ಸಾರ್ವಜನಿಕರ ಸಹಕಾರದೊಂದಿಗೆ ಗಣೇಶ್ ಚತುರ್ಥಿಯನ್ನು
ಅರ್ಥಪೂರ್ಣವಾಗಿ ಆಚರಿಸಲಾಗುವುದು-ಜಿಲ್ಲಾಧಿಕಾರಿ ಗೋವಿಂದರೆಡ್ಡಿ
ಬೀದರ, ಜಿಲ್ಲೆಯ ಸಾರ್ವಜನಿಕರ ಹಾಗೂ ಗಣೇಶ ಮಹಾಮಂಡಳಿಯ ಸಹಕಾರದೊಂದಿಗೆ ಮುಂಬರುವ ಗಣೇಶ್ ಚತುರ್ಥಿಯನ್ನು ಅದ್ಧೂರಿ ಮತ್ತು ಅರ್ಥಪೂರ್ಣವಾಗಿ ಆಚರಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆದ ಗಣೇಶ್ ಉತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ನಗರದಲ್ಲಿ…
ರಾಷ್ಟ್ರೀಯ ಹೆದ್ದಾರಿಗೆ ಸರ್ವೀಸ್ ರಸ್ತೆ ನಿರ್ಮಿಸಲು ಸಚಿವ ಸತೀಶ್ ಜಾರಕಿಹೊಳಿಗೆ ಸಾವಕನಹಳ್ಳಿ ಗ್ರಾಮಸ್ಥರ ಮನವಿ.
ದೇವನಹಳ್ಳಿ: ಸಾವಕನಹಳ್ಳಿ ಗ್ರಾಮದಲ್ಲಿ ಎನ್ ಹೆಚ್ 207 ರಾಷ್ಟ್ರೀಯ ಹೆದ್ದಾರಿಗೆ ಸರ್ವಿಸ್ ರಸ್ತೆ ಇಲ್ಲದಿರುವುದು ಹಾಗೂ ರಾಜ ಕಾಲುವೆ ಮುಚ್ಚಿರುವುದರಿಂದ ಸಾವಕನಹಳ್ಳಿ, ಅನಿಘಟ್ಟ, ಬಿದಲೂರು ಮುಂತಾದ ಗ್ರಾಮಗಳಲ್ಲಿ ಜನರಿಗೆ ತೊಂದರೆ ಉಂಟಾಗಿದ್ದು ಇದನ್ನು ಸರಿಪಡಿಸಿಕೊಡಬೇಕು ಎಂದು ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್…
ಬಳ್ಳಾರಿ ಸೆ,10
ಜನರ ತೆರಿಗೆಯಿಂದ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳನ್ನು ನಡೆಸಿ- ಎಐಡಿಎಸ್ಓ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್
ಕಟ್ಟಡ, ಶೌಚಾಲಯ, ಶಿಕ್ಷಕರು ಸೇರಿದಂತೆ ಕರ್ನಾಟಕದ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳು ಎದುರಿಸುತ್ತಿರುವ ಕುಂದು ಕೊರತೆಗಳನ್ನು ನಿವಾರಿಸಲು ಕರ್ನಾಟಕ ರಾಜ್ಯ ಸರ್ಕಾರವು ಕಾರ್ಪೊರೇಟ್ ಕಂಪನಿಗಳಿಗೆ ಮನವಿ ಮಾಡಿರುವುದು ಮತ್ತು ಕೆಲವರು ಇದಕ್ಕೆ ಪ್ರತಿಕ್ರಿಯಿಸಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆ. ಈ ಬೆಳವಣಿಗೆಯನ್ನು ರಾಜ್ಯದ ಶಿಕ್ಷಣ ಪ್ರೇಮಿ ಜನತೆಯು ಕಳವಳದಿಂದ ಗಮನಿಸುತ್ತಿದ್ದಾರೆ.
ಖ್ಯಾತ ಉದ್ಯಮಪತಿಯೊಬ್ಬರ ಮುಂದೆ ಸರ್ಕಾರದ ಉನ್ನತ ಶಿಕ್ಷಣ ಸಚಿವರು ಮಂಡಿಸಿರುವಂತೆ, ಉನ್ನತ ಶಿಕ್ಷಣ ಕ್ಷೇತ್ರಕ್ಕೆ 3,256 ಕೋಟಿ, ಸರ್ಕಾರಿ ಪದವಿ ಕಾಲೇಜುಗಳಿಗೆ 1,997 ಕೋಟಿ, ಸರ್ಕಾರಿ ಪಾಲಿಟೆಕ್ನಿಕ್ ಮತ್ತು ಎಂಜಿನಿಯರಿಂಗ್ ಕಾಲೇಜುಗಳಿಗೆ 852 ಕೋಟಿ, ಕೌಶಲಾಭಿವೃದ್ಧಿ ಪ್ರಯೋಗಾಲಯಗಳಿಗೆ 386 ಕೋಟಿ, ಯೂನಿವರ್ಸಿಟಿ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿಗೆ 14 ಕೋಟಿ ಮತ್ತು ಡಾ.ಬಿ. ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್‌ಗೆ 6 ಕೋಟಿ ನೆರವಿನ ಬೇಡಿಕೆಯನ್ನು ಇಟ್ಟಿದ್ದಾರೆ.
ಒಂದು ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಶಿಕ್ಷಣವನ್ನು ನೀಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಜನರಿಂದ ಹೇರಳವಾಗಿ ಸಂಗ್ರಹಿಸಲ್ಪಡುವ ತೆರಿಗೆ ದುಡ್ಡನ್ನು ಆದ್ಯತೆಯ ಮೇರೆಗೆ ಶಿಕ್ಷಣಕ್ಕೆ ವಿನಿಯೋಗಿಸಬೇಕು. ಶಾಲಾ ಕಟ್ಟಡ, ಶಿಕ್ಷಕರು ಸೇರಿದಂತೆ ಇತ್ಯಾದಿ ಮೂಲಸೌಕರ್ಯಗಳ ಪೂರೈಕೆ ಸಂಪೂರ್ಣವಾಗಿ ಸರ್ಕಾರದ ಜವಾಬ್ದಾರಿಯೇ ಆಗಿರಬೇಕು. ಕಾರ್ಪೊರೇಟ್ ಕಂಪನಿಗಳು ಸಹಾಯ ಒದಗಿಸುವರು ಎಂಬ ಪರದೆಯ ಹಿಂದೆ ಸರ್ಕಾರವು ಚಾಕಚಕ್ಯತೆಯಿಂದ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಇರಾದೆ ಇರಬಹುದೇ ಎಂಬುದು ವಿದ್ಯಾರ್ಥಿ ಸಮುದಾಯವನ್ನು ಕಾಡುತ್ತಿರುವ ಪ್ರಶ್ನೆ. ಇಂದು ಖಾಸಗಿ ಕಂಪನಿಗಳು ಹೇರಳವಾಗಿ ಆರ್ಥಿಕ ನೆರವು ನೀಡಬಹುದು. ಆದರೆ ಕ್ರಮೇಣ ಈ ನೆರವಿನ ಹೆಸರಲ್ಲಿ ಅವರ ಹಕ್ಕು ಸ್ಥಾಪನೆಯಾಗಿ, ಸರ್ಕಾರಿ ಶಾಲಾ ಕಾಲೇಜುಗಳು ಖಾಸಗಿಯವರ ಪಾಲಾಗಬಹುದು ಎಂಬುದು ಶಿಕ್ಷಣಪ್ರೇಮಿ ಜನರ ಆತಂಕವಾಗಿದೆ.
ಈ ಹಿನ್ನೆಲೆಯಲ್ಲಿ, ರಾಜ್ಯದ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳು ಎದುರಿಸುತ್ತಿರುವ ಕೊರತೆಗಳನ್ನು ನಿವಾರಿಸಲು ಸರ್ಕಾರವು ಜನರ ತೆರಿಗೆಯ ದುಡ್ಡನ್ನು ಸದ್ವಿನಿಯೋಗಗೊಳಿಸಬೇಕು. ಮತ್ತು ಶಿಕ್ಷಣದ ಕುರಿತಾದ ಯಾವುದೇ ನಿರ್ಧಾರಕ್ಕೂ ಮುನ್ನ ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು ಮತ್ತು ಶಿಕ್ಷಣತಜ್ಞರು ಸೇರಿದಂತೆ ಜನಾಭಿಪ್ರಾಯ ಪಡೆಯುವ ಪ್ರಜಾತಾಂತ್ರಿಕ ಪ್ರಕ್ರಿಯೆಯನ್ನು…
ರೈತರ ಹಿತ ಕಾಪಾಡುವಲ್ಲಿ ಸಹಕಾರ ಸಂಘಗಳು ಮಹತ್ವದ ಪಾತ್ರ ವಹಿಸುತ್ತವೆ : ಕೃಷ್ಣಬೈರೇಗೌಡ
ಬ್ಯಾಟರಾಯನಪುರ : ರಾಜ್ಯದ ರೈತರ ಹಿತ ಕಾಪಾಡುವಲ್ಲಿ ಸಹಕಾರ ಸಂಘಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅಭಿಪ್ರಾಯ ಪಟ್ಟರು. ವ್ಯವಸಾಯ ಸೇವಾ ಸಹಕಾರ ಸಂಘ ನಿಯಮಿತ ಬ್ಯಾಟರಾಯನಪುರದ 2022-23ನೇ ಸಾಲಿನ ವಾರ್ಷಿಕ ಮಹಾಸಭೆ ಪ್ರಯುಕ್ತ ಜಕ್ಕೂರಿನ ಕೆಂಪೇಗೌಡ…
ವಾಹನ ಚಾಲಕರು ಬೇಕಾಗಿದ್ದಾರೆ.
ಮಾತೃ ಅಂದರ ಮತ್ತು ಇತರೆ ಅಂಗವಿಕಲರ ಶಿಕ್ಷಣ ಸಂಸ್ಥೆ ಯಲಹಂಕ. ಈ ಸಂಸ್ಥೆಗೆ ಅನುಭವವುಳ್ಳ ಅಥವಾ ನಿವೃತ್ತಿ ಹೊಂದಿರುವ ವಾಹನ ಚಾಲಕರು ಬೇಕಾಗಿದ್ದಾರೆ ಸಂಪರ್ಕಿಸಬೇಕಾದ ಸಂಖ್ಯೆ. 9886032632/ 9448593780
ಕಡೆ ಶ್ರಾವಣ ಶನಿವಾರ ಪ್ರಯುಕ್ತ
ಯಲಹಂಕ ಕೋಗಿಲು ಬಡಾವಣೆ, ಶ್ರಾವಣ ಮಾಸ ಪ್ರಯುಕ್ತ ಶ್ರೀ ಹನುಮಾನ್ ದೇವರಿಗೆ ಶ್ರೀ ವೆಂಕಟರಮಣ ದೇವರ ಅಲಂಕಾರ ದೇವಸ್ಥಾನದ ಮುಖ್ಯಸ್ಥರಿಂದ ಪ್ರಸಾದ ವಿನಯೋಗ. ಹಾಗೂ ಪೂಜೆ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನಡೆಯಿತು ಈ ಸಂದರ್ಭದಲ್ಲಿ ಅನೇಕ ಭಕ್ತಾದಿಗಳು ಬಂದು ದೇವರ ಕೃಪೆಗೆ…
ಶ್ರೀ ಕೃಷ್ಣ ಜನ್ಮಾಷ್ಟಮಿ.
ಯಲಹಂಕ ಮಾರುತಿ ನಗರ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಜಾಲಿ ಕಿಡ್ಸ್ ಮೊಂಟೆಸೆರಿ ಯಲ್ಲಿಸತತವಾಗಿ ಮೂರು ದಿನಗಳ ಕಾಲ (06-09-23 ರಿಂದ 08-09-23) ಬಹಳ ವಿಜೃಂಭಣೆಯಿಂದ ನಡೆಸಲಾಗಿತ್ತು. ಈ ಸಂದರ್ಭದಲ್ಲಿಪೋಷಕರು ಯಶೋಧೆಯಾಗಿ, ಮಕ್ಕಳು ರಾಧೆ, ಕೃಷ್ಣ ವೇಶ ಭೂಷಣ ಧರಿಸಿದ್ದರು. ಪೋಷಕರು…
ಕಡೆ ಶ್ರಾವಣ ಶನಿವಾರ ಪ್ರಯುಕ್ತ
ಯಲಹಂಕ ಕೋಗಿಲು ಬಡಾವಣೆ, ಶ್ರಾವಣ ಮಾಸ ಪ್ರಯುಕ್ತ ಶ್ರೀ ಹನುಮಾನ್ ದೇವರಿಗೆ ಶ್ರೀ ವೆಂಕಟರಮಣ ದೇವರ ಅಲಂಕಾರ ದೇವಸ್ಥಾನದ ಮುಖ್ಯಸ್ಥರಿಂದ ಪ್ರಸಾದ ವಿನಯೋಗ. ಹಾಗೂ ಪೂಜೆ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನಡೆಯಿತು ಈ ಸಂದರ್ಭದಲ್ಲಿ ಅನೇಕ ಭಕ್ತಾದಿಗಳು ಬಂದು ದೇವರ ಕೃಪೆಗೆ…
