ಶಾಹೀನ್ ಶಿಕ್ಷಣ ಸಂಸ್ಥೆಯಿಂದ 75 ಬಡ ವಿದ್ಯಾರ್ಥಿಗಳಿಗೆ NEET ಉಚಿತ ತರಬೇತಿ
ಬೀದರ್: ಶಾಹೀನ್ ಶಿಕ್ಷಣ ಸಂಸ್ಥೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಕನ್ನಡ ಮಾಧ್ಯಮದ 75 ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) ಪುನರಾವರ್ತಿತ ಉಚಿತ ತರಬೇತಿ ನೀಡಲು ನಿರ್ಧರಿಸಲಾಗಿದೆ ಎಂದು…
ರಕ್ತದಾನ ಮಾಡುವುದರಿಂದ ಹೃದ್ರೋಗದ ಅಪಾಯವನ್ನು ತಡೆಯಬಹುದು: ಡಾ. ರವಿಕಿರಣ್
ಕೋಲಾರ: ರಕ್ತದಾನ ಮಾಡುವುದರಿಂದ ಹೃದ್ರೋಗದ ಅಪಾಯವನ್ನು ತಡೆಯಬಹುದು ಎಂದು ವೇಮಗಲ್ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾಕ್ಟರ್ ರವಿಕಿರಣ್ ರವರು ತಿಳಿಸಿದರು. ತಾಲೂಕಿನ ನರಸಾಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಕೋಲಾರ ಎಸ್ಎನ್ಆರ್ ಆಸ್ಪತ್ರೆ ರಕ್ತ ನಿದಿ ಕೇಂದ್ರ ರವರ…
ಶುದ್ಧ ಆಯುರ್ವೇದ ಪ್ರಾಕ್ಟೀಸ್ ಗೆ ಡಾಕ್ಟರ್ ರಾಮದಾಸ್ ಕರೆ
ಬಳ್ಳಾರಿ ಜು 30: ಜಾಗತಿಕ ಮಹಾಮಾರಿ ಕೋವಿಡ್ ನಂತರ ಆಯುರ್ವೇದದ ಚಿಕಿತ್ಸಾ ಪದ್ಧತಿಗೆ ಮನ್ನಣೆ ಹೆಚ್ಚಾಗಿದ್ದು ಆಯುರ್ವೇದ ವೈದ್ಯರು ಶುದ್ಧ ಆಯುರ್ವೇದ ಪದ್ಧತಿಯಲ್ಲಿ ಚಿಕಿತ್ಸೆ ಗೆ ಮುಂದಾಗಬೇಕೆಂದು ಮಹಾರಾಷ್ಟ್ರದ ಖ್ಯಾತ ವೈದ್ಯರಾದ ಡಾಕ್ಟರ್ ರಾಮದಾಸ್ ಅವರು ಕರೆ ನೀಡಿದರು, ಅವರು ನಗರದ…
ಪಶು ವೈದ್ಯ ಇಲಾಖೆಯ ಅಧಿಕಾರಿಗಳಿಂದ ಕೋಟ್ಯಂತರ ಹಣ ಗುಳುಂ: KRS ಆರೋಪ
ಪಶುಗಳ ರಕ್ಷಣೆ ಹಾಗೂ ರೈತರ ಬದುಕಿಗೆ ದಾರಿ ದೀಪವಾಗಬೇಕಾಗಿದ್ದ ಪಶು ವೈದ್ಯ ಇಲಾಖೆಯ ಉಪನಿರ್ದೇಶಕರು ಮತ್ತು ವೈದ್ಯಾಧಿಕಾರಿಗಳು ಪಶು ಪಾಲನ ಯೋಜನೆಯ ಕೋಟ್ಯಾಂತರ ರೂಪಾಯಿ ಹಣವನ್ನು ಲೂಟಿ ಮಾಡಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಕರ್ನಾಟಕ ರಿಪಬ್ಲಿಕನ್ ಸೇನೆಯ ಜಿಲ್ಲಾಧ್ಯಕ್ಷ ಚಿಕ್ಕನಾರಾಯಣ…
ವಿಜಯನಗರ ಜಿಲ್ಲೆಯಲ್ಲಿ 27.2 ಮೆಗಾವ್ಯಾಟ್ ಸೋಲಾರ್ ಯೋಜನೆ
ರಾಜ್ಯದ ವಿಜಯನಗರ ಜಿಲ್ಲೆಯಲ್ಲಿ ನೂತನವಾಗಿ ನಿರ್ಮಿಸಿರುವ 27.2 ಮೆಗಾವ್ಯಾಟ್ನ ಗ್ರೂಪ್ ಕ್ಯಾಪ್ಟಿವ್ ಸೋಲಾರ್ ಹಾಗೂ ವಿಂಡ್ ನವೀಕರಿಸಬಹುದಾದ ಇಂಧನ ಯೋಜನೆಯನ್ನು ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಮತ್ತು ರಿನ್ಯೂ ಎನರ್ಜಿ ಗ್ಲೋಬಲ್ ಪಿಎಲ್ ಸಿ ಜಂಟಿಯಗಿ ಉದ್ಘಾಟಿಸಿದೆ. (ಈ ದೂರದೃಷ್ಟಿಯ ಕಾರ್ಯಕ್ರಮದ ಹಂತ…
ಮಳೆಗಾಗಿ ಕತ್ತೆಗಳಿಗೆ ಮದುವೆ ಮಾಡಿದ ಗ್ರಾಮಸ್ಥರು!
ಕತ್ತೆಗಳ ಮದುವೆ ಕಾರ್ಯ ನೆರವೇರಿಸಿದರೆ ಮಳೆ ಬರುತ್ತದೆ ಎಂಬ ನಂಬಿಕೆಯಿಂದ ಮೂಡಲಗಿ ತಾಲೂಕಿನ ಲಕ್ಷ್ಮೇಶ್ವರ ಕ್ರಸ್ ಗ್ರಾಮಸ್ಥರು ಒಂದು ಗಂಡು ಮತ್ತು ಹೆಣ್ಣು ಕತ್ತೆಗಳನ್ನು ಗ್ರಾಮಕ್ಕೆ ಬರಮಾಡಿಕೊಂಡು ಗ್ರಾಮದ ಬಸವೇಶ್ವರ ನಗರ ದಲ್ಲಿ ಮದುವೆ ಮಂಟಪ್ಪ ನಿರ್ಮಿಸಿ ಮನುಷ್ಯರ ಮದುವೆ ಸಮಾರಂಭಗಳಲ್ಲಿ…
ಪ್ರೊ.ಎನ್.ಆರ್.ಶೆಟ್ಟಿಯವರಿಗೆ ಜೀವಮಾನದ ಸಾಧನೆ ಪ್ರಶಸ್ತಿ
ವಿಶ್ವ ಸಂವಿಧಾನ ಮತ್ತು ಸಂಸತ್ತು ಸಂಘ ದಿಂದ ವಿಶ್ವ ಶೈಕ್ಷಣಿಕ ರುವಾರಿ ವಿಭಾಗದ ಪ್ರಶಸ್ತಿ: ಯಲಹಂಕ: ಮನುಜಕುಲ ಒಂದೇ’ ಎಂಬ ಧ್ಯೇಯದಿಂದ ಸ್ಥಾಪಿತವಾದ ‘ವಿಶ್ವ ಸಂವಿಧಾನ ಮತ್ತು ಸಂಸತ್ತು ಸಂಘ’ದ ವಿಶ್ವದ ಶೈಕ್ಷಣಿಕ ರೂವಾರಿ ವಿಭಾಗದ ಜೀವಮಾನದ ಸಾಧನೆಯ ಪ್ರಶಸ್ತಿಗೆ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿ, ನಿಟ್ಟೆ ಸಮೂಹ ವಿದ್ಯಾಸಂಸ್ಥೆಗಳ ಹಿರಿಯ ಸಲಹೆಗಾರ ಪ್ರೊ. ಎನ್.ಆರ್. ಶೆಟ್ಟಿ ಭಾಜನರಾಗಿದ್ದಾರೆ. ಅಮೆರಿಕಾದ ವರ್ಜೀನಿಯಾ ರಾಜ್ಯದ ಪೀಸ್ ಪೆಂಟಗಾನ್‌ನಲ್ಲಿರುವ ‘ವಿಶ್ವ ಸಂವಿಧಾನ ಮತ್ತು ಸಂಸತ್ತು ಸಂಘ’ದ ಪ್ರಧಾನ ಕಛೇರಿಯು, 47ನೇ ಪೃಥ್ವಿ ಸಂವಿಧಾನ ದಿನಾಚರಣೆಯ ಅಂಗವಾಗಿ ವಿಶ್ವದೆಲ್ಲೆಡೆ ಆಯ್ದ ಸಾಧಕರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಿದ್ದು, ಈ ಸಾಧಕರಲ್ಲಿ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಹಿರಿಯ ಸಲಹೆಗಾರ ಪ್ರೊ.ಎನ್.ಆರ್.ಶೆಟ್ಟಿಯವರಿಗೆ ಜೀವಮಾನದ ಸಾಧನೆ ಪ್ರಶಸ್ತಿ ಮತ್ತು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಹೆಚ್.ಸಿ.ನಾಗರಾಜ್‌ರವರಿಗೆ ‘ಶಿಕ್ಷಕ-ಬದಲಾವಣೆಯ ರುವಾರಿ’ ಪ್ರಶಸ್ತಿ ದೊರೆತಿದೆ.ಜೂನ್ 27ರಂದು ರಂದು 47ನೇ ಪೃಥ್ವಿ ಸಂವಿಧಾನ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಶ್ವ ಸಂವಿಧಾನ ಮತ್ತು ಸಂಸತ್ತು ಸಂಘ ದ ಜಾಗತಿಕ ಉಪಾಧ್ಯಕ್ಷ ಪ್ರೊ.ಇ.ಪಿ.ಮೆನನ್ ಪ್ರೊ.ಎನ್.ಆರ್.ಶೆಟ್ಟಿ ಮತ್ತು ಡಾ.ಹೆಚ್.ಸಿ.ನಾಗರಾಜ್‌ರವರಿಗೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದರು. ‘ವಾಷಿಂಗ್‌ಟನ್‌ನಲ್ಲಿರುವ ವಿಶ್ವ ತಾಂತ್ರಿಕ ಶಿಕ್ಷಣ ಮಂಡಳಿಯ ಉಪಾಧ್ಯಕ್ಷರಾಗಿ, ಭಾರತದ ತಾಂತ್ರಿಕ ಶಿಕ್ಷಣ ಮಂಡಳಿಯ ಅಧ್ಯಕ್ಷರಾಗಿ, ನಿಟ್ಟೆ ವಿಶ್ವ ವಿದ್ಯಾಲಯದ ಕುಲಪತಿಯಾಗಿ ಹಾಗೂ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳಾಗಿ ಪ್ರೊ. ಎನ್.ಆರ್. ಶೆಟ್ಟಿ ಅವರು ಸಲ್ಲಿಸಿರುವ ಅನುಪಮ ಸೇವೆಗಾಗಿ ಈ ಪ್ರಶಸ್ತಿ ಪ್ರದಾನ ಮಾಡಲು ನಮ್ಮ ಕಛೇರಿ ನಿರ್ಧರಿಸಿದೆ, ಎಂದು ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಪ್ರೊ. ಇ.ಪಿ. ಮೆನನ್ ಮೆಚ್ಚಿಗೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ‘ವಿಶ್ವಸಂವಿಧಾನ ಮತ್ತು ಸಂಸತ್ತು ಸಂಘ’, ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಹೆಚ್.ಸಿ. ನಾಗರಾಜ್ ಅವರಿಗೆ, ‘ಟೀಚರ್-ಚೇಂಜ್ ಮೇಕರ್’ (ಶಿಕ್ಷಕ-ಬದಲಾವಣೆಯ ರೂವಾರಿ) ವಿಭಾಗದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ವಿಶ್ವಾದ್ಯಂತ ವಿದ್ಯಾರ್ಥಿ ಬಳಗವನ್ನು ಹೊಂದಿರುವ ಡಾ. ಹೆಚ್.ಸಿ. ನಾಗರಾಜ್ ಅವರ ಹೆಸರನ್ನು ಹತ್ತಾರು ದೇಶಗಳಲ್ಲಿ ನೆಲೆನಿಂತಿರುವ ಅವರ ಶಿಷ್ಯರು ಸೂಜಿಸಿದ್ದರು. ಇದನ್ನು ಪೀಸ್ ಪೆಂಟಗಾನ್‌ನಲ್ಲಿರುವ ನಮ್ಮ ಮಾತೃ ಸಂಸ್ಥೆ ಪರಿಗಣಿಸಿದೆ ಎಂದು ವಿಶ್ವ ಸಂವಿಧಾನ ಮತ್ತು ಸಂಸತ್ತು ಸಂಘ ದ ಕರ್ನಾಟಕದ ಪ್ರತಿನಿಧಿ ಪಿ.ನರಸಿಂಹಮೂರ್ತಿ ಅವರು ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ತಿಳಿಸಿದರು. 27 ಜೂನ್ 1977ರಲ್ಲಿ ಅಸ್ತಿತ್ವಕ್ಕೆ ಬಂದ ‘ವಿಶ್ವಸಂವಿಧಾನ ಮತ್ತು ಸಂಸತ್ತು ಸಂಘ’ದ ಪೃಥ್ವಿ ಸಂವಿಧಾನದ ಅನುಮೋದನೆಗೆ ಜಗತ್ತಿನ 25 ರಾಷ್ಟ್ರಗಳ 138 ಹಿರಿಯ ಮಾನವತಾವಾದಿಗಳು ಸಹಿಹಾಕಿದ್ದಾರೆ. ಮಾನವೀಯತೆಯನ್ನು ಎತ್ತಿ ಹಿಡಿಯುವ ಹಾಗೂ ರಾಜಕೀಯ ಕಾರಣಕ್ಕಾಗಿ ನಡೆಯುವ ಪರಸ್ಪರ ಯುದ್ಧಗಳನ್ನು ಕೊನೆಗೊಳಿಸುವ ಮಹದೋದ್ದೇಶ ಪೃಥ್ವಿ ಸಂವಿಧಾನದ ಧ್ಯೇಯವಾಗಿದೆ.
ತಾಲ್ಲೂಕಿನಾದ್ಯಂತ ಕೆಂಪೇಗೌಡರ 514ನೇ ಜಯಂತಿ ಆಚರಣೆ
ಶಿಡ್ಲಘಟ್ಟ: ರಾಜ್ಯಾದ್ಯಂತ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಎಲ್ಲಾ ಕಡೆ ಕೆಂಪೇಗೌಡರ ಪ್ರತಿಮೆಯನ್ನು ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡುವ ಮೂಲಕ ಹಮ್ಮಿಕೊಳ್ಳಲಾಗಿದ್ದು ಅದರಂತೆ ಶಿಡ್ಲಘಟ್ಟ ತಾಲ್ಲೂಕಿನಲ್ಲಿಯು ಸಹ ಬಹಳ ವಿಜೃಂಭಣೆಯಿಂದ ನೆರವೇರಿಸಲಾಯಿತು ಇದಕ್ಕೆ ಎಲ್ಲಾ ಸಮುದಾಯದವರು ಸಾಕ್ಷಿಯಾಗಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ/ ಧನುಂಜಯರೆಡ್ಡಿಯವರು…
ಮಾದಕ ವಸ್ತುಗಳಿಗೆ ಬಲಿಯಾಗದಂತೆ ಯುವ ಸಮುದಾಯವು ಎಚ್ಚರ ವಹಿಸಬೇಕು: ಡಾ.ವೀರೇಂದ್ರ ಕುಮಾರ್
ಬಳ್ಳಾರಿ,ಜೂ.28: ಯುವ ಸಮುದಾಯವು ಮಾದಕ ವಸ್ತುಗಳ ಬಗ್ಗೆ ಅರಿವು ಹೊಂದಬೇಕು ಹಾಗೂ ಅವುಗಳಿಂದ ದೂರವಿರಬೇಕು. ಮಾದಕ ವಸ್ತುಗಳಿಗೆ ಬಲಿಯಾಗದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಟಾನ ಅಧಿಕಾರಿ ಹಾಗೂ ಜಿಲ್ಲಾ ಕುಷ್ಟರೋಗ ನಿರ್ಮೂಲನಾ ಅಧಿಕಾರಿ ಡಾ.ವೀರೇಂದ್ರ ಅವರು…
ಮಾದಕ ವಸ್ತುಗಳಿಂದ ಯುವಕರು ದೂರ ಇರಿ: ಹೊಸಕೋಟೆ ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಗುರುರಾಜ್ ಕಿವಿಮಾತು
ಹೊಸಕೋಟೆ : ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಸೂಲಿಬೆಲೆ ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2023ರ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನ ವನ್ನು ಆಚರಿಸಲಾಯಿತು.2023ರ ಘೋಷವಾಕ್ಯ-“ಜನರು ಮೊದಲು, ಕಳಂಕ ಮತ್ತು ತಾರತಮ್ಯ ನಿಲ್ಲಿಸಿ,…