ಬಂಗಾರಪೇಟೆ: ಪಟ್ಟಣದ ಅಕ್ಕಚ್ಚಮ್ಮ ಕಲ್ಯಾಣ ಮಂಟಪದಲ್ಲಿ ರೋಟರಿ ಕ್ಲಬ್‌ನ ನಾಲ್ಕನೇ ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ವೃತ್ತಿ ಜೀವನ ಬದುಕಿನ ಜೊತೆಗೆ ಸಾಮಾಜಿಕ, ಮಾನವೀಯ ಸ್ಪಂದನೆ ನೀಡಲು ರೋಟರಿ ನಂತರ ವಿವಿಧ ಸಂಘ ಸಂಸ್ಥೆಗಳು ಕ್ರಿಯಾಶೀಲವಾಗಿ ತಮ್ಮ ಪಾತ್ರ ನಿರ್ವಹಿಸುತ್ತಿವೆ. ಇದರಿಂದಾಗಿ ದೇಶದ ವಿಶ್ವದ ವಿವಿಧೆಡೆ ಸೇವಾ ಚಟುವಟಿಕೆ ನಿರಂತರವಾಗಿ ಜರುಗುತ್ತಿರುತ್ತವೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೋಟರಿ ಸದಸ್ಯತ್ವ ಪಡೆದು ಸಾರ್ವಜನಿಕರು ಸೇವಾ ಚಟುವಟಿಕೆಗಳಲ್ಲಿ ಹೆಚ್ಚು ಹೆಚ್ಚು ತೊಡಗಿಕೊಳ್ಳಲು ಮುಂದೆ ಬರಲು ಮನವಿ ಮಾಡಿದರು.
ಪಟ್ಟಣದ ರೋಟರಿ ಕ್ಲಬ್ ನೂತನ ಪದಗ್ರಹಣ ಮಾಡಿದ ಅಶ್ವಥ್.ಆರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ರೋಟರಿ ಇಂಟರ್‌ನ್ಯಾಷನಲ್ ಸಂಸ್ಥೆ ಒಂದು ಸೇವಾ ಸಂಸ್ಥೆಯಾಗಿದ್ದು, ಸರ್ಕಾರ ಮಾಡದೇ ಇರುವ ಕೆಲಸಗಳನ್ನು ರೋಟರಿ ಸಂಸ್ಥೆ ನಿರ್ವಹಿಸಿಕೊಂಡು ಬರುತ್ತಿದೆ. ಸಂಸ್ಥೆಯು ಸುಮಾರು ೧೫೦ರಾಷ್ಟçಗಳಲ್ಲಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದೆ. ಆಗಾಗಿ ಈ ತಾಲ್ಲೂಕಿನಲ್ಲಿ ಮೊದಲ ಆದ್ಯತೆಯಾಗಿ ಶಿಕ್ಷಣ, ಆರೋಗ್ಯ, ಪರಿಸರದ ಬಗ್ಗೆ ಹೆಚ್ಚು ಒತ್ತು ನೀಡುವುದಲ್ಲದೆ, ಸರ್ಕಾರಿ ಶಾಲೆಗಳಲ್ಲಿ ಡೆಸ್ಕ್, ವಿದ್ಯಾರ್ಥಿಗಳಿಗೆ ಸಮವಸ್ತç, ನೋಟ್‌ಪುಸ್ತಕ ಇತರೆ ಸಾಮಾಗ್ರಿ, ಬಡಮಕ್ಕಳಿಗೆ ಸೈಕಲ್ ನೀಡುವಂತಹ ಕಾರ್ಯಕ್ರಮ ಬೂದಿಕೋಟೆ ಹಾಗೂ ಬಲಮಂದೆ ಗ್ರಾಮದಲ್ಲಿ ಪ್ರಾರಂಭ ಮಾಡುತ್ತೇವೆ, ಹಾಗೂ ಆರೋಗ್ಯದ ದೃಷ್ಠಿಯಿಂದ ಕಣ್ಣು ತಪಾಸಣೆ ಶಿಭಿರ, ಹೃದಯ ತಪಾಸಣೆ ಶಿಭಿರ, ಕ್ಯಾನ್ಸರ್ ತಪಾಸಣೆ ಶಿಭಿರ, ರಕ್ತದಾನ ಶಿಭಿರಗಳಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಸುಮಾರು ೧೦ ಶಾಲೆಗಳಲ್ಲಿ ಇ-ಪಾಠಶಾಲೆಗಳನ್ನು ಪ್ರಾರಂಭಿಸುತ್ತೇವೆ. ದೇಶದ ಬೆನ್ನೆಲುಬಾಗಿರುವ ರೈತರಿಗೆ ಕಲ್ಪವೃಕ್ಷ ಯೋಜನೆಯಲ್ಲಿ ತೆಂಗಿನ ಸಸಿ ಹಾಗೂ ಹಸುಗಳು ನೀಡುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ. ಪಟ್ಟಣದಲ್ಲಿ ಹಲವಾರು ವರ್ಷಗಳಿಂದ ವಿವಿಧ ಸಾಮಾಜಿಕ ಚಟುವಟಿಕೆಗಳನ್ನು ಯಶಸ್ವಿಯಾಗಿ ನೆರವೇರಿಸುತ್ತ ಬಂದಿದ್ದು, ಹಾಗೂ ಇನ್ನು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚು ಸದಸ್ಯತ್ವ ಮಾಡಿಸಿ ರೋಟರಿ ಸಂಸ್ಥೆ ಬೆಳೆಸಲಾಗುವುದು ಎಂದರು.
ಈ ವೇಳೆ ಪ್ರಸಕ್ತ ಸಾಲಿನ ಪದಾಧಿಕಾರಿಗಳಾಗಿ ಆಯ್ಕೆಗೊಂಡಿರುವ ಮಂಜುನಾಥ್.ಎಲ್.ಎA, ಕಾರ್ಯದರ್ಶಿಯಾಗಿ ಉಮೇಶ್ ಕುಮಾರ್.ಕೆ.ಸಿ, ಉಪಾಧ್ಯಕ್ಷರಾಗಿ ನಾಗರಾಜ್.ಎಂ, ಖಜಾಂಚಿ ಮೋಹನ್.ಕೆ.ಬಿ, ಜಂಟಿ ಕಾರ್ಯದರ್ಶಿಯಾಗಿ ನಂಜಪ್ಪ.ಕೆ.ಬಿ, ರಾಮಕೃಷ್ಣಪ್ಪ.ಎಲ್, ಅಪ್ಪಯ್ಯಗೌಡ.ಸಿ, ಚಂದ್ರಶೇಖರ್‌ರೆಡ್ಡಿ, ಯುತ್ ಸೇವಾ ನಿರ್ದೇಶಕರಾಗಿ ಸುನೀಲ್‌ಕುಮಾರ್, ನರಸಿಂಹಯ್ಯ, ಮಹೇಶ್‌ರೆಡ್ಡಿ, ಬಿ.ವೆಂಕಟಾಚಲಗೌಡ, ಯುವರಾಜ್, ಎಲ್.ರಾಜಪ್ಪ, ಶಂಕರ್, ಶ್ರೀಧರ್.ವಿ.ಎಂ, ವೆಂಕಟೇಶ್, ನಾರಾಯಣಸ್ವಾಮಿ, ಪ್ರಕಾಶ್.ಎನ್, ಬಿ.ಪಿ.ಮಹೇಶ್, ನಾಗೇಶ್.ಆರ್, ವೆಂಕಟಾಚಲಪತಿ ಆಯ್ಕೆಗೊಂಡರು.

ದೇಶಾದ್ಯಂತ ಲಕ್ಷಾಂತರ ಸದಸ್ಯತ್ವ ಹೊಂದಿರುವ ರೋಟರಿ ಕ್ಲಬ್ ನಿಸ್ವಾರ್ಥದಿಂದ ವಿವಿಧ ಸಾಮಾಜಿಕ ಸೇವೆ ಸಲ್ಲಿಸಲು ಪ್ರೇರಣೆ ನೀಡುವಂತಹ ಅಂತಾರಾಷ್ಟ್ರೀಯ ಸಂಸ್ಥೆಯಾಗಿದೆ ಎಂದು ಡಿಸ್ಟ್ರಿಕ್ ಗರ್ವನರ್ ಶ್ರೀಧರ್.ವಿ.ಆರ್ ಹೇಳಿದರು.

Leave a Reply

Your email address will not be published. Required fields are marked *