ದಿನಾಂಕ 7-3-2024 ಗುರುವಾರ ಹಾಗೂ 8, 3, 2024 ಶುಕ್ರವಾರ 12.30 ಗಂಟೆಗೆ ಬಸವೇಶ್ವರ ವಾಣಿಜ್ಯಕಲಾ ವಿಜ್ಞಾನ ಮಹಾವಿದ್ಯಾಲಯರಾಜಾಜಿನಗರದ ಮತದಾನ ಸಾಕ್ಷರತೆ ಸಂಘ ಹಾಗೂ ಎನ್ ಎಸ್ಎಸ್ ಸಹಯೋಗದಲ್ಲಿ ಮಹಿಳಾ ದಿನಾಚರಣೆಯ ವಿಶೇಷ ಎರಡು ದಿನಗಳ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಮತದಾನದ ಮಹತ್ವ – ನೋಂದಣಿ ಪ್ರಕ್ರಿಯೆ ಮತ ಚಲಾವಣೆಯ ಬಗ್ಗೆ ಜಾಗ್ರತಿ ಮಾಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 7-3, 2024ರಂದು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಅರಿವು ಮಾಡಿಸುವ ತರಬೇತಿ ನೀಡಲಾಯ್ತು. ಎನ್ಎಸ್ಎಸ್ ಅಧಿಕಾರಿ ಶ್ರೀಗಿರೀಶ ವೈ ಮತದಾನದ ಸಂದರ್ಭದಲ್ಲಿ, ಮಹಿಳೆಯರು ತಮ್ಮಲ್ಲಿ ಕಡ್ಡಾಯ ವಾಗಿ ವೋಟರ್ ಐ ಡಿ ಇರಬೇಕಾಗಿರುವುದರ ಮಹತ್ವವನ್ನು ಹೇಗೆ ತಿಳಿಸಬೇಕೆಂದು ತರಬೇತಿ ನೀಡಿದರು. 8, 3, 2024 ಶುಕ್ರವಾರದಂದು ತರಬೇತಿ ಪಡೆದ ವಿದ್ಯಾರ್ಥಿಗಳು ಹೆಚ್ಚು ಮಹಿಳೆಯರಿದ್ದ ಸಮಾರಂಭದಲ್ಲಿ ಭಾಗವಹಿಸಿ ಮತದಾನದ ಹಕ್ಕು ಮತ್ತು ಕರ್ತವ್ಯದ ಬಗ್ಗೆ ಅರಿವು ಮಾಡಿಸಿರುತ್ತಾರೆ. ಪ್ರಾಂಶುಪಾಲರಾದ ಡಾ. ಶೀಲಾದೇವಿ ಎಸ್.ಮಳೀಮಠರವರು ತರಬೇತಿಯನ್ನು ಉದ್ಘಾಟಿಸಿ ಮತದಾನದ ಮಹತ್ವವನ್ನು ಹೆಚ್ಚಿನ ಸಂಖ್ಯೆಯಲ್ಲಿ ಅರಿವು ಮಾಡಿಸಿ ದತ್ತಾಂಶ ಸಂಗ್ರಹಿಸಿ ಎಂದು ಕರೆಕೊಟ್ಟರು. ಮತದಾನ ಸಾಕ್ಷರತಾ ಸಂಘ ಹಾಗೂ ಎನ್ಎಸ್ಎಸ್ ಘಟಕದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ತರಬೇತಿಯೊಂದಿಗೆ ವಿಚಾರ ವಿನಿಮಯವನ್ನು ಯಶಸ್ವಿಗೊಳಿಸಿದ್ದು ಪರಿಣಾಮದಾಯಕವಾಗಿತ್ತು.

Leave a Reply

Your email address will not be published. Required fields are marked *