ಕರ್ನಾಟಕ ಉಚ್ಚ ನ್ಯಾಯಾಲಯ, ಧಾರವಾಡ ಪೀಠದಲ್ಲಿ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಪ್ರಕರಣಗಳ ಇತ್ಯರ್ಥ
*** ಧಾರವಾಡ :- ಉಚ್ಚ ನ್ಯಾಯಾಲಯ, ಧಾರವಾಡ ಪೀಠದಲ್ಲಿ ಇಂದಿನ ಜು. 8 ರಂದು ಲೋಕ್ ಅದಾಲತ್‌ದಲ್ಲಿ ನ್ಯಾಯಮೂರ್ತಿಗಳಾದ ಎಸ್.ಜಿ. ಪಂಡಿತ್, ಹಿರಿಯ ನ್ಯಾಯಮೂರ್ತಿಗಳು, ಕರ್ನಾಟಕ ಉಚ್ಚ ನ್ಯಾಯಾಲಯ ಧಾರವಾಡ ಪೀಠ, ಧಾರವಾಡ, ಇವರ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ಏರ್ಪಡಿಸಲಾಗಿತ್ತು. ಸದರಿ ಅದಾಲತ್ ನಲ್ಲಿ ಹಿರಿಯ ನ್ಯಾಯಮೂರ್ತಿಗಳೊಂದಿಗೆ ನ್ಯಾಯಮೂರ್ತಿಗಳಾದ ಎಸ್. ವಿಶ್ವಜಿತ್ ಶೆಟ್ಟಿ, ವಿ. ಶ್ರೀಶಾನಂದ, ಅನಿಲ ಬಿ ಕಟ್ಟೆ, ಮತ್ತು ವೆಂಕಟೇಶ ನಾಯ್ಕ ಟಿ. ಹಾಗೂ ಇವರೊಂದಿಗೆ ಲೋಕ ಅದಾಲತ್‌ನ ಸದಸ್ಯರುಗಳಾದ ಎಮ್. ಸಿ ಹುಕ್ಕೇರಿ, ಪ್ರಶಾಂತ ವಿ. ಮೊಗಳಿ, ವಿ. ಜಿ. ದಳವಾಯಿ, ಬಿ. ಎ. ಪಾಟೀಲ ಮತ್ತು ರಾಘವೇಂದ್ರ ಎ. ಪುರೋಹಿತ ಈ ರೀತಿಯಾಗಿ ಒಟ್ಟು ಪೀಠಗಳನ್ನು ಆಯೋಜಿಸಲಾಗಿತ್ತು. ಸದರಿ ಅದಾಲತನಲ್ಲಿ ಒಟ್ಟು 858 ಪ್ರಕರಣಗಳನ್ನು ವಿಚಾರಣೆಗೆಂದು ಗುರುತಿಸಿಕೊಳ್ಳಲಾಗಿತ್ತು. ಆ ಪೈಕಿ ಒಟ್ಟು 375 ಪ್ರಕರಣಗಳನ್ನು 8,78,05,569/- ಮೊತ್ತಕ್ಕೆ ಇತ್ಯರ್ಥ ಪಡಿಸಲಾಯಿತು.
ಈ ಅದಾಲತ್ ನಲ್ಲಿ ಹಿರಿಯ ನ್ಯಾಯಮೂರ್ತಿಗಳಾದ ಎಸ್. ಜೆ. ಪಂಡಿತ್ ಹಾಗೂ ಸದಸ್ಯರಾದ ಎಮ್. ಸಿ. ಹುಕ್ಕೇರಿ ಇವರನ್ನು ಒಳಗೊಂಡ ಅದಲಾತ್ ಪೀಠವು ಜಮೀನಿನ ವ್ಯಾಜ್ಯಕ್ಕೆ ಸಂಬಂಧಿಸಿದಂತೆ 37 ವರ್ಷಗಳ ಹಳೆಯದಾದ ದಿವಾಣಿ ಪ್ರಕರಣವನ್ನು ವಕೀಲರುಗಳಾದ ಸಂಜಯ ಎಸ್. ಕಟಗೇರಿ ಮತ್ತು…
ಶ್ರೀ ಅಣ್ಣಮ್ಮ ದೇವಿಯ 13ನೇ ವರ್ಷದ
ವಾರ್ಷಿಕೋತ್ಸವ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ಜಕ್ಕೂರು ವಾರ್ಡ್ ಕೋಗಿಲು ಬಡಾವಣೆಯಲ್ಲಿ ಶ್ರೀ ಅಣ್ಣಮ್ಮ ದೇವಿಯ ವರ್ಷದ ಅಂಗವಾಗಿ ಬಂಡೆ ಮಾರಿಯಮ್ಮ ದೇವಿ ಗಂಗ ಪರಮೇಶ್ವರಿ ದೇವಿಯ ಬಹಳ ವಿಜೃಂಭಣೆಯಿಂದ ಪೂಜೆ ಹೋಮ ಇನ್ನೂ ಅನೇಕ ಕಾರ್ಯಕ್ರಮಗಳು ಬಹಳ ವಿಜೃಂಭಣೆಯಿಂದ ನಡೆಯಿತು ಸಂಜೆ…
ಬ್ರಹ್ಮಾಕುಮಾರಿ ಕೇಂದ್ರದಲ್ಲಿ ಸಕಾರಾತ್ಮಕ ಪರಿವರ್ತನೆ ವರ್ಷ-2023 ಪ್ರಾರಂಭೋತ್ಸವ
ನಮ್ಮನ್ನು ನಾವು ಪ್ರೀತಿಸುವುದರ ಮೂಲಕ ಸಕಾರಾತ್ಮಕ ಪರಿವರ್ತನೆ ಮಾಡೋಣ – ಡಾ. ಪ್ರೇಮ್
ಬೀದರ: ಪ್ರತಿದಿನ ಬೆಳಿಗ್ಗೆ ಎದ್ದು ನಮ್ಮನ್ನು ನಾವು ಪ್ರೀತಿಸುವುದನ್ನು ಕಲಿಯುವುದರ ಮುಖಾಂತರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಪ್ರಯತ್ನಿಸಬೇಕೆಂದು ರಾಜಸ್ಥಾನದ ಕ್ಯಾನ್ಸರ್ ತಜ್ಞರಾದ ಡಾ. ಪ್ರೇಮ್ ಮಸಂದ್ ಭಾಯಿ ತಿಳಿಸಿದರು.ನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ಪಾವನಧಾಮ ಕೇಂದ್ರದಲ್ಲಿ ಆಯೋಜಿಸಿದ “2023ರ ಸಕಾರಾತ್ಮಕ…
ನಾಲ್ವಡಿ ಕೃಷ್ಣರಾಜ ಒಡೆಯರ್ 139ನೇ ಜನ್ಮದಿನಾಚರಣೆ ಪ್ರಯುಕ್ತ :
ಸತ್ಯಶೋಧನ ರಂಗಸಮುದಾಯ ದಿಂದ ನಾಟಕ ಪ್ರದರ್ಶನ :
ಬ್ಯಾಟರಾಯನಪುರ : ನಾಲ್ವಡಿ ಕೃಷ್ಣರಾಜ ಒಡೆಯರ್ ರವರ 139ನೇ ಜನ್ಮದಿನಾಚರಣೆ ಹಾಗೂ ಬಾಬು ಜಗಜೀವನ್ ರಾಮ್ ರವರ 37ನೇ ಪುಣ್ಯ ಸ್ಮರಣೆ ಅಂಗವಾಗಿ ನಗರದ ಜಿಕೆವಿಕೆ ಆವರಣದ ಕುವೆಂಪು ಸಭಾ ಭವನದಲ್ಲಿ ಸತ್ಯಶೋಧನ ರಂಗಸಮುದಾಯ ಹೆಗ್ಗೋಡು ರವರಿಂದ ಪಿ.ಲಂಕೇಶ್ ವಿರಚಿತ ‘ರೊಟ್ಟಿ’, ‘ಅಧಿಕಾರಿಗಳು ಮತ್ತು ಕೆಲಸದವ’ ಕಥೆಗಳನ್ನು ಆಧರಿಸಿದ ರಂಗ ಪ್ರಯೋಗ ಕಾರ್ಯಕ್ರಮ ಏರ್ಪಡಿಸಿದ್ದರು.
ರಂಗ ಪ್ರಯೋಗ ದಲ್ಲಿ ಸತ್ಯಶೋಧನ ರಂಗ ಸಮುದಾಯ ಹೆಗ್ಗೋಡಿನ ಪ್ರಾಂಶುಪಾಲರಾದ ಡಾ.ಎಂ.ಗಣೇಶ ಹೆಗ್ಗೋಡು, ನಾಗರಾಜ ಸಿರಸಿ, ರಾಹುಲ್, ವಿಭಾ ನಿಧಿ ಶಿವಂ ರವರು ನಾಟಕದ ಮುಖ್ಯ ಭೂಮಿಕೆಯಲ್ಲಿ ನಟಿಸುವ ಮೂಲಕ ತಮ್ಮ ನಟನಾ ಕೌಶಲ್ಯ ಅಭಿವ್ಯಕ್ತಗೊಳಿಸಿದರು. ನಾಟಕ ಪ್ರದರ್ಶನದ ನಂತರ ನಡೆದ…
ತಹಸೀಲ್ದಾರ್ ಅಜಿತ್ ರೈ ವಿರುದ್ಧ ಉನ್ನತ ತಿನಿಖೆ ನಡೆಸುವಂತೆ ಆಗ್ರಹಿಸಿ ಪ್ರತಿಭಟನೆ.
ಕೆ.ಆರ್.ಪುರ,ಜು.3- ತಹಸೀಲ್ದಾರ್ ಅಜಿತ್ ರೈ ವಿರುದ್ಧ ಉನ್ನತ ತನಿಖೆ ನಡೆಸುವಂತೆ ಒತ್ತಾಯಿಸಿ ಜನತಾ ರೈತ ಸಂಘಟನೆ ಕಾರ್ಯಕರ್ತರು ಇಂದು ಕೆಆರ್ ಪುರ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷರಾದ ಆರ್.ಈರೇಗೌಡ ಅವರು ಭ್ರಷ್ಟ ಅಧಿಕಾರಿ ಅಜಿತ್…
ಮಾದಿಗ ಸಮುದಾಯದವರಿಗೆ ಕಾಂಗ್ರೆಸ್ ಟಿಕೆಟ್ ನೀಡುವಲ್ಲಿ ಅನ್ಯಾಯ
ಹುಬ್ಬಳ್ಳಿ :- ಕಳೆದ ಮೂರು ದಶಕಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಸಕ್ರಿಯ ಕಾರ್ಯಕರ್ತರಾಗಿ ಮೋಹನ ಹಿರೇಮನಿ ಅವರು ಪ್ರಾರಂಭದಲ್ಲಿ ಕಾರ್ಮಿಕ ವಿಭಾಗ ಜಿಲ್ಲಾ ಅಧ್ಯಕ್ಷ ,ಉಣಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಏಳು ವರ್ಷ ಹಾಗೂ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಸಮಿತಿ…
ರೂಪನಗುಡಿ: ಸಮುದಾಯ ಆರೋಗ್ಯ ಕೇಂದ್ರದಲ್ಲಿ “ಮಲೇರಿಯಾ ವಿರೋಧಿ ಮಾಸಾಚರಣೆ”
ಬಳ್ಳಾರಿ,ಜು.01 ತಾಲೂಕಿನ ರೂಪನಗುಡಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರದಂದು ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮ ಆಚರಿಸಲಾಯಿತು.ರೂಪನಗುಡಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಚಿತ್ರಾ ವರ್ಣೇಕರ್ ಅವರು ಮಾತನಾಡಿ, ಮಲೇರಿಯ ರೋಗವು ಅನಾಪಿಲಿಸ್ ಹೆಣ್ಣು ಸೊಳ್ಳೆ ಕಡಿತದಿಂದ ಬರುತ್ತದೆ. ರೋಗವು ತಗುಲಿದ…
ಶಿಕ್ಷಣದಿಂದ ಮಾತ್ರ ಉತ್ತಮ ಸ್ಥಾನಕ್ಕೆ ಹೋಗಬಹುದು: ಸಂದೀಪ್ ರೆಡ್ಡಿ
ಚಿಕ್ಕಬಳ್ಳಾಪುರ: ಶಿಕ್ಷಣದಿಂದ ಮಾತ್ರ ಉತ್ತಮ ಸ್ಥಾನಕ್ಕೆ ಹೋಗಬಹುದು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಇದನ್ನು ಅರಿತು ಓದಿನ ಕಡೆಗೆ ಹೆಚ್ಚು ಗಮನ ಹರಿಸಬೇಕು ಎಂದು ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್ ರೆಡ್ಡಿ ತಿಳಿಸಿದರು.ತಾಲ್ಲೂಕಿನ ಇನಮಿಂಚೇನಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಭಗತ್…
ಜ್ಞಾನದಿಂದ ಕಾನೂನಿನ ತಿಳಿವಳಿಕೆ ಹೆಚ್ಚಲಿದೆ: ನ್ಯಾ.ಎ.ಅರುಣಾ ಕುಮಾರಿ
ಚಿಕ್ಕಬಳ್ಳಾಪುರ: ತಾಲ್ಲೂಕಿನ ಮುದ್ದೇನಹಳ್ಳಿ ಗ್ರಾಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕೆಂಪೇಗೌಡ ಕಾನೂನು ಮಹಾವಿದ್ಯಾಲಯ, ಜಿಲ್ಲಾ ವಕೀಲರ ಸಂಘ, ಮುದ್ದೇನಹಳ್ಳಿ ಗ್ರಾ.ಪಂ ಸಂಯುಕ್ತ ಆಶ್ರಯದಲ್ಲಿ ಬುಧವಾರ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು…