ಗ್ರಾಮ ಒನ್ ಕೇಂದ್ರಕ್ಕೆ ತಹಶೀಲ್ದಾರ್ ಭೇಟಿ ಪರಿಶೀಲನೆ

ಮಾಲೂರು :- ಗ್ರಾಮ ಒನ್ ಕೇಂದ್ರಕ್ಕೆ ತಹಶೀಲ್ದಾರ್ ರಮೇಶ್ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸರ್ಕಾರವು ಅನೇಕ ಗ್ಯಾರೆಂಟಿ ಯೋಜನೆಗಳನ್ನು ಜನರಿಗಾಗಿ ಜಾರಿಗೆ ತಂದಿದ್ದು, ಈ ಹಿನ್ನೆಲೆಯಲ್ಲಿ ಗೃಹ ಲಕ್ಷ್ಮೀ ಯೋಜನೆಗೆ ಜುಲೈ 19ರಿಂದ ಅರ್ಜಿಯನ್ನು ಹಾಕಲು ಅವಕಾಶ ಕಲ್ಪಿಸಲಾಗಿದೆ.…

ಎಸಿ ಗದ್ಯಾಳ ಅಧಿಕಾರ ಸ್ವೀಕಾರ

ಇಂಡಿ : ಜು.22:ಇಂಡಿಯ ಕಂದಾಯ ಉಪವಿಬಾಗಾಧಿಕಾರಿಯಾಗಿ ಅಬೀದ್ ಗದ್ಯಾಳ ಅಧಿಕಾರ ಸ್ವೀಕರಿಸಿದರು. ಮೂಲತ ರಬಕವಿಯ ಅಭೀದ್‍ರವರು 2014 ರಲ್ಲಿ ಕೆ.ಎ.ಎಸ್ ಪಾಸಾಗಿದ್ದಾರೆ. ಅವರು ಮಡಕೇರಿಯಲ್ಲಿ ಪರಿಕ್ಷಾರ್ಥ ಅಧಿಕಾರಿಯಾಗಿ, ಜಮಖಂಡಿ ಮತ್ತು ಬ್ಯಾಡಗಿಯಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಯಾಗಿ, ರಾಣಿಬೆನ್ನೂರ, ಬಾಗಲಕೋಟದಲ್ಲಿ ಭೂ ಸ್ವಾಧೀನ್…

ಚಿಕ್ಕಮಗಳೂರಿನಲ್ಲಿ KSRTC ಬಸ್ಸಿನಲ್ಲಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳನ್ನು ಹತಿಸಲು ನಿರಾಕರಿಸಿದ ಕಾರಣಕ್ಕೆ ಮಂಗಳವಾರ KSRTC ಕಾರ್ಯ ನಿರ್ವಾಹಕ ಅಧಿಕಾರಿಯವರಿಗೆ ಮನವಿ ಮಾಡಿದರು

ಚಿಕ್ಕಮಗಳೂರಿನಲ್ಲಿ KSRTC ಬಸ್ಸಿನಲ್ಲಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳನ್ನು ಹತಿಸಲು ನಿರಾಕರಿಸಿದ ಕಾರಣಕ್ಕೆ ಮಂಗಳವಾರ KSRTC ಕಾರ್ಯ ನಿರ್ವಾಹಕ ಅಧಿಕಾರಿಯವರಿಗೆ ಮನವಿ ಮಾಡಿದರು ಯಾವುದೇ ರೀತಿಯ ಕ್ರಮ ಕೈಗೊಳ್ಳದ ಕಾರಣ ಇಂದು KSRTC ಡಿಪೂ D C ಯವರಿಗೆ ಇಂದು ಮಾನವಿ ಮಾಡಲಾಯಿತು…

ಪ್ರಾಥಮಿಕ ಕೃಷಿ ಪತ್ತಿನ ಸಂಘಗಳಲ್ಲಿ (PACS) ಸಾಮಾನ್ಯ ಸೇವಾ ಕೇಂದ್ರ (CSC) ಸೇವೆಗಳನ್ನು ಪ್ರಾರಂಭಿಸುವ ಕುರಿತಾದ ರಾಷ್ಟ್ರೀಯ ಮೆಗಾ ಸಮಾವೇಶವನ್ನು ಉದ್ಘಾಟಿಸಿದ ಅಮಿತ್ ಶಾ.

ಪ್ರಾಥಮಿಕ ಕೃಷಿ ಪತ್ತಿನ ಸಂಘಗಳಲ್ಲಿ (PACS) ಸಾಮಾನ್ಯ ಸೇವಾ ಕೇಂದ್ರ (CSC) ಸೇವೆಗಳನ್ನು ಪ್ರಾರಂಭಿಸುವ ಕುರಿತಾದ ರಾಷ್ಟ್ರೀಯ ಮೆಗಾ ಸಮಾವೇಶವನ್ನು ಉದ್ಘಾಟಿಸಿದ ಅಮಿತ್ ಶಾ. ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯಲ್ಲಿ ಪ್ರಾಥಮಿಕ…

ನಾಗರಿಕ ಅಭಿನಂದನಾ ಸಮಿತಿ ವತಿಯಿಂದ ಈಶ್ವರ ಖಂಡ್ರೆ ಮತ್ತು ರಹಿಂಖಾನ್ ಸಚಿವದ್ವಯರಿಗೆ ಜು. 23 ರಂದು ಸನ್ಮಾನ

ಡಾ. ಜಗನ್ನಾಥ ಹೆಬ್ಬಾಳೆ ಡಾ. ಚನ್ನಬಸಪ್ಪ ಹಾಲಹಳ್ಳಿಸಂಯೋಜಕರು, ಅಧ್ಯಕ್ಷರು,ನಾಗರಿಕ ಅಭಿನಂದನಾ ಸಮಿತಿ, ಬೀದರ ನಾಗರಿಕ ಅಭಿನಂದನಾ ಸಮಿತಿ, ಬೀದರ ನಾಗರಿಕ ಅಭಿನಂದನಾ ಸಮಿತಿ ವತಿಯಿಂದ ಈಶ್ವರ ಖಂಡ್ರೆ ಮತ್ತು ರಹಿಂಖಾನ್ ಸಚಿವದ್ವಯರಿಗೆ ಜು. 23 ರಂದು ಸನ್ಮಾನವಿವಿಧ ಸಂಘ-ಸಂಸ್ಥೆಗಳ ಪ್ರಮುಖರಿಗೂ ಸನ್ಮಾನಿಸಲು…

ಬುಕ್ಕಪಟ್ಟಣ ಗ್ರಾಪಂ ಅಧ್ಯಕ್ಷರಾಗಿ ಮಮತಾ, ಉಪಾಧ್ಯಕ್ಷರಾಗಿ ಮಂಜುಳಾ ಆಯ್ಕೆ..

ಕೊರಟಗೆರೆ:- ತಾಲ್ಲೂಕಿನ ಬುಕ್ಕಪಟ್ಟಣ ಗ್ರಾಮ ಪಂಚಾಯಿತಿಯಲ್ಲಿ ೨ನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಮಮತಾ, ಉಪಾಧ್ಯಕ್ಷರಾಗಿ ಮಂಜುಳಾ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ರಘು ಟಿ.ಆರ್ ಘೋಷಣೆ ಮಾಡಿದರು.ಚುನಾವಣಾ ಅಧಿಕಾರಿ ರಘು ಟಿ.ಆರ್ ನೇತೃತ್ವದಲ್ಲಿ ತಾಲ್ಲೂಕಿನ ಬುಕ್ಕಪಟ್ಟಣ ಗ್ರಾ.ಪಂಯಲ್ಲಿ ಅಧ್ಯಕ್ಷರಾಗಿ…

ಹುಟ್ಟುಹಬ್ಬದ ಶುಭಾಶಯಗಳು
ಅಮಾನುಲ್ಲಾ ರವರ.
ಬೆಂಗಳೂರು ಉತ್ತರ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ
ಶುಭಕೋರುವವರು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ನಾಯಕರು ಕಾರ್ಯಕರ್ತರು ಹಾಗೂ ಸ್ನೇಹಿತರು

ಹುಟ್ಟುಹಬ್ಬದ ಶುಭಾಶಯಗಳುಅಮಾನುಲ್ಲಾ ರವರ.ಬೆಂಗಳೂರು ಉತ್ತರ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷಶುಭಕೋರುವವರು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ನಾಯಕರು ಕಾರ್ಯಕರ್ತರು ಹಾಗೂ ಸ್ನೇಹಿತರು

ಬೃಹತ್ ಆಟೋರ್ಯಾಲಿ,ಬೃಹತ್ ಸೇಬುಹಾರ,ಬೆಳ್ಳಿಖಡ್ಗ ಉಡುಗೊರೆ ನೀಡಿ ಎಂಟಿಬಿ ನಾಗರಾಜ್ ರವರ ಹುಟ್ಟುಹಬ್ಬ ಸಂಭ್ರಮದಿಂದ ಆಚರಣೆ ಹೊಸಕೋಟೆ : ತಾಲ್ಲೂಕಿನ ಮಾಜಿ ಸಚಿವರು ಹಾಲಿ ವಿಧಾನ ಪರಿಷತ್ ಸದಸ್ಯರಾದ ಎಂಟಿಬಿ ನಾಗರಾಜ್ ರವರು 73ನೇ ವಸಂತಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಹೊಸಕೋಟೆ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕರ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿ ಅಭಿನಂದಿಸಿದರು. ನಗರದ ಎಸ್.ಜೆ.ಆರ್.ಎಸ್ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಎಂಟಿಬಿ ನಾಗರಾಜ್ ರವರ ಹುಟ್ಟು ಹಬ್ಬವನ್ನು ಭರ್ಜರಿಯಾಗಿ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳ, ಸಮ್ಮುಖದಲ್ಲಿ ಆಚರಿಸಿಕೊಂಡು ಸನ್ಮಾನ ಸ್ವೀಕರಿಸಿ ಮಾತನಾಡಿದರು. ಇಂದು ನಮ್ಮ ಹುಟ್ಟುಹಬ್ಬದ ಪ್ರಯುಕ್ತ ಅನಾಥಶ್ರಮಗಳಿಗೆ ಭೇಟಿ ನೀಡಿ ಅಲ್ಲಿರುವವರಿಗೆ ಊಟದ ವ್ಯವಸ್ಥೆ ಮಾಡಿ ಹೊಸಕೋಟೆ ನಗರದ ಅವಿಮುಕ್ತಶ್ವರಸ್ವಾಮಿ, ಆಂಜಿನೇಯಸ್ವಾಮಿ, ಶಾರದಾಂಭೆ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದಿದ್ದೇನೆ. ನನ್ನ 72ವರ್ಷಗಳಲ್ಲಿ ಒಳ್ಳೆಯದು ಮತ್ತು ಕೆಟ್ಟದನ್ನು ನೋಡಿದ್ದೇನೆ. ಎಲ್ಲಾ ಏಳು ಬಿಳುಗಳನ್ನು ರಾಜಕೀಯದಲ್ಲೂ ನೋಡಿದ್ದೇನೆ. ಹೊಸಕೋಟೆ ತಾಲೂಕಿನಲ್ಲಿ 20 ವರ್ಷಗಳಲ್ಲಿ ಸೇವೆ ಸಲ್ಲಿಸಿದ್ದೇನೆ. ರಾಜ್ಯದಲ್ಲಿ ಎಂಟಿಬಿ ನಾಗರಾಜ್ ಯಾರು ಎಂದು ಗುರ್ತಿಸಿದ್ದು ಹೊಸಕೋಟೆ ತಾಲ್ಲೂಕು ರಾಜಕೀಯದಲ್ಲಿ ಸೋಲು ಗೆಲುವು ಇದ್ದಿದ್ದೆ. ನಾನು ಈ ತಾಲೂಕಿನಲ್ಲಿ ಸತತವಾಗಿ ಜನರ ಸೇವೆ ಮಾಡಲು ನಾನು ರಾಜಕೀಯಕ್ಕೆ ಬಂದಿದ್ದು, ಹಣ ಆಸ್ತಿ ಮಾಡಲು ನಾನುಬಂದವನಲ್ಲ. ಬಡವರ ಸೇವೆ ಮಾಡಲು ನಾನು ಬಂದಿದ್ದು ನಾನು ಬಿಜೆಪಿಗೆ ಹೋಗಲು ಕುಮಾರಸ್ವಾಮಿ ನಮ್ಮ ಕ್ಷೇತ್ರಕ್ಕೆ ಸಮ್ಮಿಶ್ರ ಸರ್ಕಾರ ಇದ್ದಾಗ ಸ್ಪಂದಿಸದೆ ಇದ್ದರಿಂದ ನಾನು ಪಕ್ಷ ಬಿಡಬೇಕಾಯಿತು. ಕಳೆದ 23ರ ವಿಧಾನಸಭಾ ಚುನಾವಣೆಯಲ್ಲಿ ಒಂದು ಲಕ್ಷ ಎರಡು ಸಾವಿರ ಮತಗಳಿಸಿದ್ದೇನೆ. ಆದರೆ, ಒಂದು ಸಮುದಾಯ ಹೆಚ್ಚಿನ ಮತ ನೀಡದ ಕಾರಣ ನನ್ನ ಸೋಲಾಯಿತು. ಮುಂದಿನ ದಿನಗಳಲ್ಲಿ ಎಲ್ಲರು ಒಗ್ಗಟ್ಟಾಗಿ ಕೆಲಸ ಮಾಡೋಣ . ತಾಲೂಕಿನ ಅಭಿವೃದ್ಧಿ ಮಾಡೋಣ ಎಂದರು. ಹುಲ್ಲೂರು ಸಿ ಮಂಜುನಾಥ್, ಕಿರಣ್ ಕುಮಾರ್, ವೈ.ಎಸ್.ಎಂ ಮಂಜುಗೌಡ ರವರು ಎಂಟಿಬಿ ನಾಗರಾಜ್ ರವರಿಗೆ ಬೆಳ್ಳಿ ಖಡ್ಗ ನೀಡಿ ಅಭಿನಂದಿಸಿದರು. ಕರುಣೆಗೋಡೆಯ ಚೇತನ್ ರವರ ನೇತೃತ್ವದಲ್ಲಿ ಸೇಬು ಹಣ್ಣಿನ ಬೃಹತ್ ಗಾತ್ರದ ಹಾರ ಹಾಕಿ ಶುಭ ಕೋರಿದರು. ಯುವ ಮುಖಂಡ ಬೀರೇಶ್ ರವರ ನೇತೃತ್ವದಲ್ಲಿ ಬೃಹತ್ ಆಟೋ ರ್ಯಾಲಿ ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ಹುಲ್ಲೂರು ಸಿ ಮಂಜುನಾಥ್, ನಗರಸಭೆ ಅಧ್ಯಕ್ಷ ಡಿ.ಕೆ. ನಾಗರಾಜ್‌, ಮುಖಂಡರುಗಳಾದ ಹುಲ್ಲೂರು ಕಿರಣ್‌ ಕುಮಾರ್, ವೈ ಎಸ್ ಎಂ ಮಂಜುಗೌಡ ಅಬಕಾರಿ ಶ್ರೀನಿವಾಸಯ್ಯ,ರಾಮಾಂಜಿನಿ,ಅರುಣ್ ಕುಮಾರ್,ಕೋಡಿಹಳ್ಳಿ ಜನಾರ್ದನ್ ಗೌಡ, ಶೌರತ್, ದೂಡ್ಡಮನೆ ಲಿಂಗಾಪುರ ಮಂಜುನಾಥ್,ಚೀಮಂಡಳಿ ಮಂಜಣ್ಣ,ನಿತಿನ್, ದೇವರಾಜು, ಗಂಗರಾಜು, ಬಿ.ನಾರಾಯಣಸ್ವಾಮಿ, ನವೀನ್, ಅತ್ತಿವಟ್ಟ ನಾಗೇಶ್, ಜಿಕೆಬಿ ಕಾಂತರಾಜು, ಸೇರಿದಂತೆ ಮುಖಂಡರುಗಳು, ಕಾರ್ಯಕರ್ತರು, ಅಭಿಮಾನಿಗಳು ಹಾಜರಿದ್ದರು.

ಬೃಹತ್ ಆಟೋರ್ಯಾಲಿ,ಬೃಹತ್ ಸೇಬುಹಾರ,ಬೆಳ್ಳಿಖಡ್ಗ ಉಡುಗೊರೆ ನೀಡಿ ಎಂಟಿಬಿ ನಾಗರಾಜ್ ರವರ ಹುಟ್ಟುಹಬ್ಬ ಸಂಭ್ರಮದಿಂದ ಆಚರಣೆ ಹೊಸಕೋಟೆ : ತಾಲ್ಲೂಕಿನ ಮಾಜಿ ಸಚಿವರು ಹಾಲಿ ವಿಧಾನ ಪರಿಷತ್ ಸದಸ್ಯರಾದ ಎಂಟಿಬಿ ನಾಗರಾಜ್ ರವರು 73ನೇ ವಸಂತಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಹೊಸಕೋಟೆ ಬಿಜೆಪಿ ಮುಖಂಡರು…

ಸುದ್ದಿಮನೆಯಿಂದ ಬೆಳೆದ ಶಾಸಕರು
ಮಾಧ್ಯಮ ಸಂಯೋಜಕರುಗಳಿಗೆ
ಕೆಯುಡಬ್ಲ್ಯೂಜೆ ಅಭಿನಂದನೆ

ಬೆಂಗಳೂರು:ಮಾಧ್ಯಮ ಕ್ಷೇತ್ರದಲ್ಲಿದ್ದು ಶಾಸಕರಾದ ರವಿಕುಮಾರ್ ಗೌಡ ಗಣಿಗ ಮತ್ತು ಪ್ರದೀಪ್ ಈಶ್ವರ್ ಹಾಗೂ ಮಾಧ್ಯಮ ಸಂಯೋಜಕರಾಗಿರುವ ವೃತ್ತಿ ಬಾಂಧವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ವತಿಯಿಂದ ಗೌರವಿಸಲಾಯಿತು. ಸುದ್ದಿಮನೆಯಿಂದ ವಿಧಾನಸೌದದ ವರೆಗೆ ಕಾರ್ಯಕ್ರಮದಡಿ ಏರ್ಪಡಿಸಿದ್ದಅಭಿನಂದನಾ ಸಮಾರಂಭದಲ್ಲಿ ಮಾತನಾಡಿದಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ…

ಮಣಿಪುರ ಘಟನೆ ಖಂಡಿಸಿ ಪ್ರತಿಭಟನೆ

ಚಿಕ್ಕಬಳ್ಳಾಪುರ: ಮಣಿಪುರದಲ್ಲಿ ಮಹಿಳೆಯರಿಬ್ಬರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿರುವ ಘಟನೆಯನ್ನು ಖಂಡಿಸಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಕೆವಿಎಸ್, ರೈತ ಸಂಘದ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು. ಎಲ್ಲ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು.ರೈತ ಸಂಘದ ಸುಷ್ಮಾ ಶ್ರೀನಿವಾಸ್ ಮಾತನಾಡಿ…