





ಯಲಹಂಕ : ರಣಧೀರ ಕಂಠೀರವ ಅಭಿಮಾನಗಳ ಸಂಘದ ವತಿಯಿಂದ ಯಲಹಂಕದ ನಗರ್ತಪೇಟೆ ರಸ್ತೆಯಲ್ಲಿ ಬುಧವಾರ ವರನಟ ಡಾ.ರಾಜಕುಮಾರ್ ರವರ 95 ನೇ ಜನ್ಮ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
95ನೇ ಜನ್ಮ ದಿನಾಚರಣೆ ಪ್ರಯುಕ್ತ 30ಕೆ.ಜಿ.ತೂಕದ ಕೇಕ್ ಕತ್ತರಿಸಿ, 75 ಕೆ ಜಿ ಯ ಉಪ್ಪಿಟ್ಟು ಮತ್ತು ಕೇಸರಿ ಬಾತ್ ತಯಾರಿಸಿ, ಮಕ್ಕಳು ಮತ್ತು ನಾಗರೀಕರಿಗೆ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ರಣಧೀರ ಕಂಠೀರವ ಅಭಿಮಾನಿಗಳ ಸಂಘದ ಶೇಖರ್, ಭಾಸ್ಕರ್, ನಾರಾಯಣ, ನಾಗರಾಜ್, ಮು.ಕೃಷ್ಣಮೂರ್ತಿ, ಯಲಹಂಕ ಶಕ್ತಿ ಸ್ನೇಹಕೂಟದ ರಾಜುಶೆಟ್ಟಿ, ಮುನಿರಾಜು, ರಾಮಕೃಷ್ಣ, ಮಂಜುನಾಥ್, ರಾಜಣ್ಣ, ನಾಗಾರ್ಜುನ, ದಶರಥ ,ವೀರಭದ್ರ ವೈ. ಸಿ., ಕುಮಾರ್ ಸೇರಿದಂತೆ ಡಾ.ರಾಜಕುಮಾರ್ ರವರ ಅಸಂಖ್ಯಾತ ಅಭಿಮಾನಿಗಳಿದ್ದರು.
ಸುದ್ದಿ ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿ
ಆರ್ ಹನುಮಂತು
9845085793. 7349337989