ಯಲಹಂಕ : ದಲಿತ ಪರ ಹೋರಾಟಗಾರ, ದೀನ ದಲಿತರು, ತುಳಿತಕ್ಕೊಳಗಾದ ಜನರಿಗೆ ಹಲವು ಹೋರಾಟಗಳು ಮತ್ತು ಚಳುವಳಿಗಳ ಮೂಲಕ ಸಾಮಾಜಿಕ ನ್ಯಾಯ ನೀಡುವ ಮೂಲಕ‌ ಬಡವರ ಬದುಕಿಗೆ ಆಸರೆಯಂತಿದ್ದ ಅಟ್ಟೂರು ನಾಗರಾಜ್(70)ರವರು ಏ.19ರ ಶುಕ್ರವಾರ ನಿಧನರಾಗಿದ್ದಾರೆ.

ದಲಿತ ಸಂಘಟನೆ ಹುಟ್ಟು ಹಾಕಿ, ಹಲವು ಹೋರಾಟಗಳು, ಚಳವಳಿಗಳ ಮೂಲಕ ಯಲಹಂಕ ಮತ್ತು ಸುತ್ತಮುತ್ತಲಿ ಪ್ರದೇಶದಲ್ಲಿ ಅಟ್ಟೂರು ನಾಗರಾಜ್ ರವರು ಮುಂಚೂಣಿ ಹೋರಾಟಗಾರರಾಗಿ ಮನೆ ಮಾತಾಗಿದ್ದರು. ಇವರ ನಿಧನದಿಂದ ಯಲಹಂಕ ಭಾಗದಲ್ಲಿ ಹೋರಾಟದ ಕೊಂಡಿಯೊಂದು ಕಳಚಿದಂತಾಗಿದ್ದು, ಶ್ರೀಯುತರ ನಿಧನಕ್ಕೆ ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಸೇರಿದಂತೆ ಹಲವು ದಲಿತ ಮುಖಂಡರು, ವಿವಿಧ ಪಕ್ಷಗಳ ಮುಖಂಡರು ಸಂತಾಪ ಸೂಚಿಸಿದ್ದಾರೆ.

ಮೃತರ ಶಾಂತಿ ಸಂಸ್ಕಾರಾದಿ ಸಮಾರಾಧನೆ ಕಾರ್ಯಕ್ರಮವನ್ನು ಏ.29ರ ಸೋಮವಾರ ದಂದು ಅಟ್ಟೂರಿನ ಅವರ ನಿವಾಸದಲ್ಲಿ ಏರ್ಪಡಿಸಲಾಗಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *