ಪಬ್ಲಿಕ್ ಪವರ್. ಚಿತ್ರಕಲಾ ಸ್ಪರ್ಧೆ

ಚಿತ್ರಕಲಾ ಸ್ಪರ್ಧೆ ಲಯನ್ಸ್ಯ ಕ್ಲಬ್ ಆಫ್ ಹೋಸ್ಟ್ ಬೆಂಗಳೂರು. ಇವರ ಅಧ್ಯಕ್ಷರ ಉಪಾಧ್ಯಕ್ಷರ ಎಲ್ಲಾ ಸದಸ್ಯರ ಮೇರೆಗೆ ಪ್ರತಿ ವರ್ಷವೂ ಅಗ್ರಹಾರ ಬಡಾವಣೆ, ಜಿ ಎಂ ಪಿ ಎಸ್ ಶಾಲೆಯಲ್ಲಿ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸುತ್ತಾರೆ ಈ ಸ್ಪರ್ಧೆಯಲ್ಲಿ ಸುಮಾರು ಸುತ್ತಮುತ್ತಲಿನ ಗ್ರಾಮದ…

ಪಬ್ಲಿಕ್ ಪವರ್. *”**”**”************”*””*””******””””***********”***”ಪ್ರತಿಯೊಬ್ಬರ ಶಿಕ್ಷಣ ದೇಶದ ಅಭಿವೃದ್ಧಿಗೆ ಪೂರಕ
: ರಾಮಚಂದ್ರಪ್ಪ

. . ಕೋಲಾರ, ನ.18.ಪ್ರತಿಯೊಬ್ಬರ ಶಿಕ್ಷಣ ದೇಶದ ಅಭಿವೃದ್ಧಿಗೆ ಪೂರಕವಾಗಿದ್ದು,ಪ್ರತಿಯೊಬ್ಬರಲ್ಲೂ ಒಂದು ಕಲೆ ಇದೆ ಅದು ಬೆಳಕಿಗೆ ಬರಬೇಕು ಅದಕ್ಕೆವಿಧ್ಯಾರ್ಥಿಗಳು ಶ್ರಮವಹಿಸಿ ವಿಧ್ಯಾಬ್ಯಾಸ ಮಾಡಬೇಕೆಂದು ಜಿಲ್ಲಾ ಡೆಪ್ಯುಟಿ ಡೈರೆಕ್ಟರ್ ಪಿ.ಯು ರಾಮಚಂದ್ರಪ್ಪ ನವರು ವಿಧ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ನಗರದ ಅಲ್…

ಪಬ್ಲಿಕ್ ಪವರ್. *************************ಶ್ರೀ ಕೃಷ್ಣ ಬೈರೇಗೌಡ, ಮಾನ್ಯ ಕಂದಾಯ ಸಚಿವರು ಥಣಿಸಂದ್ರ ಸರ್ಕಾರಿ ಶಾಲೆ ಕೊಠಡಿಗಳ ಉದ್ಘಾಟನೆ.
ಬೆಳಗ್ಗೆ 10.30

ಕಂದಾಯ ಸಚಿವರು ಹಾಗೂ ಶಾಸಕರ ಕಛೇರಿ,ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ. ಶ್ರೀ ಕೃಷ್ಣ ಬೈರೇಗೌಡ, ಮಾನ್ಯ ಕಂದಾಯ ಸಚಿವರು ಹಾಗೂ ಶಾಸಕರು ಬ್ಯಾಟರಾಯನಪುರ ಇವರು ನಾಳೆ ದಿನಾಂಕ: 20.11.2023, ಸೋಮವಾರ ಬೆಳಗ್ಗೆ 9.30ಗಂಟೆಗೆ, ನೂತನವಾಗಿ ನಿರ್ಮಿಸಿರುವ ಥಣಿಸಂದ್ರ ಸರ್ಕಾರಿ ಶಾಲೆ ಕೊಠಡಿಗಳ ಉದ್ಘಾಟನೆ.ಬೆಳಗ್ಗೆ…

ಪಬ್ಲಿಕ್ ಪವರ *************ಜ್ಯೋತಿಷ್ಯ ಸಮಾಜದ ಒಳಿತಿಗೆ ಉಪಯೋಗವಾಗಲಿ: ಡಾ. ದಿನೇಶ್ ಗುರೂಜಿ :

ನಾಲ್ಕನೇ ರಾಜ್ಯಮಟ್ಟದ ಜ್ಯೋತಿಷ್ಯ ಕಾರ್ಯಾಗಾರ : ಬ್ಯಾಟರಾಯನಪುರ : ಜ್ಯೋತಿಷ್ಯ ವಿಜ್ಞಾನ ಸಮಾಜದ ಒಳಿತಿಗೆ ಉಪಯೋಗವಾಗಬೇಕು ಎಂದು ಗೋಲ್ಡ್ ಟ್ರೀ ಆಸ್ಟ್ರೋ ಸಂಸ್ಥೆಯ ವ್ಯವಸ್ಥಾಪಕ ಹಾಗೂ ನಕ್ಷತ್ರನಾಡಿ ಖ್ಯಾತಿಯ ಅಂತಾರಾಷ್ಟ್ರೀಯ ಜ್ಯೋತಿಷಿ ಡಾ. ದಿನೇಶ್ ಗುರೂಜಿ ಅಭಿಪ್ರಾಯಪಟ್ಟರು. ನಗರದ ವಿದ್ಯಾರಣ್ಯಪುರದಲ್ಲಿ ಗೋಲ್ಡ್…

ಪಬ್ಲಿಕ್ ಪವರ್. *********””””ಒಕ್ಕಲಿಗರು ಹಿಂದೂ ಸಮಾಜದ ಜೀವನಾತ್ಮಕ ಕೊಂಡಿ : ಶ್ರೀ ಸಿದ್ಧರಾಮ ಚೈತನ್ಯ ಸ್ವಾಮೀಜಿ

ಬೆಂಗಳೂರು : ಒಕ್ಕಲಿಗರು ನಮ್ಮ ಹಿಂದೂ ಸಮಾಜದ ಒಂದು ಜೀವನಾತ್ಮಕ ಕೊಂಡಿಯಾಗಿದ್ದು, ‘ಒಕ್ಕಲಿಗರು ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ” ಎಂಬ ಜನಜನಿತ ನಾಣ್ಣುಡಿಯೇ ಇದೆ ಶ್ರೀ ಸಿದ್ದರಾಮ ಚೈತನ್ಯ ಮಹಾಸ್ವಾಮಿಗಳು ತಿಳಿಸಿದರು, ನಗರದ ನಯನ ಸಭಾಂಗಣದಲ್ಲಿ ಒಕ್ಕಲಿಗ ಧರ್ಮ ಮಹಾಸಭಾ (ರಿ) ವತಿಯಿಂದ…

ಪಬ್ಲಿಕ್ ಪವರ್ ಮಾಸಿಕ ಪತ್ರಿಕೆ R ಹನುಮಂತು. , *************************** ಎಸ್ಎಸ್ಎಸ್ ವಾರ್ಷಿಕ ಶಿಬಿರದಲ್ಲಿ ಸ್ವಚ್ಛಕಾಯಕದತ್ತ ಯುವಜನತೆ ಉಪನ್ಯಾಸ ಮಾಲಿಕೆ – ನನ್ನ ಮಣ್ಣು ನನ್ನ ದೇಶ-ನನಗಾಗಿ ಎಂದರೆ ಅದು ಸ್ವಾರ್ಧ ನಿನಗಾಗಿ ಎಂದರೆ ಅದು ದೇಶಾಭಿಮಾನ – ಡಾ. ಶೀಲಾದೇವಿ ಎಸ್ ಮಳೀಮಠ

ಬಸವೇಶ್ವರ ವಾಣಿಜ್ಯಕಲಾ ವಿಜ್ಞಾನ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಎನ್ ಎಸ್ ಎಸ್ ವಾರ್ಷಿಕ ಶಿಬಿರದ ಉಪನ್ಯಾಸ ಮಾಲಿಕೆಯಲ್ಲಿ ಮಹತ್ವದ ವಿಷಯ ನನ್ನ ಮಣ್ಣುನನ್ನ ದೇಶ ಅಂಶಗಳನ್ನುವಿವರಿಸುತ್ತಸ್ವಯಂ ಸೇವಕರಿಗೆ ನನಗಾಗಿ ಅಲ್ಲ ನಿಮಗಾಗಿ ಎಂಬ ಘೋಷವಾಕ್ಯದ ಮೂಲಕ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಬಿಎಂಎಸ್ ಮಹಿಳಾ…

ಪಬ್ಲಿಕ್ ಪವರ್. ****************ಆನೇಕಲ್ ಸುದ್ದಿ.
ದಲಿತ ಸಂಘರ್ಷ ಸೇನೆ ಪದಾಧಿಕಾರಿಗಳ ನೇಮಕಾತಿ..
ದಲಿತ ಸಂಘರ್ಷ ಸೇನೆ ಎಇಸಿ ಎಸ್ ಲೇಔಟ್ ಕೂಡ್ಲು ಬೆಂಗಳೂರು ಕೇಂದ್ರ ಕಛೇರಿ ಯಲ್ಲಿ ಸಂಸ್ಥಾಪಕ ರಾಜ್ಯಾಧ್ಯಕ್ಷರು ಹಾಗೂ ರಾಜ್ಯದ ಪ್ರಸಿದ್ಧ ದಲಿತಪರ ಹೋರಾಟಗಾರರು ಹಾಗೂ ರಾಜ್ಯ ಉಪಾಧ್ಯಕ್ಷರಾದ ಜಿ. ರವಿಕುಮಾರ್ ಕಾರ್ಯಾಧ್ಯಕ್ಷರಾದ ಭದ್ರಯ್ಯ ಆನೇಕಲ್ ತಾಲ್ಲೂಕು ದಲಿತ ಸಂಘರ್ಷ ಸೇನೆ ಅಧ್ಯಕ್ಷರಾದ ಮುರುಗೇಶ್ ಅವರ ನೇತೃತ್ವದಲ್ಲಿ ತಾಲೂಕು ಅಧ್ಯಕ್ಷರ ಮತ್ತು ಪದಾಧಿಕಾರಿಗಳ ನೇಮಕಾತಿ ಕಾರ್ಯಕ್ರಮ ನಡೆಯಿತು
ದಲಿತ ಸಂಘರ್ಷ ಸೇನೆ ಆನೇಕಲ್ ತಾ ಉಪಾಧ್ಯಕ್ಷರಾಗಿ ವೈ. ಗೋಪಾಲ್ ಪ್ರಧಾನ ಕಾರ್ಯದರ್ಶಿಯಾಗಿ ಪಿ. ಯೋಗೀಶ್ ಸಂಘಟನಾ ಕಾರ್ಯದರ್ಶಿಯಾಗಿ ಬಿ. ಸುಮನ್ ಹಾಗೂ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ ನಂಜುಂಡ ರವರನ್ನು ಆಯ್ಕೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಬೆಂಗಳೂರು ನಗರ ಜಿಲ್ಲಾ ಕಾರ್ಯ ಧ್ಯಕ್ಷರಾದ ಮುನಿರಾಜು ಪ್ರಧಾನ ಕಾರ್ಯದರ್ಶಿ ಪಾಲಾಕ್ಷ ಬೆಂಗಳೂರು ದಕ್ಷಿಣ ತಾಲೂಕು ಗೌರವಾಧ್ಯಕ್ಷರಾದ ನಾರಾಯಣಪ್ಪ ಅಧ್ಯಕ್ಷರಾದ ಪಿ. ರವಿಕುಮಾರ್ ಉಪಾಧ್ಯಕ್ಷರಾದ ಸಂತೋಷ್ ಕಾರ್ಯಧ್ಯಕ್ಷರು ಶಿವಕುಮಾರ್ ಆನೇಕಲ್ ತಾಲೂಕು ಗೌರವಾಧ್ಯಕ್ಷರಾದ ರಾಮಸ್ವಾಮಿ ಕಾರ್ಯಧ್ಯಕ್ಷರಾದ ರಾಜಪ್ಪ ಬೆಂಗಳೂರು ನಗರ ಜಿಲ್ಲಾ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಆಶಾ ಉಪಾಧ್ಯಕ್ಷರಾದ ಚಂದ್ರಕಲಾ ಕಾರ್ಯಾಧ್ಯಕ್ಷರಾದ ರಾಧಾ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿ ಮಾದಮ್ಮ ಸೇರಿದಂತೆ ದಲಿತ ಸಂಘರ್ಷ ಸೇನೆ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಒಕ್ಕೂಟ.ನಿ 4ನೇ ದಿನದ ಅಖಿಲ ಭಾರತ ಸಹಕಾರ ಸಪ್ತಾಹದ ಆಚರಣೆಯನ್ನು ಜಿಲ್ಲೆಯ ಗೌರಿಬಿದನೂರಿನ ಕೋಚಿಮುಲ್,
ಶಿಬಿರ ಕಚೇರಿಯಲ್ಲಿ ಆಚರಿಸಲಾಯಿತು. ಒಕ್ಕೂಟದ ಅಧ್ಯಕ್ಷರಾದ ಹೆಚ್.ವಿ ನಾಗರಾಜ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷರಾದ ಜೆ.ವಿ ಹನುಮೇಗೌಡ ಇಂದಿನ ದಿನದ ವಿಷಯದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ನಂಜಯ್ಯಗಾರಹಳ್ಳಿ ಎಂಪಿಸಿಎಸ್ ನ ಅಧ್ಯಕ್ಷರಾದ ರಾಮಕೃಷ್ಣಾರೆಡ್ಡಿ,
ನೌಕರರ ಒಕ್ಕೂಟದ ಅಧ್ಯಕ್ಷರಾದ ವೆಂಕಟೇಶರೆಡ್ಡಿ,ಶಿಬಿರ ಕಚೇರಿಯ ಸಹಾಯಕ ವ್ಯವಸ್ಥಾಪಕರಾದ ಸತೀಶ್ ಪಾಟೀಲ್ ಮಾತನಾಡಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಉಪಾಧ್ಯಕ್ಷರಾದ ಎನ್.ಕೆ ಲಕ್ಷ್ಮೀಪತಿ,ನಿರ್ದೇಶಕರಾದ ಎನ್.ಎ ಆದಿನಾರಾಯಣರೆಡ್ಡಿ, ಜೆ.ನರಸಿಂಹಮೂರ್ತಿ ಜಿ.ಎನ್ ವೆಂಕಟಸ್ವಾಮಿಗೌಡ ಶಿಬಿರ ಕಚೇರಿಯ ವಿಸ್ತರಣಾಧಿಕಾರಿಗಳಾದ ಕಿರಣ್ ಕುಮಾರ್,ಸಚಿನ್ ಧರ್ಮಟ್ಟಿ, ನವೀನ್ ಕುಮಾರ್,ಮಂಜುನಾಥ್,
ನೌಕರರ ಒಕ್ಕೂಟದ ಉಪಾಧ್ಯಕ್ಷರಾದ ಶ್ರೀನಿವಾಸ್ ಮತ್ತು ತಾಲ್ಲೂಕಿನ ಎಂಪಿಸಿಎಸ್ ಅಧ್ಯಕ್ಷರು,
ಮುಖ್ಯಕಾರ್ಯನಿರ್ವಾಹಕರುಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ತಾಲ್ಲೂಕಿನಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಸಂಘಗಳಿಗೆ ಸನ್ಮಾನ ಮಾಡಿ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ಚಿಕ್ಕಬಳ್ಳಾಪುರ: ಪ್ರತಿಯೊಬ್ಬರೂ ಕ್ರೀಡಾಶಕ್ತಿಯನ್ನು ಬೆಳೆಸಿಕೊಂಡು ದೇಶಿಯ ಕ್ರೀಡೆಗಳನ್ನು ಉತ್ತುಂಗಕ್ಕೆ ಏರಿಸಬೇಕು ಎಂದು ಜೈ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಜಯಕುಮಾರ್ ಹೇಳಿದರು.
ಅವರು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮಂಚೇನಹಳ್ಳಿ ಹೋಬಳಿ ಕೇಂದ್ರದ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಜೈ ಫೌಂಡೇಶನ್ ಹಾಗೂ ಮಾನ್ ಸ್ಟಾರ್ ಬಾಯ್ಸ್ ಸಂಯುಕ್ತ ಆಶ್ರಯದಲ್ಲಿ ಮತ್ತು ಜೈ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಜಯಕುಮಾರ್ ಅವರ ಸಾರಥ್ಯದಲ್ಲಿ “ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ” ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ವಿದ್ಯಾರ್ಥಿಗಳು ಮಾತ್ರ ಅಲ್ಲದೆ ಕ್ರೀಡೆಗಳಲ್ಲಿ ಆಸಕ್ತಿ ಬಳಸಿಕೊಂಡಿರುವ ಎಲ್ಲರೂ ಇಂತಹ ಕ್ರೀಡೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕ್ರೀಡಾ ಮನೋಭಾವನೆಗಳನ್ನು ರೂಡಿಸಿಕೊಳ್ಳಬೇಕು ಎಂದರು. ಅದೇ ರೀತಿ ಕ್ರೀಡೆಗಳು ನಮ್ಮ ಮಾನಸಿಕ ತುಮುಲಗಳನ್ನು ದೂರ ಮಾಡಲಿವೆ ನಾವು ಕಡೆಗಳಲ್ಲಿ ಭಾಗವಹಿಸಿ ಇನ್ನಿತರಗು ಸಹ ಕ್ರೀಡೆಗಳಲ್ಲಿ ಭಾಗವಹಿಸುವಂತೆ ಪ್ರೇರೆಪಣೆ ನೀಡಬೇಕು.ಇಂದು ಮಂಚೇನಹಳ್ಳಿಯಲ್ಲಿ ಮಾನ್ ಸ್ಟಾರ್ ಬಾಯ್ಸ್ ಯುವಕರು ಮುತುವರ್ಜಿಯಿಂದ ಹೋಬಳಿ ಕೇಂದ್ರದ ಕ್ರೀಡಾಕೂಟದಲ್ಲಿ ಭಾಗವಹಿಸಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ, ಜಾತಿಭೇದ ಮತ್ತು ಧರ್ಮಭೇದ ಇಲ್ಲದೆ ಇಂತಹ ಕ್ರೀಡೆಗಳಿಗೆ ಹೆಚ್ಚಿನ ಸಹಕಾರ ನೀಡುವುದಾಗಿಯೂ ಇದೇ ಸಂದರ್ಭದಲ್ಲಿ ಜಯಕುಮಾರ್ ಅವರು ತಿಳಿಸಿದರು.
ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ 25,000 ಮತ್ತು ದ್ವಿತೀಯ ಸ್ಥಾನ ತಂಡಕ್ಕೆ15,000 ಜೈ ಫೌಂಡೇಶನ್ ವತಿಯಿಂದ ನಗದು ಬಹುಮಾನ ನೀಡುವುದಾಗಿ ಜಯಕುಮಾರ್ ಘೋಷಣೆ ಮಾಡಿದರು.
ಜೈ ಫೌಂಡೇಶನ್ ಕಾರ್ಯದರ್ಶಿ ಮುಬಾರಕ್ ಮಾತನಾಡಿ ವಿದ್ಯಾದಿಸೆ ಜೊತೆ ಜೊತೆಯಲ್ಲಿಯೇ ಕ್ರೀಡೆಗಳನ್ನು ಹವ್ಯಾಸವನ್ನಾಗಿ ಮಾಡಿಕೊಂಡು ಬರುವುದು ಒಂದು ವಿಧವಾದರೆ ನಂತರ ಸಂಘ ಸಂಸ್ಥೆಗಳ ಒಡನಾಡಿಗಳಾಗಿ ಇಂತಹ ಕ್ರೀಡೆಗಳಲ್ಲಿ ಭಾಗವಹಿಸಿ ಇನ್ನಿತರಗು ಪ್ರೇರೇಪಣೆ ನೀಡುವುದು ಒಳ್ಳೆಯ ಬೆಳವಣಿಗೆ, ಇಂತಹ ಕಾರ್ಯಕ್ರಮಗಳಿಗೆ ಜೈ ಫೌಂಡೇಶನ್ ವತಿಯಿಂದ ಇಡೀ ಮಂಚೇನಹಳ್ಳಿ ಹೋಬಳಿ ಕೇಂದ್ರದಲ್ಲಿ ಮಾತ್ರವಲ್ಲದೆ ವಿಧಾನಸಭಾ ಕ್ಷೇತ್ರದಾದ್ಯಂತ ನಾನಾ ರೀತಿಯ ಸಾಮಾಜಿಕ ಕಾರ್ಯಗಳನ್ನು ಮಾಡಿಕೊಂಡು ಬರಲ್ಲಾಗುತ್ತಿದೆ ಅಲ್ಲದೆ ಆರೋಗ್ಯ, ಶಿಕ್ಷಣಕ್ಕೆ ಜೈ ಫೌಂಡೇಶನ್ ಹೆಚ್ಚು ಒತ್ತು ನೀಡುತ್ತಾ ಬಂದಿದೆ ಎಂದ ಅವರು ಇಂದು ಆಯೋಜಿಸಿರುವ ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ಹೇಳಿದರು.
ಫೌಂಡೇಷನ್ ಟ್ರಸ್ಟಿ ನವೀನ್ ಮಾತನಾಡಿ ವ್ಯಾಸಂಗಕ್ಕೆ ನೀಡುವಷ್ಟೇ ಆದ್ಯತೆಯನ್ನು ಕ್ರೀಡೆಗಳಿಗೂ ಮೀಸಲಿಡಬೇಕು ಆಗ ತಮ್ಮಲ್ಲಿನ ಪ್ರತಿಭೆ ಹೊರ ಪ್ರದರ್ಶಿಸಿ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳುವಂತಾಗಲಿದೆಎಂದರು.
ಜೈ ಫೌಂಡೇಶನ್ ಟ್ರಸ್ಟಿಗಳಾದ ಸುಬ್ರಮಣಿ, ಗೋವಿಂದರಾಜು, ಹಾಗೂ ಮಾನ್ ಸ್ಟಾರ್ ಬಾಯ್ಸ್ ಪದಾಧಿಕಾರಿಗಳು ಮತ್ತು ಕ್ರೀಡಾಪಟುಗಳು ಹಾಜರಿದ್ದರು.