ಕೋಲಾರ: ರಕ್ತದಾನ ಮಾಡುವುದರಿಂದ ಹೃದ್ರೋಗದ ಅಪಾಯವನ್ನು ತಡೆಯಬಹುದು ಎಂದು ವೇಮಗಲ್ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾಕ್ಟರ್ ರವಿಕಿರಣ್ ರವರು ತಿಳಿಸಿದರು.

ತಾಲೂಕಿನ ನರಸಾಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಕೋಲಾರ ಎಸ್ಎನ್ಆರ್ ಆಸ್ಪತ್ರೆ ರಕ್ತ ನಿದಿ ಕೇಂದ್ರ ರವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಮಾತನಾಡಿ ರಕ್ತದಾನ ಮಾಡುವುದರಿಂದ ನಿಮ್ಮ ದೇಹದಲ್ಲಿನ ಕಬ್ಬಿಣ ದ ಪ್ರಮಾಣವನ್ನು ಕಡಿಮೆ ಮಾಡಬಹುದು.

ಇದರಿಂದ ಹೃದಯ ರೋಗವನ್ನು ತಡೆಯಬಹುದು, ದಿನದಿಂದ ದಿನಕ್ಕೆ ಹೆಚ್ಚುವರಿ ಕಬ್ಬಿಣ ಸೇವನೆಯು ಕೆಲವರಿಗೆ ಒಳ್ಳೆಯದಲ್ಲ, ರಕ್ತದಾನ ಮಾಡುವ ಮೂಲಕ ನಿಮ್ಮ ಕಬ್ಬಿಣದ ಮಟ್ಟವನ್ನು ಕಡಿಮೆ ಮಾಡಬಹುದು ಮತ್ತು ನಿಮ್ಮ ದೇಹದಲ್ಲಿ ಹೊಸ ರಕ್ತದ ರಚನೆಗೆ ಸಹಾಯವಾಗುತ್ತದೆ, ಇತ್ತೀಚಿನ ಅಧ್ಯಯನಗಳ ಪ್ರಕಾರ ರಕ್ತದಲ್ಲಿನ ಕಬ್ಬಿಣ ಪ್ರಮಾಣವನ್ನು ಕಡಿಮೆ ಮಾಡುವುದರಿಂದ ವ್ಯಕ್ತಿಯ ಕ್ಯಾನ್ಸರ್ ಬೆಳವಣಿಗೆ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಸಾಬೀತು ಮಾಡಿದೆ ಎಂದರು.

ನರಸಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾಕ್ಟರ್ ಮೋನಿಶ್ ಮಾತನಾಡಿ ರಕ್ತದಾನವೇ ಶ್ರೇಷ್ಠದಾನ ಎಂದು ಹೇಳಲಾಗುತ್ತಿದ್ದು, ಇದು ಸಂಪೂರ್ಣವಾಗಿ ನಿಜ, ಜೀವನ್ ಮರಣದ ಹೋರಾಟದಲ್ಲಿರುವವರಿಗೆ ರಕ್ತದಾನ ಮೂಲಕ ಬದುಕು ನೀಡುವುದು ನಿಜಕ್ಕೂ ಉತ್ತಮವಾದ ಕೆಲಸ, ನೀವು ರಕ್ತದಾನ ಮಾಡಲು ಮುಂದೆ ಬಂದಾಗ ಇದರೊಂದಿಗೆ ಉಚಿತ ಮಿನಿ ಆರೋಗ್ಯ ಪರೀಕ್ಷೆ ಸಹ ಮಾಡಿಸಿದಂತಾಗುತ್ತದೆ ಎಂದರು.

ದಾನ ಮಾಡುವ ಬದಲು ಸಾಮಾನ್ಯವಾಗಿ ರಕ್ತವನ್ನು ಪರೀಕ್ಷಿಸಲಾಗುತ್ತದೆ, ಇದರಿಂದ ನಿಮ್ಮ ರಕ್ತದ ಒತ್ತಡ, ಹಿಮೋಗ್ಲೋಬಿನ್ ಮತ್ತು ನಾಡಿ ಪರೀಕ್ಷೆ ನಡೆಯಲಿದೆ ಇದರಿಂದ ಉಚಿತ ಪರೀಕ್ಷೆ ಮಾಡಿಸಿದಂತಾಗುತ್ತದೆ, ವಿಶ್ವದಾದ್ಯಂತ ಅನೇಕ ಅಪಘಾತಗಳು ಮತ್ತು ಆರೋಗ್ಯ ಸಮಸ್ಯೆ ಕಾರಣದಿಂದ ರಕ್ತ ಹೆಚ್ಚಿನ ಬೇಡಿಕೆಯಲ್ಲಿದೆ, ಆದುದರಿಂದ ನಾವು ರಕ್ತದಾನ ಮಾಡುವ ಮೂಲಕ ಅನೇಕ ಜೀವಗಳನ್ನು ಉಳಿಸಬಹುದು, ಕರೋನ ಮಹಾಮಾರಿಯಿಂದ ರಕ್ತಧಾನಿಗಳ ಸಂಖ್ಯೆ ಕುಸಿದಿದ್ದು, ನಾವು ಉನ್ನತ ಮಟ್ಟದಲ್ಲಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಕೊರತೆಯನ್ನು ತುಂಬಬೇಕಾಗುತ್ತದೆ ಎಂದು ತಿಳಿಸಿದರು.

ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳು ಸಹ ರಕ್ತದಾನ ಮಾಡಿದರು, ಹಾಗೂ ಈ ಶಿಬಿರದಲ್ಲಿ ಒಟ್ಟು 40 ಯೂನಿಟ್ ರಕ್ತವನ್ನು ಶೇಖರಿಸಲಾಯಿತು ಜೊತೆಗೆ ರಕ್ತದಾನ ಮಾಡಿದವರಿಗೆ ಪ್ರಮಾಣ ಪತ್ರಗಳನ್ನು ನೀಡಿದರು ಪ್ರಮಾಣ ಪತ್ರವನ್ನು ನೀಡಿದರು.

ಈ ಶಿಬಿರದಲ್ಲಿ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಗೀತಾ, ಡಾ. ಜ್ಞಾನೇಶ್ವರಿ ಬಾಯಿ ನರಸಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿಗಳಾದ ಸುರೇಶ್ ರಾಘವೇಂದ್ರ ,ಸಂಗಪ್ಪ, ಮಂಜುನಾಥ್ , ಅಶ್ವಥ್ ಗೌತಮ್, ಎಸ್ ಎನ್ ಆರ್ ಆಸ್ಪತ್ರೆಯ ರಕ್ತ ನಿಧಿ ಕೇಂದ್ರದ ಸಿಬ್ಬಂದಿಗಳಾದ ಡಾಕ್ಟರ್ ರೇವತಿ ಮತ್ತು ಶೋಭಾ ಪ್ರಯೋಗಶಾಲಾ ತಂತ್ರಜ್ಞರು ಜೋಯೆಲ್ ಮತ್ತು ತಂಡದವರು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *