ಚಿಕ್ಕಬಳ್ಳಾಪುರ :ಸಿ. ವಿ. ವೆಂಕರಾಯಪ್ಪನವರ ಹುಟ್ಟುಹಬ್ಬದ ಪ್ರಯುಕ್ತ ಸಮಾನ ಮನಸ್ಕರ ಪರಿಸರ ಸಂರಕ್ಷಣಾ ವೇದಿಕೆ ವತಿಯಿಂದ ಭೋದಗಾನಹಳ್ಳಿ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಬುಕ್. ಪೆನ್ನು. ಪೆನ್ಸಿಲ್ಲು ಸಿಹಿ ಹಾಗೂ ಗಿಡಗಳನ್ನು ಕೊಟ್ಟು ಹುಟ್ಟುಹಬ್ಬ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ವಕೀಲರಾದ ಅಭಿಷೇಕ್ ಮಾತನಾಡಿ ಸಿವಿವಿ ರವರು ಚಿಕ್ಕಬಳ್ಳಾಪುರದ ರಾಜಕೀಯ ಭೀಷ್ಮ ರಾಜಕೀಯ ದುರೀಣ. ವಿದ್ಯಾ ದಾನಿಗಳು. ಅಂತವರ ಹೆಸರಿನಲ್ಲಿ ಹುಟ್ಟುಹಬ್ಬ ಆಚರಣೆ ಮಾಡುವುದು ನಮಗೆ ತುಂಬಾ ಸಂತೋಷವಾಗಿದೆ. ಹಾಗೂ ಅವರ ಆದರ್ಶಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಪಾಲಿಸಿಕೊಳ್ಳಬೇಕು. ಜನರಿಗೆ ಉದ್ಯೋಗಗಳನ್ನು ನೀಡಿ ಜೀವನ ನಡೆಸಲು ಕಾರಣಕರ್ತರಾಗಿದ್ದಾರೆ. ಎಂದು ತಿಳಿಸಿದರು.
ಸಾಫ್ಟ್ವೇರ್ ಇಂಜಿನಿಯರ್ ನರ್ಮದಾ ರೆಡ್ಡಿ ಮಾತನಾಡಿ ಸಿವಿವಿ ರವರ ಶಿಸ್ತು ಸಮಯ ಪಾಲನೆ ದಾನ ಧರ್ಮದ ಗುಣಗಳನ್ನು ನಾವು ಸಹ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ರಾಜ್ಯ ಪರಿಸರ ಪುರಸ್ಕೃತ ಡಾ. ಗುಂಪು ಮರದ ಆನಂದ್ ಮಾತನಾಡಿ ಸಿವಿವಿ ರವರು ಚಿಕ್ಕಬಳ್ಳಾಪುರ ನಗರಸಭೆಯಲ್ಲಿ 25 ವರ್ಷಗಳ ಕಾಲ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಎಂಎಲ್ಎ ಆಗಿ ಕಾರ್ಯ ನಿರ್ವಹಿಸಿದರು. ಜೊತೆಗೆ ಶಿಕ್ಷಣ ಕ್ರಾಂತಿಯನ್ನು ಮಾಡಿ ಚಿಕ್ಕಬಳ್ಳಾಪುರದಲ್ಲಿ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದರು. ಹಾಗೂ ಚಿಕ್ಕಬಳ್ಳಾಪುರದಲ್ಲಿ ಸುಮಾರು 16 ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸಿ ಎಷ್ಟು ವಿದ್ಯಾರ್ಥಿಗಳಿಗೆ ಆಶಾಕಿರಣ ರಾಗಿದ್ದಾರೆ. ಇಂತಹ ಮಹಾನ್ ವ್ಯಕ್ತಿಯ ಹೆಸರಿನಲ್ಲಿ ಬಡ ಮಕ್ಕಳಿಗೆ ನೋಟ್ ಬುಕ್ ಗಳನ್ನು ವಿತರಿಸುವುದು ತುಂಬಾ ಸಂತೋಷದ ವಿಷಯವಾಗಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಕಾರ್ಮಿಕ ಸಂಘದ ಅಧ್ಯಕ್ಷರಾದ ಪ್ರಕಾಶ್ ಮಾತನಾಡಿ, ಸಿವಿವಿ ರವರ ಆದರ್ಶ ಗುಣಗಳನ್ನು ನಾವೆಲ್ಲ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು.ಇತರರಿಗೆ ಮಾದರಿಯಾಗಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆವಿ ಪಂಚಗಿರಿ ದತ್ತಿಯ ಮ್ಯಾನೇಜರ್ ಕೆ ಆರ್ ಲಕ್ಷ್ಮಣಸ್ವಾಮಿ.ವೇದಿಕೆಯ ಸದಸ್ಯರಾದ ಹೋಟೆಲ್ ರಾಮಣ್ಣ. ನಾರಾಯಣಸ್ವಾಮಿ. ಪಿಪಿಎಚ್ಎಸ್ ಶಾಲೆಯ ಶಿಕ್ಷಕರಾದ ನರಸಿಂಹಯ್ಯ. ಶಿವಣ್ಣ. ನರಸಿಂಹಮೂರ್ತಿ. ಶಾಲೆಯ ಮುಖ್ಯ ಶಿಕ್ಷಕಿ ವಿಜಯ ಹಾಗೂ ಶಿಕ್ಷಕರಾದ ತಿರುಪತಮ್ಮ . ಎಸ್‌ಡಿಎಂಸಿ ಅಧ್ಯಕ್ಷರಾದ ಶಿಲ್ಪ ಅಡುಗೆ ಸಿಬ್ಬಂದಿಯಾದ ಮಂಜಮ್ಮ ಗಾಯತ್ರಿ, ಮಕ್ಕಳು , ಪೋಷಕರೂ ಮತ್ತು ಇತರರು ಪಾಲಗೊಂಡಿದ್ದರು.

Leave a Reply

Your email address will not be published. Required fields are marked *