
ಬೀದರ. ನಗರದ ಶಿವಾಜಿ ನಗರದಲ್ಲಿ ಶುಕ್ರವಾರ ಸಂಜೆ ಗಂಟೆಗೆ ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ, ಶಿವಾಜಿ ನಗರದ ಗೆಳೆಯರ ಬಳಗದ ವತಿಯಿಂದ ಆಯೋಜನೆ ಮಾಡಿರುವ ಕರ್ನಾಟಕ ಸಂಭ್ರಮ-50 ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಬ್ಯಾಂಕ ಕಾಲೋನಿ ಬ್ರಹ್ಮಕುಮಾರಿ ವಿದ್ಯಾಲಯದ ಪಾರ್ವತಿ ಬೈನಜಿ ಕಾರ್ಯಕ್ರಮ ಉದ್ಘಾಟಿಸಿ, ನೆಲದ ಸಂಸ್ಕೃತಿ ಶ್ರೀಮಂತಿಗೆ ದಸರಾ ಹಬ್ಬ ಸಾಕ್ಷಿಯಾಗಿದೆ. ಯುವ ಪಿಳಿಗೆಗೆ ನೆಲದ ಸಾಹಿತ್ಯ ಸಂಸ್ಕೃತಿಯನ್ನು ಒಂದಾತ್ಮದಿoದ ಬೀತ್ತಬೇಕ್ಕಾಗಿದೆ. ಮನುಷ್ಯರೆಲ್ಲರೂ ಒಂದೆ, ಗಂಡು ಹೆಣ್ಣು ಎರಡು ಜಾತಿಗಳು ಸಂಬoಧದಲ್ಲಿ ಪರಂಪರಗತವಾಗಿರುವ ಸಂಸ್ಕಾರಗಳು ಕಲಿಸುವುದು ಅನಿವಾರ್ಯವಾಗಿದೆ. ದಸರಾ ಹಬ್ಬವೇಂದರೆ ದೇಶದ ಹಬ್ಬವಾಗಿದೆ. ನಾರಿ ಕೇಂದ್ರತ ಹಬ್ಬವಾದರು, ಪುರುಷ್ಯರ ಶ್ರಮದಾನವಿರುತ್ತದೆ. ಜೈ ಭವಾನಿ ಮಾತೆ ಆರಾದಕರಾಗಿದ ಶಿವರಾಜ ಮಾರಾಜರು ನಮ್ಮ ನೆಲದೊಳಗೆ ಬದುಕಿನ ಸಂಸ್ಕಾರಗಳು ಬೀತ್ತಿಬೇಳಸಿದ್ದಾರೆ. ಕರ್ನಾಟಕ ಸಂಭ್ರಮ 50 ಪ್ರತಿಯೊಬ್ಬ ಕನ್ನಡಿಗ ಹೆಮ್ಮೆಯಿಂದ ಆಚರಣೆ ಮಾಡಬೇಕು. ಮಾತೃಭಾಷೆ ತಾಯಿ ಭಾಷೆಯಾಗಿದೆ ತಾಯಿ ಭಾಷೆ, ಸಾಹಿತ್ಯ ಸಂಸ್ಕೃತಿ ಉಳಿದರೆ, ಬೆಳದರೆ, ನಮ್ಮ ನೆಲದ ಸಂಸ್ಕೃತಿ ಶ್ರೀಮಂತವಾಗುತ್ತದೆ. ಕು. ಸೌಮ್ಯ ತನವಿ, ಶೃತಿ ಪ್ರತೀಕ್ಷಾ, ವೀಕ್ಷಿತಾ, ನಾಗೇಶ್ವರಿ, ವೇದಿಕಾ, ಜಾದವ, ಶುಭಾಶ್ರೀ ಆರಾದ್ಯ, ಪಾಟೀಲ್ ಸಾನವಿ, ಸಂಗಮೇಶ, ಸ್ರಾವಣಿ, ತಂಡದವರು ಜಾನಪದ ನೃತ್ಯ ಕನ್ನಡ ಹಾಡುಗಳು ದೇಶ ಭಕ್ತಿಗೀತೆಗಳು ಪ್ರದರ್ಶನ ಮಾಡಿದರು. ಶಿವಾಜಿನಗರ ಗೆಳೆಯರ ಬಳಗದ ಅಧ್ಯಕ್ಷ ಸಂಜೀವಕುಮಾರ ಪಾಟೀಲ್, ಪಾಡುರಂಗ ಮಹಾರಾಜರು, ಬಕ್ಕಪ್ಪ ನಾಗೂರೆ, ವಿಧವೀರ ನಿಣ್ಣೇಕರ್ ಅಶೋಕ ದೋಮಲ್ ಸಂಗಪ್ಪ ಜಮಕೂರೆ, ಪಾರ್ವತಿ ರಡ್ಡಿ, ಸಂಜುಕುಮಾರ ಮರಪಳ್ಳಿ, ವಿಜಯಕುಮಾರ ಲಕ್ಷಶೇಟ್ಟಿ, ಬಿಕೆ ಚೌದ್ರಿ ಬಾಜಿರಾವ ಪಾಟೀಲ್ ವೀರಶೇಟ್ಟಿ ದೇಶಮುಖ, ಮೀನಾಬಾಯಿ, ಆಂಬಿಕಾ, ಸಂಗೀತಾ ಮೈನಾಳೆ, ಅನೀಲ ಮಡಿವಾಳ, ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ ದಸರಾ ಸಾಂಸ್ಕೃತಿಕ ಸಂಭ್ರಮ ಸಾಂಸ್ಕೃತಿಕ ಕಲಾ ಪ್ರದರ್ಶನ ಮಾಡಿದ ಎಲ್ಲಾ ಮಕ್ಕಳಿಗೆ ಕರ್ನಾಟಕ ಸಂಭ್ರಮ 50 ಪ್ರಮಾಣ ಪತ್ರವನ್ನು, ನೀಡಿ ಗೌರವಿಸಲಾಯಿತು. ಶಿವಾಜಿ ನಗರದ ಹಿರಿಯರಾದ ಬಕ್ಕಪ್ಪ ಪಾಪಗೊಂಡ ರವರಿಗೆ ವಿಶೇಷವಾದ ಸನ್ಮಾನ ಮಾಡಲಾಯಿತು. ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ ಅಧ್ಯಕ್ಷ ಡಾ. ಸುಬ್ಬಣ್ಣ ಕರಕನಳ್ಳಿ ಮಾಡಿ ಕರ್ನಾಟಕದ ನೆಲದವರಾದ ನಾವು ಕರ್ನಾಟಕದ ಕುಲದವರು ಹೌದು. ನೆಲದ ಭಾಷೆ ಸಾಹಿತ್ಯ ಸಂಸ್ಕೃತಿ ಪ್ರಸಾರ ಮಾಡುವ ಕಾರ್ಯವನ್ನು ನಾವು ಮಾಡಿದಾಗ, ಈ ನೆಲದ ಜನರಲ್ಲಿ ಸಂಸ್ಕಾರದ ಪ್ರಜ್ಞೆಬೆಳೆಯುತ್ತದೆ. ಸಮಾಜಮುಖಿ ಕಾರ್ಯಗಳು ನಡೆಯುತ್ತವೆ. ಏಕತೆ ಭಾವೈಕ್ಯತೆ ಭಕ್ತಿ ಬೆಳೆಯುತ್ತದೆ. ಇದರಿಂದ ಅಸಮಾನತೆಯನ್ನು ತಡಯಲು ಸಾಧ್ಯವಾಗುತ್ತದೆ. ನಾಡಿನ ಸಾಂಸ್ಕೃತಿಕ ಸಂಘಟನೆಗಳು ನಾಡಿಗಾಗಿ ದುಡಿಯಬೇಕು. ಕಾರ್ಯಕ್ರಮದ ನಿರೂಪಣೆ ಸಾಧು ಘಾಟ ಮಾಡಿದರು
