ಹೊಸಕೋಟೆಯಲ್ಲಿ ತಾಲ್ಲೂಕು ಮಟ್ಟದ 2023 ರ ವಿಶ್ವ ಜನಸಂಖ್ಯಾ ದಿನಾಚರಣೆ

ಹೊಸಕೋಟೆಯಲ್ಲಿ ತಾಲ್ಲೂಕು ಮಟ್ಟದ 2023 ರ ವಿಶ್ವ ಜನಸಂಖ್ಯಾ ದಿನಾಚರಣೆ ಹೊಸಕೋಟೆ : ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ತಾಲೂಕು ಮಟ್ಟದ 2023 ರ ವಿಶ್ವ ಜನಸಂಖ್ಯಾ ದಿನಾಚರಣೆ ಯನ್ನು ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಕ್ಷಯ ರೋಗ ನಿಯಂತ್ರಣ…

ರೇಣುಮಾಕಲಹಳ್ಳಿ ವಸತಿ ಶಾಲೆಗೆ ಸಂದೀಪ್ ರೆಡ್ಡಿ ಯಿಂದ ವಾಟರ್ ಫಿಲ್ಟರ್ ಕೊಡುಗೆ

ರೇಣುಮಾಕಲಹಳ್ಳಿ ವಸತಿ ಶಾಲೆಗೆ ಸಂದೀಪ್ ರೆಡ್ಡಿ ಯಿಂದ ವಾಟರ್ ಫಿಲ್ಟರ್ ಕೊಡುಗೆ ಚಿಕ್ಕಬಳ್ಳಾಪುರ: ತಾಲ್ಲೂಕಿನ ರೇಣುಮಾಕಲಹಳ್ಳಿ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಗೆ ಭೇಟಿ ನೀಡಿದ ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್ ರೆಡ್ಡಿ ಶಾಲೆಗೆ ವಾಟರ್ ಫಿಲ್ಟರ್ ಕೊಡುಗೆಯಾಗಿ…

ಚಿಕ್ಕಬಳ್ಳಾಪುರ.ಜು 11- ರಾಜ್ಯದ ಬಜೆಟ್ ನಲ್ಲಿ ಅಲ್ಪಸಂಖ್ಯಾತರಿಗೆ ವಿಶೇಷವಾಗಿ ಮುಸ್ಲಿಂ ಸಮುದಾಯದವರಿಗೆ 2ಸಾವಿರ ಕೋಟಿ ರೂ ಮೀಸಲಿಟ್ಟಿರುವ ಮುಖ್ಯಮಂತ್ರಿಗಳಿಗೆ ಹಾಗೂ ಸಚಿವ ಸಂಪುಟ ಸಚಿವರಿಗೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಬಿ.ಎಸ್.ರಫೀ ಉಲ್ಲಾ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಅವರು ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿ ಈ ಹಿಂದಿನ ಬಿಜೆಪಿ ಸರ್ಕಾರ ಕಳೆದ ಮೂರುವರೆ ವರ್ಷಗಳಲ್ಲಿ ನಮ್ಮ ಸಮುದಾಯಕ್ಕೆ ಯಾವುದೇ ರೀತಿಯ ಅನುಕೂಲಗಳನ್ನು ಮಾಡದೆ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನವನ್ನು ಸಹ ನಿಲ್ಲಿಸಲಾಗಿತ್ತು ಇದರಿಂದಾಗಿ ಸಮುದಾಯದ ಅನೇಕ ಬಡ ವಿದ್ಯಾರ್ಥಿಗಳಿಗೆ ತೀರ ತೊಂದರೆ ಉಂಟಾಗಿತ್ತು.ಇವೆಲ್ಲವನ್ನ ಪರಿಗಣಿಸಿರುವ ರಾಜ್ಯದ ಮುಖ್ಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಒಂದನೇ ತರಗತಿಯಿಂದ ಎಂಟನೇ ತರಗತಿವರೆಗೂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲು ಆದೇಶ,10 ಹೊಸ ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ಶಾಲೆಗಳು ಆರಂಭ,65 ಅಲ್ಪಸಂಖ್ಯಾತ ಮೊರಾರ್ಜಿ ವಸತಿ ಶಾಲೆಗಳ ಉನ್ನತಿಕರಣ, ಬೆಂಗಳೂರಿನ ಹಜ್ ಭವನದಲ್ಲೇ ಐಎಎಸ್ ಮತ್ತು ಕನ್ನಡ ಕೆಎಎಸ್ ವಸತಿ ಸಹಿತ ತರಬೇತ.. ವಿದೇಶದಲ್ಲಿ ಅಧ್ಯಯನ ಮಾಡಲು ಶೂನ್ಯ ಬಡ್ಡಿಯಲ್ಲಿ ಸಾಲ… ಅಲ್ಪಸಂಖ್ಯಾತರು ನಾಲ್ಕು ಚಕ್ರದ ವಾಹನ ಖರೀದಿಗೆ 3 ಲಕ್ಷಗಳ ನೆರವು… ಜೈನರ ಪುಣ್ಯಕ್ಷೇತ್ರ ಅಭಿವೃದ್ಧಿಗೆ 25 ಕೋಟಿ ಮೀಸಲು ರಾಜ್ಯದಲ್ಲಿ 49,000 ವಖ್ಫ್ ಆಸ್ತಿ ಸಂರಕ್ಷಣೆಗೆ 50 ಕೋಟಿ… ಗುರುದ್ವಾರ ಅಭಿವೃದ್ಧಿಗೆ 25 ಕೋಟಿ ಮೀಸಲು… ಕೌಶಲ್ಯಭಿವೃದ್ಧಿ ತರಬೇತಿಗೆ ನಾಲ್ಕು ಕೋಟಿ ಮೀಸಲು…ಅರ್ಧಕ್ಕೆ ನಿಂತ ಶಾದಿ ಮಹಲ್ ಮರು ನಿರ್ಮಾಣಕ್ಕೆ 54 ಕೋಟಿ ರೂ ಗಳನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನೀಡಿ ಉದಾರತೆ ಮೆರೆದಿದೆ ಎಂದು ಬಿ.ಎಸ್.ರಫೀ ಉಲ್ಲಾ ಪ್ರಕಟಣೆಯಲ್ಲಿ ವಿವರಿಸಿ ಈ ಹಿಂದಿನ ಬಿಜೆಪಿ ಸರ್ಕಾರ ರದ್ದುಗೊಳಿಸಿದ್ದ 2B ಮೀಸಲಾತಿಯನ್ನು ಪುನಃ ನೀಡಲು ಮನವಿ ಮಾಡಿದ್ದಾರೆ.

ಹಿಂದುಳಿದ ಜನಾಂಗದ ಶೈಕ್ಷಣಿಕ ಸಾಮಾಜಿಕ ಅಭಿವೃದ್ಧಿಗೆ ಎಲ್ ಜಿ ಹಾವನೂರವರ ಕೊಡುಗೆ ಅಪಾರ :

ಹಿಂದುಳಿದ ಜನಾಂಗದ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ದಿವಂಗತ ಎಲ್ ಜಿ ಹಾವನೂರವರ ಕೊಡುಗೆ ಅಪಾರವಾದದ್ದು, ಎಲ್ ಜಿ ಹಾವನೂರುರವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ, ಕಾನೂನು ಮಂತ್ರಿಯಾಗಿ, ತುಳಿತಕ್ಕೊಳಗಾದ ವರ್ಗಗಳಿಗೆ ಸಾಮಾಜಿಕ ನ್ಯಾಯ ಕೊಡಿಸುವ ಕೆಲಸ ಮಾಡಿದವರಲ್ಲಿ ಕರ್ನಾಟಕಕ್ಕೆ ಮೊದಲನೆಯ…

ಮಾಧ್ಯಮ ಮಾಹಿತಿ:

ವಿವಿ ಪುರಂ ನ ತಿಂಡಿ ಬೀದಿ(ಫುಡ್ ಸ್ಟ್ರೀಟ್) ಅಭಿವೃದ್ಧಿ ಕಾಮಗಾರಿ ಪರಿಶೀಲನೆ: ನಗರದ ವಿ.ವಿ ಪುರಂನಲ್ಲಿರುವ ತಿಂಡಿ ಬೀದಿಯನ್ನು ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ವಿನೂತನ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, 2023ರ ಆಗಸ್ಟ್ ತಿಂಗಳಲ್ಲಿ ಬಾಕಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದೆಂದು ದಕ್ಷಿಣ ವಲಯ…

ನೂತನ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಅಧಿಕಾರ ಸ್ವೀಕಾರ

ಧಾರವಾಡ :- ಜು.10 ರಂದು ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಅಪರ ಜಿಲ್ಲಾಧಿಕಾರಿಯಾಗಿ ಹಿರಿಯ ಶ್ರೇಣಿ ಕೆಎಎಸ್ ಅಧಿಕಾರಿ ಗೀತಾ ಸಿ.ಡಿ., ಅವರು ಇಂದು ಮುಂಜಾನೆ ಅಧಿಕಾರ ಸ್ವೀಕರಿಸಿದರು.ಶ್ರೀಮತಿ ಗೀತಾ ಸಿ.ಡಿ., ಅವರು ಈ ಮೊದಲು ಹಾವೇರಿ ಜಿಲ್ಲೆಯ ಜಿಲ್ಲಾನಗರಾಭಿವೃದ್ಧಿಕೋಶದ ಯೋಜನಾ…

ಭಾರತದ ಬಾಹ್ಯಾಕಾಶ ವಲಯದ ನವೋದ್ಯಮಗಳು ಸ್ಥಾಪಿತ ಮಾರುಕಟ್ಟೆಗಳು, ಜಾಗತಿಕ ಸಹಭಾಗಿತ್ವಗಳನ್ನು ಹುಡುಕುತ್ತಿವೆ
ಹೊಸದಿಲ್ಲಿ, ಜು.9 (ಪಿಟಿಐ) ಕಕ್ಷೆಯಲ್ಲಿರುವ ಉಪಗ್ರಹಗಳಿಗೆ ಮರುಇಂಧನ ತುಂಬುವ ಗುರಿಯಿಂದ ಪೃಥ್ವಿಯ ಆರೋಗ್ಯ ಮೇಲ್ವಿಚಾರಣೆಯವರೆಗೆ ತಂತ್ರಜ್ಞಾನ ಅಭಿವೃದ್ಧಿ ಪಡಿಸುತ್ತಿರುವ ಬಾಹ್ಯಾಕಾಶ ವಲಯದ ಭಾರತೀಯ ನವೋದ್ಯಮಗಳು (ಸ್ಟಾರ್ಟಪ್‌ಗಳು)  ಜಾಗತಿಕ ವಾಣಿಜ್ಯ ಸಹಭಾಗಿತ್ವದ ಅವಕಾಶಗಳಿಗೆ  ತೆರೆದುಕೊಳ್ಳುವ ಅಪಾರ ಭರವಸೆಯೊಂದಿಗೆ ಸ್ಥಾಪಿತ ಮಾರುಕಟ್ಟೆಗಳನ್ನು ಅನ್ವೇಷಿಸುತ್ತಿವೆ (ಹುಡುಕುತ್ತಿವೆ).
ಭಾರತವು ಆರ್ಟೆಮಿಸ್ ಒಪ್ಪಂದಗಳಿಗೆ ಸಹಿ ಹಾಕುತ್ತಿರುವುದು ಬಾಹ್ಯಾಕಾಶ ಕ್ಷೇತ್ರದ ಮೇಲೆ ಗಮನ ಕೇಂದ್ರೀಕರಿಸುವ ಉದ್ದೇಶವಾಗಿದೆ. ವಿಶೇಷವಾಗಿ ರಫ್ತು ನಿಯಂತ್ರಣ ಮತ್ತು ತಂತ್ರಜ್ಞಾನ ವರ್ಗಾವಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಇದು ನೆರವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಅಮೆರಿಕ ಭೇಟಿಯಿಂದ  ಖಾಸಗಿ ಉದ್ಯಮಿಗಳಿಗೆ ಬಾಗಿಲು ತೆರೆಯುತ್ತದೆ ಎಂದು ಉದ್ಯಮದ ದಿಗ್ಗಜರು ಬಲವಾದ ನಂಬಿಕೆ ಹೊಂದಿದ್ದಾರೆ.
2020ರಲ್ಲಿ ಭಾರತವು ತನ್ನ ಬಾಹ್ಯಾಕಾಶ ಕ್ಷೇತ್ರವನ್ನು ವಿದೇಶ ನೇರ ಹೂಡಿಕೆಗೆ ತೆರೆದ ನಂತರ, ರಾಕೆಟ್‌ಗಳು ಮತ್ತು ಉಪಗ್ರಹಗಳ ಅಭಿವೃದ್ಧಿ, ಗಗನಯಾತ್ರಿಗಳ ತರಬೇತಿ ಸೌಲಭ್ಯಗಳ ಸ್ಥಾಪನೆ ಮತ್ತು ಬಾಹ್ಯಾಕಾಶ ಪ್ರವಾಸೋದ್ಯಮದ ಸಾಧ್ಯತೆಗಳನ್ನು ಅನ್ವೇಷಣಾ ಕ್ಷೇತ್ರಗಳಲ್ಲಿ 150ಕ್ಕಿಂತ ಹೆಚ್ಚಿನ ಸ್ಟಾರ್ಟಪ್‌ಗಳು ತಲೆಎತ್ತಿವೆ.
“ಇದು ಉತ್ತಮ ಆರಂಭವಾಗಿದೆ, ಏಕೆಂದರೆ 10-15 ವರ್ಷಗಳ ಹಿಂದೆ ಅಮೆರಿಕದಿಂದ ಯಾವುದೇ ಬಾಹ್ಯಾಕಾಶ ಅಥವಾ ರಕ್ಷಣಾ ಸಂಬಂಧಿತ ತಂತ್ರಜ್ಞಾನ ಪೂರೈಸುವುದನ್ನು ನಾವು ಹಿಂದೆಂದೂ ಕೇಳಿರಲಿಲ್ಲ. ಇದು ನಿಷೇಧವಾಗಿತ್ತು. ಈಗ ನಾವು ಉದಯೋನ್ಮುಖ ವಲಯಗಳಲ್ಲಿ ಒಟ್ಟಿಗೆ ಕೆಲಸ ಮಾಡುವ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ಮನಸ್ತು ಸ್ಪೇಸ್ ಸಹಸಂಸ್ಥಾಪಕ ತುಷಾರ್ ಜಾಧವ್ ಪಿಟಿಐಗೆ ತಿಳಿಸಿದ್ದಾರೆ.
ಮುಂಬೈ ಮೂಲದ ಮನಸ್ತು ನವೋದ್ಯಮವು ಉಪಗ್ರಹಗಳಿಗಾಗಿ ಹಸಿರು ಪ್ರೊಪಲ್ಷನ್ ಸಿಸ್ಟಮ್‌ಗಳನ್ನು ಅಭಿವೃದ್ಧಿಪಡಿಸುತ್ತಿದೆ. ಮುಂಬರುವ ವರ್ಷದಲ್ಲಿ ಪರೀಕ್ಷಾರ್ಥ ಹಾರಾಟ ಸಮಯದಲ್ಲಿ ಅದರ ತಂತ್ರಜ್ಞಾನ ಮೌಲ್ಯೀಕರಿಸಲು ಆಶಿಸುತ್ತಿದೆ. ಉಪಗ್ರಹಗಳಿಗೆ ಕಕ್ಷೆಯಲ್ಲಿ ಇಂಧನ ತುಂಬುವ ಸೇವೆ ಒದಗಿಸಲು ಬಾಹ್ಯಾಕಾಶದಲ್ಲಿ ಇಂಧನ ಕೇಂದ್ರ ವಿನ್ಯಾಸಗೊಳಿಸುತ್ತಿದೆ, ಇಲ್ಲದಿದ್ದರೆ ಆನ್-ಬೋರ್ಡ್ ಇಂಧನವು ಮುಗಿದ ನಂತರ ಅದನ್ನು ಕೈಬಿಡಬೇಕಾಗುತ್ತದೆ.

ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಮಹಾನಿರ್ದೇಶಕ, ಲೆಫ್ಟಿನೆಂಟ್ ಜನರಲ್ ಎ ಕೆ ಭಟ್ (ನಿವೃತ್ತ) ಮಾತನಾಡಿ, “ಬಾಹ್ಯಾಕಾಶ ಕ್ಷೇತ್ರದ ಅನೇಕ ತಂತ್ರಜ್ಞಾನಗಳು 2 ರೀತಿಯ ಬಳಕೆಯ (ಡ್ಯುಯಲ್ ಯೂಸ್) ತಂತ್ರಜ್ಞಾನಗಳಾಗಿವೆ, ಆದರೆ ಈಗ ಇದಕ್ಕಾಗಿ ಪ್ರಕ್ರಿಯೆಗಳನ್ನು ಸರಾಗಗೊಳಿಸಬೇಕೆಂಬ ಸೂಚನೆಯನ್ನು ಇವು ನೀಡುತ್ತಿವೆ.”
ಕಳೆದ ವರ್ಷ ನವೆಂಬರ್‌ನಲ್ಲಿ, ಹೈದರಾಬಾದ್ ಮೂಲದ ಸ್ಕೈರೂಟ್ ಏರೋಸ್ಪೇಸ್ ಸಂಸ್ಥೆ ಸ್ಥಾಪನೆಯಾದ 4 ವರ್ಷಗಳಲ್ಲಿ ಭಾರತದಲ್ಲಿ ಮೊದಲ ಖಾಸಗಿಯಾಗಿ ನಿರ್ಮಿಸಿದ ಬಾಹ್ಯಾಕಾಶ ರಾಕೆಟ್ ವಿಕ್ರಮ್-ಎಸ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಬಾಹ್ಯಾಕಾಶ ಪ್ರಯಾಣದ ಇತಿಹಾಸದಲ್ಲಿ ತನ್ನ ಹೆಸರು ಬರೆದಿದೆ.
ಇಸ್ರೋದ ಮಾಜಿ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳು ಸ್ಥಾಪಿಸಿದ ಕಂಪನಿಯು ಈಗ ಸಣ್ಣ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲು ವಿಕ್ರಮ್ ಸರಣಿಯ ರಾಕೆಟ್‌ಗಳ 3  ರೂಪಾಂತರಗಳನ್ನು ಅಭಿವೃದ್ಧಿಪಡಿಸುತ್ತಿದೆ.

“ಖಾಸಗಿ ವಲಯ ಮಾಡುತ್ತಿರುವ ಕೆಲಸವು ಇಸ್ರೋ ಮಾಡಿದ್ದನ್ನು ಪುನರಾವರ್ತಿಸುತ್ತಿಲ್ಲ. ಸ್ಕೈರೂಟ್ ಮತ್ತು ಅಗ್ನಿಕುಲ್ ಅಭಿವೃದ್ಧಿಪಡಿಸಿದ ಉಡಾವಣಾ ವಾಹನಗಳು ತಮ್ಮದೇ ಆದ ವೈಶಿಷ್ಟತೆ ಹೊಂದಿವೆ. ಉಪಗ್ರಹ ಅಪ್ಲಿಕೇಶನ್‌ಗಳು ತಂತ್ರಜ್ಞಾನದ ವಿಷಯದಲ್ಲಿ ಸ್ಥಾಪಿತವಾಗಿವೆ ಮತ್ತು ಅತ್ಯಾಧುನಿಕವಾಗಿವೆ,” ಎಂದು ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಉತ್ತೇಜನಾ ಮತ್ತು ಅಧಿಕಾರ ಕೇಂದ್ರದ (ಐಎನ್-ಸ್ಪೇಸ್) ಅಧ್ಯಕ್ಷ ಪವನ್ ಗೋಯೆಂಕಾ ಪಿಟಿಐಗೆ ತಿಳಿಸಿದ್ದಾರೆ.
ಕಳೆದ ವರ್ಷ ಚೆನ್ನೈ ಮೂಲದ ಅಗ್ನಿಕುಲ್ ಕಾಸ್ಮೋಸ್ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ತನ್ನದೇ ಆದ ಲಾಂಚ್‌ಪ್ಯಾಡ್ ಉದ್ಘಾಟಿಸಿತು, ಅಲ್ಲಿಂದ ಇಸ್ರೋ ತನ್ನ ಬಾಹ್ಯಾಕಾಶ ಉಡಾವಣೆಗಳನ್ನು ನಡೆಸುತ್ತಿದೆ.

ಭಾರತದಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಮತ್ತು ದತ್ತಾಂಶ ಬೇಡಿಕೆ ತುಂಬಾ ಕಡಿಮೆ ಇರುವುದರಿಂದ, ದೇಶೀಯ ಖಾಸಗಿ ಕಂಪನಿಗಳು ತಮ್ಮ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಗಳನ್ನು ಅನ್ವೇಷಿಸುತ್ತಿವೆ.
“ಅವರು ಕೆಲವು ಯಶಸ್ಸನ್ನು ಕಾಣಲಾರಂಭಿಸಿದ್ದಾರೆ. ಸರ್ಕಾರಿ ಏಜೆನ್ಸಿಗಳಿಂದ ಕೆಲವು ಆರ್ಡರ್ ಗಳನ್ನು ಪಡೆಯುತ್ತಿದ್ದಾರೆ. ಇದು ಮತ್ತೊಂದು ದೊಡ್ಡ ವಿಷಯ” ಎಂದು ಗೋಯೆಂಕಾ ಹೇಳಿದರು, ಬೆಂಗಳೂರು ಮೂಲದ “ಪಿಕ್ಸೆಲ್” ನವೋದ್ಯಮವು ಹೈಪರ್ ಸ್ಪೆಕ್ಟ್ರಲ್ ಇಮೇಜರಿ ಪೂರೈಕೆಗಾಗಿ ಅಮೆರಿಕದ ರಾಷ್ಟ್ರೀಯ ವಿಚಕ್ಷಣಾ ಕಚೇರಿಯಿಂದ 5 ವರ್ಷಗಳ ಗುತ್ತಿಗೆ ಒಪ್ಪಂದ ಪಡೆದಿದೆ ಎಂದು ಅವರು ಉಲ್ಲೇಖಿಸಿದರು.

ಭಾರತದಲ್ಲಿ ಬಾಹ್ಯಾಕಾಶ ರಂಗದ ಆರ್ಥಿಕತೆಯು 2020ರಲ್ಲಿ ಜಾಗತಿಕ ಬಾಹ್ಯಾಕಾಶ ಆರ್ಥಿಕತೆಯ ಸರಿಸುಮಾರು 2.1% ಕಡಿಮೆಯಾಗಿ, ಇದು 9.6 ಶತಕೋಟಿ ಡಾಲರ್  ಮೊತ್ತವಾಗಿದೆ, ಇದು ದೇಶದ ಒಟ್ಟು ಆಂತರಿಕ ಉತ್ಪನ್ನ ಜಿಡಿಪಿ. 0.4% ಆಗಿದೆ.
“ಪ್ರಧಾನಿ ನರೇಂದ್ರ ಮೋದಿ ಅವರು ಹಿಂದಿನ ನಿರ್ಬಂಧಗಳನ್ನು ತೊಡೆದುಹಾಕಿ ಬಾಹ್ಯಾಕಾಶ ತಂತ್ರಜ್ಞಾನವನ್ನು ಖಾಸಗಿ ವಲಯಕ್ಕೆ ತೆಮುಕ್ತಗೊಳಿಸಿದರು. 3  ವರ್ಷಗಳಲ್ಲಿ ನಾವು 150ಕ್ಕಿಂತ ಹೆಚ್ಚಿನ ಸ್ಟಾರ್ಟಪ್‌ಗಳನ್ನು ಹೊಂದಿದ್ದೇವೆ, ಅವುಗಳಲ್ಲಿ ಕೆಲವು ಈ ರೀತಿಯ ಮೊದಲನೆಯವಾಗಿವೆ. ಇವು ಜಾಗತಿಕ ಮಾನದಂಡಗಳ ಮೇಲೆ ಅಂಗೀಕರಿಸಲ್ಪಟ್ಟಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಪಿಟಿಐಗೆ ತಿಳಿಸಿದ್ದಾರೆ.

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತವನ್ನು ಸಮಾನ ಸಹಭಾಗಿತ್ವ ದೇಶ ಅಮೆರಿಕ ಈಗ ಪರಿಗಣಿಸುತ್ತಿದೆ. 50 ವರ್ಷಗಳ ಹಿಂದೆ ಬಾಹ್ಯಾಕಾಶ ಕ್ಷೇತ್ರದ ಯಾವುದೇ ವಿಚಾರಗಳಿಗೆ ಪ್ರತಿ ದೇಶವು ಅಮೆರಿಕ ಕಡೆಗೆ ನೋಡುತ್ತಿತ್ತು. ಅದೀಗ ವ್ಯತಿರಿಕ್ತವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ವೈದ್ಯಕೀಯ ವೃತ್ತಿ ಸೇವಾ ಪ್ರವೃತ್ತಿಯಾಗಬೇಕು: ಮಂಜುಳ ಮಹದೇವ್.

ಬಂಗಾರಪೇಟೆ : ವೈದ್ಯಕೀಯ ವೃತ್ತಿ ಸೇವಾ ಮನೋಭಾವದ ಪ್ರವೃತ್ತಿಯಾಗಬೇಕೆ ಹೊರತು ಹಣಗಳಿಕೆಯ ಅಸ್ತ್ರವಾಗಬಾರದು, ಇತ್ತೀಚಿನ ದಿನಗಳಲ್ಲಿ ವೈದ್ಯರು ತಮ್ಮ ಜವಾಬ್ದಾರಿಯನ್ನು ಮರೆತು ಹಣ ಸಂಪಾದನೆಯ ವೃತ್ತಿಯಲ್ಲಿ ನಿರತರಾಗಿದ್ದಾರೆ, ಅಂತವರ ಮದ್ಯೆ ಜನಸೇವೆ ಮಾಡುವ ಸದುದ್ದೇಶ ಹೊಂದಿರುವ ವೈದ್ಯರಾದ ಬಿ.ಆರ್.ಸುರೇಶ್ ಬಾಬುರವರ ಸೇವೆ…

ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಪ್ರತ್ಯೇಕ ವೆಬ್ ಸೈಟ್ ಲಾಂಚ್‌

ಎಲ್ಲ ಸಮಸ್ಯೆಗಳಿಗೂ ಪರಿಹಾರಕ್ಕೆ ವೇದಿಕೆಯಾಗಲಿದೆ: ಪ್ರದೀಪ್ ಚಿಕ್ಕಬಳ್ಳಾಪುರ :- ನಮಸ್ತೆ ಚಿಕ್ಕಬಳ್ಳಾಪುರʼ ಕಾರ್ಯಕ್ರಮದ ಮೂಲಕ ಕ್ಷೇತ್ರದ ಜನರ ಮನೆ ಬಾಗಿಲಿಗೆ ತೆರಳಿ ಸಮಸ್ಯೆಗಳಿಗೆ ಸ್ಪಂದಿಸುವ ವಿನೂತನ ಕಾರ್ಯಕ್ರಮ ಮಾಡಿ ಮಾದರಿಯಾಗಿದ್ದ ಶಾಸಕ ಪ್ರದೀಪ್ ಈಶ್ವರ್ ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ.ಚಿಕ್ಕಬಳ್ಳಾಪುರ…

ಕಸ್ತೂರಿ ಬಾ ಬಾಲಕಿಯರ ವಸತಿ ನಿಲಯಕ್ಕೆ ಲೋಕಾಯುಕ್ತ ಇನ್ಸ್ಪೆಕ್ಟರ್ ಸಲೀಂ ಅಹಮದ್ ಭೇಟಿ

ಪಾವಗಡ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಲೋಕಾಯುಕ್ತ ಇನ್ಸ್ಪೆಕ್ಟರ್ ಸಲೀಂ ಅಹಮದ್ ಹಾಗೂ ತಂಡದವರು ದಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಆಸ್ಪತ್ರೆ ಪಕ್ಕದಲ್ಲಿರುವ ಕಸ್ತೂರಿ ಬಾ ಬಾಲಕಿಯರ ವಸತಿ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಸಿಗಬೇಕಾದ ಮೂಲಭೂತ ಸೌಕರ್ಯಗಳಿಂದ ವಂಚಿತಗೊಂಡಿರುವ…