Post navigation ಸರ್ಕಾರಿ ಸವಲತ್ತು, ಎಲ್ಲರಿಗೂ ಸರಿ ಸಮಾನವಾದಂತ ನ್ಯಾಯ, ಸಂವಿಧಾನ ಪೀಠಿಕೆ ಮುಖ್ಯ ಪಾತ್ರ ವಹಿಸುತ್ತದೆ : ತಾಹಶೀಲ್ದಾರ್ ವಿಜಯ್ ಕುಮಾರ್ ಹೊಸಕೋಟೆ : ಒಂದು ರಾಷ್ಟ್ರವು ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಸದೃಢವಾಗಲು, ಸರ್ಕಾರಿ ಸವಲತ್ತು, ಎಲ್ಲರಿಗೂ ಸರಿ ಸಮಾನವಾದಂತಹ ನ್ಯಾಯ ಸಿಗಲು ಆ ದೇಶದ ಸಂವಿಧಾನ ಪೀಠಿಕೆಯ ಅಂಶಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ತಾಹಶೀಲ್ದಾರ್ ವಿಜಯ್ ಕುಮಾರ್ ಅವರು ಹೇಳಿದರು. ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಏರ್ಪಡಿಸಲಾಗಿದ್ದ ತಾಲೂಕು ಮಟ್ಟದ “ಅಂತರರಾಷ್ಟ್ರೀಯ ಪ್ರಜಾ ಪ್ರಭುತ್ವ ದಿನಾಚರಣೆಯ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಅರ್. ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಸಂವಿಧಾನದ ಪೀಠಿಕೆ ಬೋಧಿಸಿ ಅವರು ಮಾತನಾಡಿದರು. ಅಂತರಾಷ್ಟ್ರೀಯ ಸಂವಿಧಾನ ದಿನಾಚರಣೆಯನ್ನು ಸಂವಿಧಾನ ಅಳವಡಿಸಿಕೊಂಡಿರುವ ವಿಶ್ವದ ಪ್ರಜಾಪ್ರಭುತ್ವ ದೇಶಗಳಲ್ಲಿ ಆಚರಿಸಲಾಗುತ್ತಿದೆ. ಭಾರತ ವಿಶ್ವದಲ್ಲಿಯೇ ದೊಡ್ಡ ಸಂವಿಧಾನ ಹೊಂದಿರುವ ದೇಶ. ನಮ್ಮ ಸಂವಿಧಾನವು ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನತೆ, ಸ್ವಾತಂತ್ರ್ಯವನ್ನು ಕಲ್ಪಿಸಿಕೊಟ್ಟು ದೇಶದ ಸರ್ವತೋಮುಖ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಸಿದ್ದರಾಜು ಮ್ಯಾನೇಜರ್ ಮೂರ್ತಿ ಎಫ್ ಡಿ ಸಿ ವಿಕ್ರಂ ಲೋಕೇಶ್ ರಾಮೇಗೌಡ ವಾರ್ಡನ್ ಪುಟ್ಟಸ್ವಾಮಿ ಸುಬ್ರಮಣಿ ಹಾಗೂ ವನಿತಾ ಶೋಭಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಂಘ ಸಂಸ್ಥೆಯ ಪದಾಧಿಕಾರಿಗಳು, ಶಿಕ್ಷಕ ವೃಂದದವರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ದಲಿತ ಮುಖಂಡ ನಾರಾಯಣಸ್ವಾಮಿರವರ ಕೊಲೆಯನ್ನು ಖಂಡಿಸಿ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ