಕುಮಾರ ಶಿವಾಜಿ ಕಾವಳೆ, ಬಿಕೆ ಚೌದ್ರಿ ಚೇತನ ಭಾವಿ ವೀರಶೇಟ್ಟಿ ದೇಶಮುಖ ಸಂಗಪ್ಪ ಚಮಕಿ , ವೀರ ಶೇಟ್ಟಿ ಚಿಮಕೊಡೆ, ಶರಣು ಗೌಳಿ, ಜೈಭವಾನಿ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಶೇಷಪ್ಪಾ ಚಿಟ್ಟಾ, ಉಪಸ್ಥಿಯಲ್ಲಿ ಕಾರ್ಯಕ್ರಮ ನೇರವೇರಿತು. ಸ್ವಾಗತ ಕಾರ್ಯಕ್ರಮದ ನಿರೂಪಣೆ ಸಾಹಿತಿ ಡಾ. ಸುಬ್ಬಣ್ಣ ಕರಕನಳ್ಳಿ ಮಾಡಿದರು.

Leave a Reply

Your email address will not be published. Required fields are marked *